ಪೋಸ್ಟ್‌ಗಳು

ಮೇ, 2018 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ಹಿಮ

ಇಮೇಜ್
ಮೂಲ ಅಮೆರಿಕನ್ ಕವಿತೆ  - ಡೇವಿಡ್ ಬರ್ಮನ್  ಕನ್ನಡಕ್ಕೆ - ಸಿ. ಪಿ. ರವಿಕುಮಾರ್  ಹೊಲದ ಮೂಲಕ ಹಾದು ಹೋಗುತ್ತಿದ್ದೆ ತಮ್ಮ ಸೆತ್ ಜೊತೆ. ಹಿಮದಲ್ಲಿ ಮಕ್ಕಳು ನಿರ್ಮಿಸಿದ್ದ ದೇವತೆಗಳ ಮೂರ್ತಿಗಳ ಕಡೆ ಬೆರಳು ಮಾಡಿ ತೋರಿಸಿದೆ. ನಂತರ ಏನೆನ್ನಿಸಿತೋ ಅವನಿಗೆ ಹೀಗೆಂದೆ - "ಬಂದೂಕಿನಿಂದ ಹೊಡೆದು ಹಾಕಿದ್ದಾರೆ, ಕರಗಿ ಹೋಗುತ್ತಾರೆ ಕುಸಿದು ಬಿದ್ದಾಗ ನೆಲಕ್ಕೆ." ಗುಂಡಿಟ್ಟು ಕೊಂದವರು ಯಾರು ಎಂದು ಕೇಳಿದ. ಒಬ್ಬ ರೈತ, ಎಂದೆ.  ನಾವೀಗ ಸರೋವರದ ಮೇಲೆ ನಡೆಯುತ್ತಿದ್ದೆವು. ಮಂಜು ನೀರಿನ ಛಾಯಾಚಿತ್ರದಂತೆ ತೋರುತ್ತಿತ್ತು. ಯಾಕೆ ? ಅವನು ಕೇಳಿದ. ಯಾಕೆ ಗುಂಡಿಟ್ಟು ಕೊಂದಿದ್ದು? ಈ ಸಂಭಾಷಣೆ ಯಾವ ದಿಕ್ಕಿನಲ್ಲಿ ಸಾಗುತ್ತಿದೆಯೋ ತೋಚಲಿಲ್ಲ. ಆತನಿಗೆ ಸೇರಿದ ಜಮೀನಿನ ಮೇಲೆ ಇದ್ದರಲ್ಲ, ಅಂದೆ. ಹಿಮ ಸುರಿಯುವಾಗ ಹೊರಗಿನ ಜಗತ್ತು ಒಂದು ಕೋಣೆಯ ಹಾಗೆ ಕಾಣುತ್ತದೆ.  ಬೆಳಗ್ಗೆ ಪಕ್ಕದ ಮನೆಯವನೊಂದಿಗೆ ಉಭಯ ಕುಶಲೋಪರಿ ನಡೆಸಿದಾಗ ದೂರದಿಂದಲೇ ಕೂಗಿ ನಮ್ಮ ಧ್ವನಿಗಳು ಒಂದನ್ನೊಂದು ಸಮೀಪಿಸಿದಾಗ ಕೋಣೆಯ ಒಂದು ಗೋಡೆ ವಿಸ್ಫೋಟಿಸಿ ಪುಡಿಪುಡಿಯಾಗಿ ನೆಲಕ್ಕೆ ಉದುರಿತು.  ನಾವು ಮತ್ತೆ ತಲೆತಗ್ಗಿಸಿ ಹಿಮ ತೋಡುವುದನ್ನು ಮುಂದುವರೆಸಿದೆವು ಪಕ್ಕಪಕ್ಕದಲ್ಲೇ, ಮೌನವಾಗಿ ಕೆಲಸ ಮಾಡಿದೆವು.  ಅವರು ಯಾಕೆ ಅವನ ಜಮೀನಿನ ಮೇಲಿದ್ದರು? ಎಂದವನು ಕೇಳಿದ. ಕವಿತೆಯ ಸ್ವಾರಸ್ಯ: ನಮ್ಮ ಜಮೀನುಗಳ ನಡುವೆ ನಾವು ಹಾಕಿಕೊಂಡ ಗೆರೆಗಳನ್ನು

ಮಳೆಯಲ್ಲಿ ಪಯಣ - ಒಂದು ಗಜಲ್

ಇಮೇಜ್
ಸಿ.ಪಿ. ರವಿಕುಮಾರ್  ಮಳೆ ಬಂದರೆ ಕೊಳಕು ಕೆರೆಯಾಗುವ ರಸ್ತೆ ಮತದಾರರಿಗೆ ಹೇಳುತ್ತಿದೆ ತಡೆತಡೆದು ನಮಸ್ತೆ ತಟಸ್ಥವಾಗಿವೆ ಬಸ್ಸು ಮಿಸುಕಾಡವು ಕಾರು ಚಲಿಸುವ ಪ್ರಯಾಸ ದ್ವಿಚಕ್ರ ವಾಹನಗಳದ್ದು ಅಷ್ಟೇ ಅಲ್ಲೊಂದು ಮರ ಉರುಳಿದೆ ಇಲ್ಲೊಂದು ರೆಂಬೆ ಎಲ್ಲೆಡೆಗಿಂತ ಇಂದು ಸ್ವಲ್ಪ ಹೆಚ್ಚಿನ ಅವ್ಯವಸ್ಥೆ ಕುಟ್ಟುತ್ತಾರೆ ಹಾರ್ನ್ ಚಾಲಕರು ಏನೂ ತೋಚದಾದಾಗ ಹೆಚ್ಚು ಮುಲುಗದು ನಗರ (ಅವಳು ನಿತ್ಯಸಂತ್ರಸ್ತೆ) ರೇಡಿಯೋದಲ್ಲಿ ಅದೇ ಮುರುಕು ಸಂಗೀತ ನಿಮ್ಮ ಮತ ಅಮೂಲ್ಯವೆಂದು ಹಾಡಿ ನೆನಪಿಸುತ್ತೆ ಮೊಬೈಲ್ ಹಿಡಿದು ಕೈಯಲ್ಲಿ ಕುಳಿತಿರುವ ರವಿಗೆ ಅತಿಬಳಕೆಯಿಂದ ಕೈ ಹೆಬ್ಬೆರಳು ನೋಯುತ್ತೆ

ವೃಕ್ಷ - ಒಂದು ಕವಿತೆ

ಇಮೇಜ್
ಮೂಲ - ಜಾಯ್ಸ್ ಕಿಲ್ಮರ್  ಕನ್ನಡಕ್ಕೆ - ಸಿ. ಪಿ. ರವಿಕುಮಾರ್ ನನ್ನ ಕಣ್ಣಿಗಂತೂ ಬಿದ್ದಿಲ್ಲ ಇದುವರೆಗೆ ವೃಕ್ಷದಂತಹ ಒಂದು ಸುಕುಮಾರ ಕವಿತೆ ಹಸಿದ ಬಾಯಿಂದ ಕಚ್ಚಿಕೊಂಡಿಹುದು ವೃಕ್ಷ ಸವಿಯೂಡುವ ಭೂತಾಯಿಯ ಸಮೃದ್ಧ ವಕ್ಷ ದಿನವೆಲ್ಲ ಕಣ್  ಬಾನತ್ತ, ಭಗವಂತನ ವೀಕ್ಷಣೆ ಎಲೆ ತುಂಬಿದ ತೋಳುಗಳ ಮೇಲೆತ್ತಿ ಪ್ರಾರ್ಥನೆ ವೈಶಾಖದಲಿ ತರುವು ತಲೆಯಲ್ಲಿ ಮುಡಿಯುವುದು ಗೊರವಂಕ ಕಾಜಾಣ ಹಕ್ಕಿಗಳ ಗೂಡು ಯಾರ ವಕ್ಷಸ್ಥಳದಲ್ಲಿ ಹೊಳೆಯುವುದೋ ಹಿಮಮಣಿ ಯಾರನ್ನು ರಮಿಸುವಳೋ ವರ್ಷಋತುರಮಣಿ ಕವಿತೆಗಳ ರಚಿಸುವರು ನನ್ನಂಥ ಮೂರ್ಖರು ದೇವನಿಂದ ಮಾತ್ರ ಸಾಧ್ಯ ಸೃಷ್ಟಿಸುವುದು ಈ ತರು!

ಹೋಳು

ಇಮೇಜ್
ಸಿ. ಪಿ. ರವಿಕುಮಾರ್  ಚಾಕು, ಚೂರಿ, ಮಚ್ಚು ... ಹೋಳು ಮಾಡಲು  ಎಷ್ಟು ಬಗೆ ಉಪಕರಣ ಜಾತಿ, ಧರ್ಮ, ಭಾಷೆ, ಲಿಂಗ, ಹೋಳಾಗಿದೆ ಜನಗಣ ಕುದಿಯುತ್ತಿದೆ ಹಿಂಡಿದ ಹುಳಿಯಲ್ಲಿ ಅರೆದ ಮಸಾಲೆ ಹೂರಣ ಬೇಯುತ್ತಿದೆ ಕುದಿಯುತ್ತಿದೆ ಚುನಾವಣಾ ರಣಾಂಗಣ ಯಾವ ದೇವತೆಗೆ ಪ್ರೀತಿ ಈ ಹೋಮ ಮಾರಣ?

ವಿನಾಶ ಕಾಲ

ಇಮೇಜ್
ಮೂಲ - ಆಗ್ಡೆನ್ ನ್ಯಾಶ್  ಕನ್ನಡಕ್ಕೆ - ಸಿ. ಪಿ. ರವಿಕುಮಾರ್  ಆಕ್ ಹಕ್ಕಿಗಳ ಕಡೆಗೆ ಹರಿಸಿ ಗಮನ ಕೊಂಚ ರೆಕ್ಕೆ ಬಲಿತು ಹಾರುವ ಮುನ್ನ  ಕಲಿತ ಕಾರಣ ನಡೆಯುವುದನ್ನ ಪಾಪ ತಲುಪಿದವು ವಿನಾಶದ ಅಂಚ ಹರಿಸಿ ಗಮನ ಒಂದಿಷ್ಟು  ಮಾನವನ ಕಡೆಗೆ  ನಡೆಯುವ ಮುನ್ನ ಭೂಮಿ ಮೇಲೆ ಆಕಾಶದಲ್ಲಿವನ  ಹಾರಾಟದ ಲೀಲೆ ವಿನಾಶಕ್ಕೆ ತಳ್ಳಬಹುದು ಅವನನ್ನು ಕಡೆಗೆ

ಚಿನ್ನದ ಕಣ

ಇಮೇಜ್
ಮೂಲ - ರಾಬರ್ಟ್ ಫ್ರಾಸ್ಟ್  ಕನ್ನಡಕ್ಕೆ - ಸಿ. ಪಿ. ರವಿಕುಮಾರ್  ಧೂಳೋ ಧೂಳು ಹಾರಾಡುತ್ತದೆ ಊರೊಳಗೆ ನೆಲಕ್ಕೆ ಔಕಿದ ಹೊರತು ಅದನ್ನು ಕಡಲಿನ ಹಬೆ ನನ್ನಂಥ ಮಕ್ಕಳ ಕಿವಿಗೆ ಆಗಾಗ ಬೀಳುತ್ತಿತ್ತು ನುಡಿ: ಈ ಧೂಳಿನಲ್ಲಿ ಸೇರಿದೆ ಒಂದಿಷ್ಟು ಬಂಗಾರದ ಹುಡಿ ಮುಗಿಲೆತ್ತರ ಎದ್ದ ಧೂಳು ಸಂಜೆಯ ಹೊತ್ತು ದೈವ ಸಾಕ್ಷಾತ್ಕಾರದಂತೆ ತೋರುತ್ತಿತ್ತು ದೊಡ್ಡವರು ನನಗೆ ಹೇಳಿದರು, ಮರಿ, ಇದರಲ್ಲಿ ಬೆರೆತಿದೆ ಬಂಗಾರದ ಹುಡಿ ಹೀಗಿತ್ತು ಜೀವನ ಗೋಲ್ಡನ್ ಗೇಟಿನಲ್ಲಿ ಧೂಳಿತ್ತು ಉಂಡದ್ದರಲ್ಲಿ ಕುಡಿದದ್ದರಲ್ಲಿ ನನ್ನಂಥ ಮಕ್ಕಳಿಗೆ ಎಲ್ಲರೂ ಹೇಳುತ್ತಿದ್ದ ಮಾತು ನಮ್ಮ ಪಾಲಿನ ಚಿನ್ನದ ಕಣವನ್ನು ನಾವು ತಿನ್ನಬೇಕು ಕವಿತೆಯ ಸ್ವಾರಸ್ಯ: ಇದನ್ನು ಬರೆದ ರಾಬರ್ಟ್ ಫ್ರಾಸ್ಟ್ ಒಬ್ಬ ಪ್ರಸಿದ್ಧ ಅಮೇರಿಕನ್ ಕವಿ. ಯೌವ್ವನದಲ್ಲಿ ಇವನು ತನ್ನ ಅಜ್ಜ ಬಳುವಳಿಯಾಗಿ ಕೊಟ್ಟ ಹೊಲದಲ್ಲಿ ಒಂಬತ್ತು ವರ್ಷ ದುಡಿದ. ಆದರೆ ಈ ಕೆಲಸದಲ್ಲಿ ಅವನಿಗೆ ಸಿಕ್ಕಿದ್ದು ವೈಫಲ್ಯ ಮತ್ತು ನಿರಾಶೆ.  ಮುಂದೆ ಅವನು ಹೊಟ್ಟೆ ಪಾಡಿಗಾಗಿ ಇಂಗ್ಲಿಷ್ ಅಧ್ಯಾಪಕನಾಗಿ ದುಡಿದ. ರೈತನಾಗಿ ದುಡಿಯುವ ಅವಧಿಯಲ್ಲಿ ಅವನ ಮನಸ್ಸಿನಲ್ಲಿ ಈ ಕವಿತೆ ಹುಟ್ಟಿರಬಹುದು. ಕವಿತೆಯಲ್ಲಿ ಬರುವ ಗೋಲ್ಡನ್ ಗೇಟ್ (ಸೇತುವೆ) ಇರುವುದು ಕ್ಯಾಲಿಫಾರ್ನಿಯಾ ರಾಜ್ಯದಲ್ಲಿ. ಈ ರಾಜ್ಯದಲ್ಲಿ ಒಮ್ಮೆ ಚಿನ್ನದ ಗಟ್ಟಿಗಳು ದೊರೆಯುತ್ತಿದ್ದವು  ಎಂದು ಎಲ್ಲೆಡೆಯಿಂದ ಜನ ಅಲ್ಲಿಗೆ ವಲಸೆ ಬಂದರು. ರಾಬರ್ಟ್ ಫ್ರಾಸ್ಟ್ ಹುಟ್ಟುವ  ಮ

ಮೂರು ಲಿಮರಿಕ್ಸ್

ಇಮೇಜ್
ಸಿ.ಪಿ. ರವಿಕುಮಾರ್   (೧) ನೋಡಿ ಮಿಸ್ಟರ್ ರಾವ್, ಇದು ನಿಮ್ಮ ಭತ್ತೆ ರಿವೈಸ್ ಮಾಡಿದ್ದೇವೆ ಹೊಸ ವರ್ಷಕ್ಕೆ ಮತ್ತೆ ಈ ಮಾಹಿತಿ ನಿಮ್ಮಲ್ಲೇ ಇರಲಿ ಎಂದಾಗ ಬಾಸ್, ಹಲ್ಲು ಕಿರಿಯುತ್ತಾ ಮುರಳಿ 'ಖಂಡಿತ! ಹೇಳಿಕೊಳ್ಳೋಕೆ ನನಗೂ ನಾಚಿಕೆ ಆಗತ್ತೆ!' (೨) ಶೇರ್ ಮಾಡಿ ಎಂದು ಕಳಿಸಿದನು ಗೆಳೆಯ ಯಾವುದೋ ರಾಜಕಾರಣ ಸುದ್ದಿ ಎಳೆಯ "ಹೇಗೆ ಮಾಡುವುದು ಇದನ್ನು ಶೇರ್ ನಾನು?" ಯೋಚಿಸಿದರು ಕವಯಿತ್ರಿ ಮಿಸ್ ಶಾಯರಾ ಬಾನು, "ಶೇರ್ ಮಾಡಲೇಬೇಕೇ ಗಬ್ಬು ನಾರುವ ಕೊಳೆಯ?" (೩) ದುಡ್ಡಿಲ್ಲವೆಂದು ನುಡಿದಾಗ ಬ್ಯಾಂಕ್ ಕೌಂಟರಿನ ರಮಣಿ ದೊಡ್ಡ ದನಿಯಲ್ಲಿ ರೋಷಾವೇಶದಿಂದ ಕೂಗಾಡಿದ ಪ್ರಾಣಿ. ಹಾಳು ಸರಕಾರದಲ್ಲಿ ಬರೀ ದಾರಿದ್ರ್ಯವೇ ನೋಡಿ ಎಲ್ಲಾ ದೋಚಿಕೊಂಡರು ಹಾಳು ಮಲ್ಯ, ನೀರವ ಮೋದಿ ತಾಳ್ಮೆ ಕಳೆದುಕೊಳ್ಳದೇ ಮರುನುಡಿದಳು ಆಗ ಕೋಪಿಷ್ಟೆ

ಅಕ್ಷಯ ತೃತೀಯ

ಇಮೇಜ್
ಸಿ. ಪಿ. ರವಿಕುಮಾರ್  ತರಲು ಹೊರಟಿದ್ದೆ ನಿನಗಾಗಿ ಚಿನ್ನ ಅಕ್ಷಯ ತೃತೀಯಕ್ಕೆ ಬಂಗಾರದ ಬಳೆಯನ್ನ ಏನು ಮಾಡಲಿ ಎಲ್ಲೂ ಕ್ಯಾಷ್ ಸಿಗದು ಏಟೀಎಮ್ಮಿನಲಿ ಖಾಲಿಯಾಗಿದೆ ನಗದು ಹೌದೇ! ಇರಲಿ! ನನಗೇನಿಲ್ಲ ಬಂಗಾರದ ಹುಚ್ಚು ನೆನೆಸಿಕೊಂಡಿರಲ್ಲ ನನಗೆ ಅದೇ ಹೆಚ್ಚು ವಿಚಿತ್ರ ಎಂದರೆ ನನ್ನ ಅನುಭವವೂ ಸ್ವಲ್ಪ ಹಾಗೇ  ಮಾಡೋಕೆ ಹೊರಟೆ ಬೋಂಡಾ ಪಾಯಸ ಹೋಳಿಗೆ ರೆಸಿಪಿ ನೋಡಲು ಹೋದರೆ ಹಾಳು ಇಂಟರ್ನೆಟ್ಟು ಇವತ್ತೇ ಹಾಳಾದ್ದು ಕೂಡಬೇಕೇನ್ರೀ ಕೆಟ್ಟು ಮಾಡಿರುವೆ ಅನ್ನ, ಸಾರಿಗೇ ಬೆಲ್ಲ ಹಾಕಿ ಸ್ವೀಟು ಮುಖ್ಯ ಕಣ್ರೀ ನಮ್ಮ ಮನಸ್ಸಿನಲ್ಲಿ ಬಂದ ಥಾಟು!

ಏನು ಬರೆದಿರಿ

ಇಮೇಜ್
ಸಿ. ಪಿ. ರವಿಕುಮಾರ್  ಸಿ. ಪಿ. ರವಿಕುಮಾರ್ ಏನು ಬರೆದಿರಿ ಹದುಳವಿದೆ  ಎಂದು  ಲೈಕ್ ಒತ್ತಿದರೆ ನಿಮ್ಮ ಬೆರಳು ನೋಯುವುದೆ ಕಾಮೆಂಟ್ ಮಾಡಿದರೆ ಕ್ಯಾಲೊರೀ ಕಡಿಮೆಯಾಗುವುದೇ ಒಡನೆ ಶೇರ್ ಮಾಡಿದರೆ ಶಿರಾ ಕಹಿಯಾಗುವುದೇ ಕೊಡಬೇಕಾಗಿಲ್ಲ ಕಾಸು ಕೊಂಡಾಡಲು  ಕೈಯಲ್ಲಿ ಹಣವಿಲ್ಲದಿದ್ದರೆ ಕೆಡಹಿ ಮೂಗನು ಕೊಯ್ಯದೇ ಮಾಣ್ಪನೆ  ಮಾರ್ಕ್ ಜುಕರ್ಬರ್ಗದೇವಾ

ಪಾಪ, ಮೇಷ್ಟ್ರು!

ಇಮೇಜ್
ಸಿ. ಪಿ. ರವಿಕುಮಾರ್ ಕೇಳಿದರು ಶಾಲಾ ಇನ್ಸ್ಪೆಕ್ಟರ್ ಕೊಟ್ಟಾಗ ಅನಿರೀಕ್ಷಿತ ಭೇಟಿ   ಯಾರು ಹೇಳುತ್ತೀರಿ ಏನೆಂದು ಡೀ ಎಕ್ಸ್ ಬೈ ಡೀಟಿ ಕೈಯೆತ್ತಿದನು ಕಿಟ್ಟಿ  ಚಪ್ಪಾಳೆಯನು ತಟ್ಟಿ ಸಾರ್ ನನಗೆ ಗೊತ್ತು ರೀ ಅದು ವೆಲಾಕಿಟಿ! ಮುಖ ಸಿಂಡರಿಸಿದರು ಖಡಕ್ ತನಿಖಾಧಿಕಾರಿ ಮೇಷ್ಟ್ರ ಕಡೆ ತಿರುಗಿ ಗುಡುಗಿದರು ಏನ್ರೀ ಮೇಷ್ಟೇ ಕೇಳಿಸ್ಕೊಂಡ್ರಾ ಬಡಕೋಬೇಕು ಬಂಬ್ಡಾ ಅಂತ ಕೂಗಾಡ್ದಾಗ ಪಾಪ ಮೇಷ್ಟ್ರು ಹೇಳ್ತಾ ನಿಂತ್ರು ಸಾರಿ ಸಾರ್ ಸಾರ್ ಸಾರ್ ಸಾರ್ ನಾನ್ ಹೇಳೋದ್ ಸ್ವಲ್ಪ ಕೇಳಿ  ಗಂಟಲ್ ಬಿದ್ಹೋಗಿದೆ ಪಾಠ ಹೇಳಿ ಹೇಳಿ ಬೆನ್ನಿಗೆ ಎರಡು ಗುದ್ದಿ ಹೇಳ್ಕೊಟ್ರೂ ತಿದ್ದೀ ತಿದ್ದೀ  ಕಲಿಯೋದಿಲ್ಲ ಸಾರ್ ಇಷ್ಟೇ ಇವುಗಳ್ ಕೆಪಾಕಿಟಿ!