ಪೋಸ್ಟ್‌ಗಳು

Animal ಲೇಬಲ್ ಜೊತೆಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತಿದೆ

ಗೋಸುಂಬೆಯ ಸಮಸ್ಯೆ

ಇಮೇಜ್
  ಗೋಸುಂಬೆಗಳು ಬಣ್ಣ ಬದಲಾಯಿಸುತ್ತವೆ ಎಂದು ಕೇಳಿದ್ದೇನೆ, ನೋಡಿಲ್ಲ. ಮೊನ್ನೆ ಒಂದು ಗೋಸುಂಬೆ ಸಿಕ್ಕಿತು. ಅದು ಯಾಕೋ ಬಹಳ ಬೇಸರ ಮಾಡಿಕೊಂಡು ಒಂದು ಕಲ್ಲಿನ ಮೇಲೆ ಮುಖ ತಗ್ಗಿಸಿಕೊಂಡು ಪಿಳಿಪಿಳಿ ಕಣ್ಣು ಬಿಡುತ್ತಾ ಕೂತಿತ್ತು.  ಯಾಕೆ ಹಾಗೆ ಕೂತೆ? ಅಂಥದ್ದೇನು ಆಯಿತು? ಎಂದು ಕೇಳಿದೆ. ಡಿಸ್ಟರ್ಬ್ ಮಾಡಬೇಡ, ನಾನು ಧ್ಯಾನ ಮಾಡುತ್ತಿದ್ದೇನೆ ಎಂದಿತು. ಆದರೆ ನಂತರ ಅದೇ ಮೌನ ಮುರಿದು ಮಾತಾಡಿತು. ಹೋಗಲಿ ಬಿಡು, ನನ್ನಿಂದ ಆಗೋದಿಲ್ಲ ಎಂದು ನಿಟ್ಟುಸಿರು ಬಿಟ್ಟಿತು. ಏನು, ಧ್ಯಾನ ಮಾಡೋದು ಆಗೋದಿಲ್ಲವಾ? ನನಗೂ ಕಷ್ಟ. ಟಿವಿ ಮುಂದೆ ಕೂತು ಅಲ್ಲಿ ಹೇಳಿಕೊಡೋ ಧ್ಯಾನ ಮಾಡಲು ಪ್ರಯತ್ನಿಸಿದರೆ ನಡುನಡುವೆ ಜಾಹೀರಾತು ಬರುತ್ತವೆ. ಧ್ಯಾನ ಎಲ್ಲಾ ಅಲ್ಲಿಗೆ ಖಲ್ಲಾಸ್ ಎಂದು ನನ್ನ ಪದಪ್ರಯೋಗಕ್ಕೆ ನಾನೇ ಖುಷಿ ಪಟ್ಟೆ.  ಇಲ್ಲ, ನಾನು ಧ್ಯಾನ ಮಾಡುತ್ತಿರಲಿಲ್ಲ. ಬಣ್ಣ ಬದಲಾಯಿಸಲು ಪ್ರಯತ್ನ ಪಡುತ್ತಿದ್ದೆ. ಈಗ ಅದೆಲ್ಲ ನಮ್ಮ ಕೈಯಲ್ಲಿ ಆಗುತ್ತಲೇ ಇಲ್ಲ. ಮುಂಚೆ ಯಾವ ಕಲ್ಲಿನ ಮೇಲೆ ಕೂಡುತ್ತಿದ್ದೇವೋ ಅದೇ ಬಣ್ಣಕ್ಕೆ ತಿರುಗಿ ನಮ್ಮನ್ನು ನಾವು ರಕ್ಷಣೆ ಮಾಡಿಕೊಳ್ಳುತ್ತಾ ಇದ್ದೆವು. ಈಗ ಅದೆಲ್ಲ ಸಾಧ್ಯ ಆಗುತ್ತಿಲ್ಲ.  ಓಹ್, ಇದು ಜಾಗತಿಕ ಸಮಸ್ಯೆಯಾ? ಯಾವಾಗಿನಿಂದ? ನಾನು ಬೇಕಾದರೆ ಟಿವಿ ರಿಪೋರ್ಟರಿಗೆ ಹೇಳುತ್ತೇನೆ. ಅವನು ಇದನ್ನು ಕವರ್ ಮಾಡಬಹುದು. ಬೇಡ, ಬೇಡ. ಈ ಪ್ರಚಾರದಿಂದಲೇ ನಮ್ಮ ಶಕ್ತಿ ಕುಂದಿದ್ದು.  ಏನೋ ಬಹಳ ವಿಚಿತ್ರ...

ಪ್ರಾಣಿಗಳಿಗೆ ಚಿರಂತನ ಮೃತ್ಯುಕೂಪ

ಇಮೇಜ್
ಮೂಲ: ಲೂಯಿ ಕ್ವಿಂಟಾಯ್ಸ್ (ಪೋರ್ಚುಗಲ್) ಕನ್ನಡಕ್ಕೆ: ಸಿ. ಪಿ. ರವಿಕುಮಾರ್    "ಪ್ರಾಣಿಗಳಿಗೆ ಚಿರಂತನ ಮೃತ್ಯುಕೂಪ." ನನಗೆ ಪ್ರಾಪ್ತವಾದ ನೆನಪಿನಲ್ಲಿ ವ್ಯಾಪಿಸಿದೆ ಬಲಿದಾನ.  ಅಮ್ಮ ನನ್ನ ಕೈ ಹಿಡಿದು ಕರೆದೊಯ್ಯುತ್ತಾಳೆ.  ನಾವು ವಧಾಸ್ಥಾನದ ಅಂಚಿಗೆ ಬಂದಿದ್ದೇವೆ.  ಜೀವನದ ಕೊನೆಯ ಘಳಿಗೆಯನ್ನು ಮುಟ್ಟಿದ ಕೋಳಿಗಳ ಸದ್ದು.  ಮುಗ್ಧತೆಯಿಂದ ಅವು ಕೊಕ್ ಕೊಕ್ ಎನ್ನುತ್ತಿವೆ.  ಅಲ್ಲೇ ಬಿದ್ದಿರುವ ಹೆಣಗಳ ದೃಶ್ಯದಲ್ಲಿ ಹಿಂಸೆ ಮಡುಗಟ್ಟಿದೆ,  ಎಲ್ಲೆಡೆ ಹರಡಿಕೊಂಡಿದೆ ಚೀರುತ್ತಿರುವ ಕರುಳುಗಳ ದುರ್ವಾಸನೆ.  ಕ್ರೋಧ ಮತ್ತು ಶಬ್ದಗಳು ಕುಸಿದುಬಿದ್ದು ಕೊಳೆಯುತ್ತಿವೆ.  ವಧಾಸ್ಥಾನದ ಅಂಚಿನಲ್ಲಿವೆ ಕಟ್ಟೆಗಳು, ಅಲ್ಲಿ ಕೇಳುತ್ತವೆ ಸತ್ಯ ಮತ್ತು ವ್ಯಾಪಾರದ ಕೂಗುಗಳು.  ದೊಡ್ಡ ಉಕ್ಕಿನ ಕೊಕ್ಕೆಗೆ ತೂಗಿಹಾಕಿದ  ದಪ್ಪನೆಯ ಮಾಂಸ ಮೆಲ್ಲನೆ ಅಲ್ಲಾಡುತ್ತದೆ.  ನೆಂದ ಪುಕ್ಕಗಳು ಎಲ್ಲಾ ಕಡೆ ಚೆಲ್ಲಿವೆ.  ಶಿರಚ್ಛೇದವಾದ ಹುಂಜವೊಂದು ಜಗತ್ತನ್ನು ತಬ್ಬಿಕೊಂಡಿದೆ.  ಅಂಚಿನಲ್ಲಿರುವ ಹಳ್ಳದಲ್ಲಿ ಕೂಡಿಕೊಳ್ಳುವ ರಕ್ತ  ಹೋಗಿ ಸೇರಿಕೊಳ್ಳುತ್ತದೆ ಎಲ್ಲೋ ದೂರ - ನನ್ನ ಕಲ್ಪನೆಯಲ್ಲಿ ಬೇರೊಂದು ದೇಶದಷ್ಟು ದೂರ.  ಕರುಳಿನ ವೇದನೆ ಒಂದಷ್ಟು ಕಡಿಮೆಯಾದಂತೆ ತೋರುತ್ತದೆ.  ಮಂದಿ ತಣ್ಣಗೆ ಕೂಡುತ...

ಮಹಾಹಸಿವು

ಇಮೇಜ್
ಮೂಲ ಕವಿತೆ: ಸಾಂಗ್ ಕ್ಷಿಯಾವ್ ಕ್ಷಿಯಾನ್  (ಚೈನಾ) ಕನ್ನಡಕ್ಕೆ: ಸಿ. ಪಿ. ರವಿಕುಮಾರ್  ಉತ್ತರ ಚೈನಾದ ಮಹಾಮಾರ್ಗಗಳ ಮೇಲೆ  ಓಡಾಡುವ ಟ್ರಕ್ಕುಗಳಲ್ಲಿ   ದಕ್ಷಿಣದ ಗ್ವಾಂಗ್ ಷೌ ಪ್ರಾಂತಕ್ಕೆ ಸಾಗಿಸಲಾಗುತ್ತವೆ - ಹುನಾನ್ ಪ್ರಾಂತದಿಂದ ಬಂದ ಕೋಳಿ, ಜಿಯಾಂಗ್ ಷಿಯಿಂದ ಬಂದ ದನಗಳು,  ಮತ್ತು ಸಿಚುಆನ್ ಪ್ರಾಂತದಿಂದ ಬಂದ ಹಂದಿಗಳನ್ನು.  ಅಲ್ಲಿರುವ ಪರ್ಲ್ ನದಿಯ ತಟವು  ತಳವಿರದ ಪೀಪಾಯಿಯಂತೆ  ಅಲ್ಲಿಂದ ಇಲ್ಲಿಂದ ಬಂದ ಪ್ರಾಣಿಗಳನ್ನು  ನುಂಗಿಬಿಡುತ್ತದೆ ಒಂದೇ ತುತ್ತಿಗೆ.    ನುಂಗುತ್ತಲೇ ಇರುತ್ತದೆ ನಿರಂತರವಾಗಿ  ಬಾಯಿ ಮುಚ್ಚದೇ.  ಮಹಾಮಾರ್ಗಗಳನ್ನೇ ಮಾಡಿಕೊಂಡು ಹೊಟ್ಟೆ.  ಗೊತ್ತಿರುವುದೇ ಒಂದು ಅದಕ್ಕೆ, ನುಂಗು, ನುಂಗು, ನುಂಗು.  ದಟ್ಟ ಹೊಗೆಯ ಹೊದ್ದಿಕೆಯ ಹಿಂದೆ ನಾವು ಜೀರ್ಣಿಸಿಕೊಳ್ಳುತ್ತೇವೆ ಜೀರ್ಣಿಸಿಕೊಳ್ಳುತ್ತಲೇ ಇರುತ್ತೇವೆ, ಕೆಟ್ಟಹಸಿವು ನಮಗೂ.  ಪ್ರಾಣಿಗಳನ್ನೆಲ್ಲಾ ತಿಂದುಹಾಕಿದ ನಂತರ ಮುಂದೇನು? ಆಗ ನಾವು ಕೊಲ್ಲೋಣ ಕಾರುಗಳನ್ನು, ಏಡಿ ಮೀನುಗಳಂತೆ ಅವುಗಳನ್ನು ಗಟ್ಟಿಯಾಗಿ ಹಿಡಿದು, ಅದರ ಬೆಂಬದಿಯ ಚಿಪ್ಪನ್ನು ಕಿತ್ತು  ಹೀರೋಣ ಒಳಗಿರುವ ಘೃತವನ್ನು.