ಪೋಸ್ಟ್‌ಗಳು

Tulasi Das ಲೇಬಲ್ ಜೊತೆಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತಿದೆ

ತುಲಸೀದಾಸರ ದ್ವಿಪದಿಗಳು - 2

ಇಮೇಜ್
ತುಲಸೀದಾಸರ ದ್ವಿಪದಿಗಳು - 2  ಸಿ. ಪಿ. ರವಿಕುಮಾರ್  ಭಯ-ಲೋಭಗಳಿಂದ ಸವಿಮಾತಾಡಿದರೆ ವೈದ್ಯನೂ ಮಂತ್ರಿಯೂ ಗುರುವೂ   ನಿಶ್ಚಿತವಾಗಿ ರಾಜ್ಯವೂ ದೇಹ ಧರ್ಮಗಳು ಬೇಗ ನಾಶವಾಗುವುವು ಇದರ ಅರ್ಥವನ್ನು ಇನ್ನೂ ಬಿಡಿಸಿ ಹೇಳಬೇಕೆಂದರೆ ಹೀಗೆ : ಯಾವಾಗ ರಾಜ್ಯದ ಮಂತ್ರಿಯು ಭಯ ಅಥವಾ ಲೋಭದಿಂದ ರಾಜನಿಗೆ ನಿಜಾಂಶದ ಬದಲು ರಾಜ್ಯದಲ್ಲಿ ಎಲ್ಲವೂ ಚೆನ್ನಾಗಿದೆ ಎಂದು ಸುಳ್ಳು ಹೇಳುತ್ತಾನೋ ಆಗ ರಾಜ್ಯ ನಾಶದ ದಾರಿ ಹಿಡಿಯುತ್ತದೆ. ಯಾವಾಗ ರೋಗಿಗೆ ವೈದ್ಯನು ಲೋಭದಿಂದ ನಿಜವಾದ ಕಾಯಿಲೆಯನ್ನು ತಿಳಿಸದೆ ಎಲ್ಲವೂ ಸೌಖ್ಯವೆಂದು ಸವಿಮಾತಾಡುತ್ತಾನೋ ಆಗ ರೋಗಿಯ ದೇಹ ನಾಶವಾಗತೊಡಗುತ್ತದೆ. ಯಾವಾಗ ಗುರುವಾದವನು ಶಿಷ್ಯರ ತಪ್ಪುಗಳನ್ನು ತಿದ್ದದೇ ಅವರನ್ನು ಸ್ವಾರ್ಥಕ್ಕಾಗಿ ಹೊಗಳುತ್ತಾನೋ, ಆಗ ಧರ್ಮವು ನಾಶವಾಗುತ್ತದೆ. ತುಲಸಿ, ಹೊಂದಬಯಸುವೆಯಾ ಬೆಳಕು, ಹೊರಗಲ್ಲದೆ ಒಳಗೂ?   ನಾಲಗೆಯ ಹೊಸ್ತಿಲ ಮೇಲೆ ರಾಮನಾಮದ ಮಣಿದೀಪ ಬೆಳಗು ತಾತ್ಪರ್ಯ: ನಾಲಗೆಯ ಮೇಲೆ ರಾಮನಾಮವಿದ್ದರೆ ಹೊಸ್ತಿಲ ಮೇಲೆ ದೀಪವಿಟ್ಟಂತೆ (ಮನದ) ಒಳಗನ್ನೂ ಹೊರಗನ್ನೂ ಬೆಳಗುತ್ತದೆ. ರಾಮನ ಹೆಸರನ್ನು ಕೇಳಿದವರಿಗೂ ಹೇಳಿದವರಿಗೂ ಬೆಳಕಾಗುತ್ತದೆ. ಯಾರು ಪಡೆಯುತ್ತಾರೋ ಕೀರ್ತಿ ಪರರ ಕೀರ್ತಿಗೆ ಮಾಡಿ ಘಾಸಿ ಅವರ ಮುಖಕ್ಕೆ ಹತ್ತುತ್ತದೆ ಎಷ್ಟು ತೊಳೆದರೂ ಹೋಗದ ಮಸಿ ತಾತ್ಪರ್ಯ: ಸ್ವಂತ ಸಾಧಿಸಲು ಸಾಧ್ಯವಾಗದವನು ಇನ್ನೊಬ್ಬನ ಕೀರ್ತಿಗೆ ಧಕ್ಕೆ ತರುವ ಮೂಲಕ ಪಡ...

ತಪ್ಪು ಹೆಜ್ಜೆ ಇಟ್ಟು ನಡೆದ ಬಾಲ ರಾಮಚಂದ್ರ!

ಇಮೇಜ್
ಕವಿತೆ ಓದುವ ಮುನ್ನ ... ಕನ್ನಡದಲ್ಲಿ ಪುರಂದರದಾಸರು ಹೇಗೆ ಕೃಷ್ಣನ ಬಾಲ್ಯವನ್ನು ನವಿರು ಹಾಸ್ಯದಿಂದ ಚಿತ್ರಿಸಿದ್ದಾರೋ ಅದೇ ಬಗೆಯ ನವಿರು ಹಾಸ್ಯವನ್ನು ತುಲಸೀದಾಸರ ಈ ಗೀತೆಯಲ್ಲಿ ಕಾಣಬಹುದು. ರಾಮನ ಬಾಲ್ಯವನ್ನು ಕವಿ ವರ್ಣಿಸುತ್ತಿದ್ದಾನೆ. ಕವಿಯ ಒಳಗಣ್ಣಿಗೆ ಮಗು ಶ್ರೀರಾಮನು ತಪ್ಪು ಹೆಜ್ಜೆ ಇಡುತ್ತಾ ನಡೆಯಲು ಕಲಿಯುವ ಚಿತ್ರ ಗೋಚರಿಸುತ್ತಿದೆ. ಹಾಗೆ ನಡೆಯುವಾಗ ಅವನ ಪುಟ್ಟ ಕಾಲಿಗೆ ಕಟ್ಟಿದ ಗೆಜ್ಜೆಯ ಘಲ್ ಘಲ್ ಸದ್ದು ಕವಿಯ ಕಿವಿಗೆ ಕೇಳುತ್ತಿದೆ. ನಡೆಯುವ ರಭಸದಲ್ಲಿ ರಾಮ ಧೊಪ್ಪನೆ ಬಿದ್ದಾಗ ಅವನತ್ತ ತಾಯಿ-ತಂದೆಯರು ಧಾವಿಸಿ ಬರುತ್ತಾರೆ. ರಾಮನು ಪುತ್ರಕಾಮೇಷ್ಟಿ ಯಾಗವನ್ನೇ ಮಾಡಿ ಪಡೆದ ಪುತ್ರ! ಅಯ್ಯೋ, ಮಗುವಿಗೆ ಏನಾಯಿತೋ ಎಂದು ದಶರಥ ಪರಿತಪಿಸುತ್ತಾನೆ! ತಂದೆ ತಾಯಿ ಹೀಗೆ ಕಂಗಾಲಾದಾಗ ಮಗುವೂ ಪೆಚ್ಚಾಗಿ ಅಳುತ್ತದೆ! ಕವಿಯ ಕಲ್ಪನೆಯಲ್ಲಿ ಸಾಕ್ಷಾತ್ ಶ್ರೀರಾಮಚಂದ್ರನೇ ಅಳುತ್ತಿದ್ದಾನೆ! ತಂದೆ ತನ್ನ ಉತ್ತರೀಯದ ಸೆರಗಿನಿಂದಲೇ ಧೂಳನ್ನು ಝಾಡಿಸಿ ಒರೆಸಿ ಮಗುವಿಗೆ ಪರಿಪರಿಯಾಗಿ ಸಮಾಧಾನ ಮಾಡುತ್ತಿದ್ದಾನೆ! ಗಲ್ಲ ನೇವರಿಸಿ ಕೂದಲು ಸರಿಮಾಡಿ ಅಳಬಾರದೆಂದು ಗೋಗರೆಯುತ್ತಿದ್ದಾನೆ! ಈ ಬಗೆಯ ಕಕ್ಕುಲತೆಯಿಂದ ಸಮಾಧಾನಗೊಂಡ ಮಗುವಿನ ತುಟಿಯಲ್ಲಿ ಕೊನೆಗೂ ನಗು ಅರಳುತ್ತದೆ. ಜೇನು ಸುರಿಯುವಂತೆ ತೋರುವ ಹವಳದಂಥ ತುಟಿಗಳಿಂದ ಜೇನಿನಷ್ಟೇ ಸವಿಯಾದ ತೊದಲು ಮಾತುಗಳನ್ನು ಕೇಳಿ ದಶರಥ-ಕೌಸಲ್ಯೆ ಮುಗ್ಧರಾಗಿದ...

ತುಲಸೀದಾಸರ ದ್ವಿಪದಿಗಳು

ಇಮೇಜ್
ಸಿ.ಪಿ. ರವಿಕುಮಾರ್   ವಾಲ್ಮೀಕಿ ರಾಮಾಯಣವನ್ನು ಅವಧಿ ಭಾಷೆಯಲ್ಲಿ "ಶ್ರೀರಾಮಚರಿತಮಾನಸ" ಎಂಬ ಗ್ರಂಥದ ರೂಪದಲ್ಲಿ ಪುನರ್ಸೃಷ್ಟಿಸಿ ತುಲಸೀದಾಸರು ಭಾರತೀಯ ಸಾಹಿತ್ಯಲೋಕದಲ್ಲಿ ಮೇರುವಿನಂತೆ ನಿಂತಿದ್ದಾರೆ.  ರಾಮನ ಚರಿತ್ರೆಯನ್ನು ಜನರ ಆಡುಭಾಷೆಯಲ್ಲಿ ಮನೋಹರವಾಗಿ ಸೃಷ್ಟಿಸಿ ಭಕ್ತಿಪಂಥಕ್ಕೆ ಅಮೂಲ್ಯವಾದ ಕಾಣಿಕೆಯನ್ನು ತುಲಸೀದಾಸರು ನೀಡಿದರು. ರಾಮಚರಿತ ಮಾನಸದ ಪಂಕ್ತಿಗಳು ಇಂದು ನಮ್ಮ ಸಂಸ್ಕೃತಿಯ ಭಾಗಗಳಾಗಿ ಹೋಗಿವೆ.  ಈ ಗ್ರಂಥವನ್ನು (ಕನ್ನಡದಲ್ಲಿ ಕುಮಾರವ್ಯಾಸನ ಭಾರತವನ್ನು ಪ್ರತಿನಿತ್ಯ ಓದುತ್ತಿದ್ದ ಹಾಗೆ) ಉತ್ತರಭಾರತದಲ್ಲಿ ಇಂದಿಗೂ ಪ್ರತಿನಿತ್ಯ ಪಠಿಸುವ ಪದ್ಧತಿ ಇದೆ.   ಅವರು ರಚಿಸಿದ "ಶ್ರೀರಾಮಚಂದ್ರ ಕೃಪಾಳು ಭಜಮನ" ಎಂಬ ರಾಮಸ್ತುತಿ ಹಾಗೂ "ಹನುಮಾನ್ ಚಾಲೀಸಾ"  ಪ್ರತಿದಿವಸವೂ ಕೋಟ್ಯಾಂತರ ತುಟಿಗಳ ಮೇಲೆ ಇಂದಿಗೂ ನಲಿದಾಡುತ್ತವೆ.  ಅವರು ಪ್ರಾರಂಭಿಸಿದ "ರಾಮಲೀಲಾ" ಎಂಬ ಜಾನಪದ ನಾಟಕ ಪರಂಪರೆ ಉತ್ತರಭಾರತದಲ್ಲಿ ಇಂದಿಗೂ ಜೀವಂತವಾಗಿದೆ. ಗೋಸ್ವಾಮಿ ತುಲಸೀದಾಸರನ್ನು ವಾಲ್ಮೀಕಿಯ ಅವತಾರವೆಂದು ನಂಬುತ್ತಾರೆ. ಶಿವನು ಪಾರ್ವತಿಗೆ "ಕಲಿಯುಗದಲ್ಲಿ ವಾಲ್ಮೀಕಿಯು ಅವತಾರ ತಳೆದು ತುಲಸಿದಾಸ ಎಂಬ ಹೆಸರಿನಲ್ಲಿ ಜನರ ಭಾಷೆಯಲ್ಲಿ ರಾಮನ ಕಥೆಯನ್ನು ರಚಿಸುತ್ತಾನೆ" ಎಂದು ಭವಿಷ್ಯ ನುಡಿದನಂತೆ. ಇದಕ್ಕೆ ಸಂಬಂಧಿಸಿದ ಇನ್ನೊಂದು ಕಥೆ ಹೀಗಿದೆ. ಹನುಮಂತನು ...