ಪೋಸ್ಟ್‌ಗಳು

Javed Akhtar ಲೇಬಲ್ ಜೊತೆಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತಿದೆ

ಹೊನಲು

ಮೂಲ ಹಿಂದಿ ಗಜಲ್ : ಜಾವೇದ್ ಅಖ್ತರ್ ಕನ್ನಡಕ್ಕೆ: ಸಿ.ಪಿ. ರವಿಕುಮಾರ್  ಕೆಲವೊಮ್ಮೆ ಅಳಲು, ಕೆಲವೊಮ್ಮೆ ನಗೆಮುಗುಳು  ಕ್ಷಣ ನಿಲ್ಲದೆ ಹರಿಯುತ್ತಿದೆ ಜೀವನದ ಹೊನಲು  ಕಂಡದ್ದು  ಏನು  ಕಣ್ಣೋ, ಇಲ್ಲ ಸ್ವಪ್ನ ಶೃಂಖಲೆಯೋ  ಕೇಳಿದ್ದು ಏನು ದನಿಯೋ, ಇಲ್ಲ  ರಾಗಿಣಿಯ ಹೊನಲೋ  ಹೃದಯ ಬರಡಾಗಿ ಹಾರುತ್ತಿದೆ ಬಿರುಗಾಳಿಗೆ ಧೂಳು  ಹರಿಯುತ್ತಿತ್ತು ಹಿಂದೊಮ್ಮೆ ಇಲ್ಲಿ  ಪ್ರೇಮದ ಹೊನಲು  ಕಿರಣಗಳಲ್ಲಿ ಹೊಳೆವ ಅಲೆಯೋ ಇಲ್ಲ ಅಲೆಗಳಲ್ಲಿ ಹೊಳೆವ ಕಿರಣವೋ  ಹೊನಲಲ್ಲಿ ಹೊಳೆವ  ಬೆಳದಿಂಗಳೋ  ಇಲ್ಲ ಬೆಳ್ದಿಂಗಳದೇ ಹೊನಲೋ  Kannada translation by C.P. Ravikumar  of a Gazal by Javed Akhtar

ನೀವೂ ಬನ್ನಿ, ನಮಗೂ ನೀಡುತ್ತಿರಿ ಆಹ್ವಾನ 

ಮೂಲ ಉರ್ದು ಗಜಲ್ : ಜಾವೇದ್ ಅಖ್ತರ್  ಕನ್ನಡಕ್ಕೆ: ಸಿ.ಪಿ. ರವಿಕುಮಾರ್  ನೀವೂ ಬನ್ನಿ! ಆಗಾಗ  ನಮಗೂ ನೀಡುತ್ತಿರಿ ಆಹ್ವಾನ  ಗೆಳೆತನವೇನೂ   ಅಪರಾಧವಲ್ಲ, ಬೆಳೆಸುತ್ತಿರಿ ಗೆಳೆತನ ! ನೀವು ಕುಡಿದರೂ ಹಾಲಾಹಲ, ಮಾಡಿಸಿ ಅನ್ಯರಿಗೆ  ಅಮೃತಪಾನ  ಗಾಯವಾದರೂ ಸಹಿಸಿಕೊಳ್ಳಿ ನೋವನ್ನು, ನಿಲ್ಲಿಸದಿರಿ ಗಾಯನ! ಕನ್ನ  ಹಾಕಿದೆ ಕಾಲ  ಜನರ ಆಕಾಂಕ್ಷೆಗಳಿಗೆ  ಕನಸು ಕಂಡರೆ ಹಂಚಿಕೊಳ್ಳಿ ಜನರೊಳಗೆ  ನಿಮ್ಮ ಮನದಾಳದಲ್ಲೂ ಇರಲೇಬೇಕೊಂದು ಚಹರೆ  ಬಿಡಿಸುತ್ತಿರಿ ಚಿತ್ರ, ಪೂರ್ಣವಾಗುವುದು ಇಂದಲ್ಲ ನಾಳೆ  Kannada translation by C.P. Ravikumar of a Gazal by Javed Akhtar  

ನಿನ್ನನ್ನು ಕಂಡಾಗ

ಇಮೇಜ್
ಮೂಲ ಹಿಂದಿ ಕವಿತೆ (ಗಜಲ್): ಜಾವೇದ್ ಅಖ್ತರ್  ಕನ್ನಡಕ್ಕೆ: ಸಿ.ಪಿ. ರವಿಕುಮಾರ್  ನಿನ್ನನ್ನು ಕಂಡಾಗ ಮನದಲ್ಲಿ ಹೊಳೆದದ್ದು ಬಾಳು ಕಡುಬಿಸಿಲು, ನೀನು ದಟ್ಟ ನೆರಳು ಇಂದು ಮತ್ತೊಮ್ಮೆ ಬಯಕೆ ಹುಟ್ಟಿ ಎದೆಯೊಳಗೆ  ಹೃದಯಕ್ಕೆ ಮತ್ತೆ ಹೇಳಬೇಕಾಯ್ತು ತಿಳುವಳಿಕೆ  ನೀನು ತೆರಳಿದ ಬಳಿಕ ಯೋಚಿಸುವೆ ನಾನು  ಪಡೆದುದೇನನ್ನೋ ನಾನು ಕಳೆದುದೇನನ್ನು? ಗುನುಗಲಾರೆನೋ ನಾನಾವ ಗೀತೆಯನ್ನು ಕಾಲ ಹಾಡಿತೇಕೋ ಅಂಥ ರಾಗವನ್ನು  (ಈ ಕವಿತೆಯನ್ನು ಒಬ್ಬ ಪ್ರಸಿದ್ಧ ಗಜಲ್ ಗಾಯಕ ಹಾಡಿದ್ದಾರೆ ... ಯಾವ ಗಾಯಕ? ಯಾವ ಗೀತೆ?) Kannada translation by C.P. Ravikumar of a gazal by Javed Akhtar.