ಕೊರೋನಾ ಕೊರೋನಾ - ಭಾಗ ೨ (ಚುಟುಕಗಳು)
ಕನಕಾ ********* ಪ್ರತಿ ರಾಮನವಮಿಗೆ ಪಾನಕ ತಪ್ಪದೆ ಹಂಚುವಳು ಮಿಸ್ ಕನಕಾ ಈ ಸಲ ಯುಗಾದಿಗೇ ಏನು ಸ್ಫೂರ್ತಿ ಇವಳಿಗೆ ಹಂಚುತಿಹಳು ನೆಟ್ ಮೇಲೆ ಕೊರೋನಾ ಪ್ಯಾನಿಕ ಶಾರ್ವರಿ ******* ಓ ಸಂವತ್ಸರ ಶಾರ್ವರಿ! ಎಷ್ಟಂತಾ ಮಾಡೋದು ವರಿ? ಕೊರೊನಾ ಕೋವಿಡ್ ಮೂರನೇ ಹಂತ ಮುಗಿಯುವ ಮುನ್ನವೇ ಬಂತೇ ಹಂತಾ ತಿಳಿಸವರಿಗೆ, ವೀ ಆರ್ ಇನ್ ನೋ ಹರಿ! ಬೋರಸ್ ********** ಬಂತು ಕರೋನಾ ವೈರಸ್ ಮನೇಲಿರಿ ಅಂತ ಕೋರಸ್ ಲಾಕ್ ಡೌನ್ ಅಂತೆ ಕ್ಯಾನ್ಸಲ್ ಸಂತೆ ನ್ಯೂಸ್ ಚಾನೆಲ್ಸ್ ಡೋಂಟ್ ಬೋರಸ್ ಇಳಿಮುಖ *********** ಎಲ್ಲದರಲ್ಲೂ ಈಗ ಇಳಿಮುಖ ಎಂದು ಬೇಸರಿಸಿದರು ಶ್ರೀಮತಿ ರೇಖಾ ಹಾಕೋದು ಕೇಳಿದ್ದೆ ಲಾಕಪ್ನಲ್ಲಿ ಕೈದಿಗಳ್ನ ಅದಕ್ಕೂ ಸಂಚಕಾರ ತಂತು ಕರೋನಾ ಲಾಕಪ್ ಹೋಗಿ ಲಾಕ್ ಡೌನ್ ಬರಬೇಕಾ? ಮಾರ್ಚ್ ೨೨ - ಸಂಜೆ *********************** ಸಂಜೆ ಕೇಳಿದೆ ಇವಳನ್ನು "ಏನು, ತಿಂಡಿ ಮಾಡಿದ್ಯಾ?" ಪಾತ್ರೆ ಕುಕ್ಕುವ ಸದ್ದು! "ಏನೂ ಆಗಲಿಲ್ಲ ತಾನೇ ಸದ್ಯ?" ಮುಂದುವರೆಯಿತು ತಾಲಿ, ಜೊತೆಗೆ ಢಣಢಣಾ ಸದ್ದು ಅಬ್ಬಾ ಏನೋ ವಿಶೇಷವೇ ಇರಬಹುದೆಂದು ಖುದ್ದು ಹೋಗಿ ನೋಡಿದರೆ ಥಾಲೀ ಪೀಟ್ ಎಂಬ ರುಚಿಕರ ಖಾದ್ಯ! ಸಂಕಷ್ಟಿ ********* ಹೊರಗೆ ಹೋಗಲು ಸಂಕಷ್ಟ ಎದುರಾಗಿ ಮನೆಯಲ್ಲೇ ಗಣಪತಿಯ ಫೋಟೋಗೆ ಎರಗಿ ಅದೂ ಇಲ್ಲದಿದ್ದರೂ ಚಿಂತೆ ಇಲ್ಲ ಎಲ್ಲದಕ್ಕೂ ವಾಟ್ಸಾಪ್ ಇದೆಯಲ್ಲ ಭಜೇಹಂ ಶ್...