ಪೋಸ್ಟ್‌ಗಳು

P.B. Shelley ಲೇಬಲ್ ಜೊತೆಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತಿದೆ

ಓಜಿಮಾಂಡಿಯಾಸ್

ಇಮೇಜ್
ಓಜಿಮಾಂಡಿಯಾಸ್  ಮೂಲ ಕವಿತೆ - ಪಿ ಬಿ ಷೆಲ್ಲಿ ಕನ್ನಡಕ್ಕೆ - ಸಿ ಪಿ ರವಿಕುಮಾರ್  ದೂ ರದಾವುದೋ ಪುರಾತನ ನೆಲದಿಂದ ಊರುತ್ತಾ ಕೋಲನ್ನು ಬಂದ ಯಾತ್ರಿಕನೊಬ್ಬ ಅರುಹಿದನು - ಮುಂಡವಿಲ್ಲದ ಕಲ್ಲಿನ ದೊಡ್ಡ ಕಾಲುಗ- ಳೆರಡು ನಿಂತಿವೆ ಮರಳುಗಾಡಲ್ಲಿ; ಬದಿಯಲ್ಲಿ ಅರೆಬರೆ ಹೂತುಹೋದ ಭಗ್ನ ಮುಖದಲ್ಲಿ ಕೆರಳಿದೆ ಮುಂಗೋಪ, ತಿರುಚಿದ ತುಟಿಯಲ್ಲಿ ಮರಗಟ್ಟಿದೆ ಯಾವುದೋ ಆದೇಶ; ಶಿಲ್ಪಿ ಯಾರೋ ಗ್ರಹಿಸಿ ಸೆರೆ ಹಿಡಿದಿದ್ದಾನೆ ಕ್ರೂರ ಹೃದಯದ ಸೊಕ್ಕು; ಪೀಠದ ಮೇಲೆ ಬರೆದಿದೆ - "ಓ ನೋಡಿ, ನನ್ನ ಹೆಸರು ಓಜಿಮಾಂಡಿಯಾಸ್, ಅರಸರ ಅರಸ, ಇಗೋ ನಾನು ಸೃಷ್ಟಿಸಿದ ಸಾಮ್ರಾಜ್ಯ, ಹಿರಿಯರಸರೆಲ್ಲಾ ನೋಡಿ ಹಲುಬಿ!" ಬೇರೇನೂ ಉಳಿದಿಲ್ಲ ಮುರುಕಲು ಕಲ್ಲುಶಿಲೆ ಬಿಟ್ಟರೆ, ಮರಳು ಹರಡಿದೆ ಕಣ್ ದೃಷ್ಟಿ ಹರಿವವರೆಗೆ. (c) C.P. Ravikumar, 2014 Kannada Translation of 'Ozymandias' - English poem by P.B. Shelley