ಪೋಸ್ಟ್‌ಗಳು

ಜೂನ್, 2019 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ವರ್ಣಪಥ (ಮಕ್ಕಳ ಕವಿತೆ)

ಇಮೇಜ್
ಮೂಲ : ಕ್ರಿಸ್ಟಿನಾ ರೊಸೆಟ್ಟಿ ಕನ್ನಡಕ್ಕೆ : ಸಿ.ಪಿ. ರವಿಕುಮಾರ್ ನದಿಯಲ್ಲಿ ತೇಲುತ್ತವೆ ದೋಣಿ ಸಾಗರದ ಮೇಲೆ ತೇಲುತ್ತವೆ ನಾವೆ ... ಆಗಸದಲ್ಲಿ ತೇಲುವ ಮೋಡಗಳು ಮಾತ್ರ ಇವೆಲ್ಲಕ್ಕಿಂತ ಸುಂದರವಾಗಿ ಕಾಣುತ್ತವೆ ಕಟ್ಟಿದ್ದಾರೆ ನದಿಗಳ ಮೇಲೆ ಒಂದಕ್ಕಿಂತ ಮತ್ತೊಂದು ಸುಂದರತರ ಸೇತುವೆ ಆದರೆ ಹಾದು ಹೋಗುತ್ತದಲ್ಲ ಮರಗಳ ಮೇಲೆ ಸ್ವರ್ಗಕ್ಕೆ ತೂಗಿಬಿಟ್ಟ ಏಣಿಯಂತೆ ಭೂಮಿಗೂ ಗಗನಕ್ಕೂ ನಡುವಣ ವರ್ಣಪಥ ಸುಂದರತಮ ಎಲ್ಲ ಸೇತುವೆಗಳಿಗಿಂತ

ಪಾತಕ (ಕವಿತೆ)

ಇಮೇಜ್
ಸಿ.ಪಿ. ರವಿಕುಮಾರ್  ಪರಿಸರ ದಿನಾಚರಣೆ ತ್ಯಾಜ್ಯ ನಿರ್ವಹಣೆ ಇವನ್ನೆಲ್ಲಾ ನಾವು ಪೋಸ್ಟ್ ಮಾಡುತ್ತಿರುವಾಗ ಅಲ್ಲೆಲ್ಲೋ  ಅಲೀಗಢದಲ್ಲಿ ಎರಡು ವರ್ಷದ ಹಸುಳೆಯನ್ನು ಕತ್ತು ಹಿಸುಕಿ ತ್ಯಾಜ್ಯಕ್ಕಿಂತಲೂ ಕಡೆಯಾಗಿ ಎಸೆದ ಸುದ್ದಿ ಓದಿ ಪರಿಸರದ ಬಗ್ಗೆ ಗಾಬರಿಯಾಗಿದ್ದೇನೆ ಪರಿಸರದ ಸಮಸ್ಯೆ ಏನು ಮಹಾ ಅನ್ನಿಸಿದೆ ಇಲ್ಲೇ ಬೆಂಗಳೂರಲ್ಲಿ  ... ಸಾಲದ ಹೊರೆಗೆ ತತ್ತರಿಸಿ ಒಬ್ಬ ತಂದೆ  ಹೆಂಡತಿ ಮಗನನ್ನು ನೇಣಿಗೇರಿಸಿದ ಸುದ್ದಿ ಓದಿ ಎಕಾನಮಿ ಬಗ್ಗೆ ಭೀತಿಗೊಂಡಿದ್ದೇನೆ ಹಣ ನೆಟ್ಟು ಬೆಳೆಸುವ ಬ್ಯಾಂಕ್ ಸ್ಕೀಮುಗಳಲ್ಲಿ ನಾನು ನೆಟ್ಟ ಸಸಿಯಲ್ಲೂ ಕೆಂಪಗಿನದೇನೋ ಕಂಡು ಅಸಹ್ಯ ಪಟ್ಟುಕೊಂಡಿದ್ದೇನೆ ಇಷ್ಟೆಲ್ಲಾ ಕಣ್ಣೀರಿನ ನಡುವೆ ನೀರಿನ ಸಮಸ್ಯೆ ಏನು ಮಹಾ ಅನ್ನಿಸಿದೆ ಡ್ರಗ್ ಟ್ರಾಫಿಕಿಂಗ್ ಹ್ಯೂಮನ್ ಟ್ರಾಫಿಕಿಂಗ್ ಕಿಡ್ನಿಗಾಗಿ ಮಕ್ಕಳ ಅಪಹರಣ ಇವನ್ನೆಲ್ಲಾ ಓದಿ ತಲ್ಲಣಗೊಂಡಿದ್ದೇನೆ ಬೆಂಗಳೂರು ಟ್ರಾಫಿಕ್ ಏನು ಮಹಾ ಅನ್ನಿಸಿದೆ ಎಂಥ ಕರುಣಾಮಯಿಯಾದರೂ ದೇವರು ನಮ್ಮನ್ನು ಕ್ಷಮಿಸಲಾರನೆಂದು ಹತಾಶನಾಗಿದ್ದೇನೆ

ವಿನಾಶ ಮತ್ತು ವಿಕಾಸ (ವಿಜ್ಞಾನ ಕವಿತೆ )

ಇಮೇಜ್
ಸಿ. ಪಿ. ರವಿಕುಮಾರ್   ಬಹಳ ಹಿಂದೆ ಟ್ರಯಾಸಿಕ್ ಯುಗದ ಅಂತ್ಯಭಾಗದಲ್ಲಿ ಅರವತ್ತಾರು ದಶಲಕ್ಷ ವರ್ಷಗಳ ಆಚೆಯ ಹಿಂಸಾಯುಗ  ಆಗಿನ್ನೂ ಭೂವಲಯದಲ್ಲಿರಲಿಲ್ಲ ಹಿಮಾಚ್ಛಾದಿತ ಧ್ರುವಗಳು ಹರಡಿಕೊಂಡಿತ್ತು ಎಲ್ಲೆಲ್ಲೂ ದಟ್ಟಕಾಡು  ಓಡಾಡಿಕೊಂಡಿದ್ದವು ಕೋರೆದಾಡೆಗಳ ಡೈನೋಸಾರ್ ಸರೀಸೃಪಗಳು ಕಂಡದ್ದನ್ನು ಕಬಳಿಸುವುದಷ್ಟೇ ಕಲಿತಿದ್ದ ಕ್ರೂರ ಮೃಗಗಳು  ಹಾರಾಡಲು ಕಲಿತ ಟೆರೋಸಾರ್ ಖಗಗಳು  ಇದೀಗ ಇನ್ನೂ ಬಲಿಯುತ್ತಿತ್ತು ವಿಕಾಸದ ರೆಕ್ಕೆ  ಹುಟ್ಟಿಕೊಂಡಿದ್ದವು ಕೆಲವು ನೆಲವಕ್ಕಿ  ಡೈನೋಸಾರ್ ಕಣ್ತಪ್ಪಿಸಿ ತಿನ್ನುತ್ತಿದ್ದವು ಕಾಳನ್ನು ಹೆಕ್ಕಿ  ಬದುಕಿದ್ದವು ಹೇಗೋ ಬಡಪಕ್ಷಿ  ಆಗ ನಡೆಯಿತೊಂದು ಅಕಲ್ಪಿತ ಘಟನೆ  ನಡೆಸಿ ಕ್ರೂರಮೃಗ ಹನನ ನೀಡಲೋ ಎಂಬಂತೆ ಭೂಮಿಗೆ ಉಪಶಮನ  ಯಾವುದೋ ಶಕ್ತಿಯ ಅದ್ಭುತ ನಟನೆ: ಭೂಮಿಗೆ ಲಕ್ಷಾಂತರ ಮೈಲಿ  ದೂರದಲ್ಲಿ  ಸೂರ್ಯನ ಸುತ್ತ ಸುತ್ತುತ್ತಿದ್ದ ಒಂದು  ಹೆಬ್ಬಂಡೆ -- ಬ್ರಹ್ಮಾಸ್ತ್ರದಂತಿರುವ  ಆಸ್ಟೆರಾಯ್ಡು -- ಗರಗರ ಸುತ್ತುತ್ತ  ಮಹಾವೇಗದಲ್ಲಿ ಚಲಿಸುತ್ತ  ತ್ಯಜಿಸಿ ತನ್ನ ಪ್ರದಕ್ಷಿಣಾ ಪಥ ತೊಟ್ಟು ನಿರ್ನಾಮದ ಶಪಥ   ಉರಿಯುತ್ತ ಉಲ್ಕೆಯಂತೆ  ನೇರವಾಗಿ ಅಪ್ಪಳಿಸಿತಂತೆ  ಭೂಮಿಯ ಎದೆಯನ್ನು ಹಾಯ್ದು ಸೃಷ್ಟಿಸಿತಂತೆ ಆಳವಾದ ಗಾಯ ಹನ್ನೆರಡು ಮೈಲಿ ಆಳ ತೊಂಬತ್ತು ಮೈಲಿ ವಿಸ್ತೀರ್ಣದ ಹಳ್ಳ ಉರಿದು ಭಸ್ಮವಾದವು ಅರಣ್ಯ ಬೂದಿಯಾಯಿತು ಬೃಹತ