ಪೋಸ್ಟ್‌ಗಳು

Play ಲೇಬಲ್ ಜೊತೆಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತಿದೆ

ಪಡಲ್ ಆಟ

ಇಮೇಜ್
  ಕೆಲವರಿಗೆ ಇಷ್ಟ ಕಡಲು ನನಗೆ ಇಷ್ಟ ಪಡಲು!* ಮಳೆ ಬಂದಾಗ ಮೈದಾನದಲ್ಲಿ ನೀರು ನಿಂತಾಗ ನೀನೂ ಬಂದು ಜೊತೆ ಸೇರು ಆಡೋಣ ಅತ್ತಕಡೆಯಿಂದಿತ್ತಕಡೆ ಹಾರಿ ಮತ್ತೆ ಇತ್ತಕಡೆಯಿಂದತ್ತಕಡೆ ಹಾರಿ ಕೆಲವರಿಗೆ ಇಷ್ಟ ಕಡಲು ನನಗೆ ಇಷ್ಟ ಪಡಲು! ನೋಡು ನಾನೇ ಹನುಮಂತನಂತೆ ಅದೇ ಲಂಕೆ, ನಡುವೆ ಕಡಲಂತೆ ನೋಡು ಒಂದೇ ಸಲ ಹಾರಿ ಬಂದು ನಿಂತೆ ನೀನೂ ಬಂದರೆ ಜೊತೆಗೇ ಆಡೋಣವಂತೆ  ಕೆಲವರಿಗೆ ಇಷ್ಟ ಕಡಲು ನನಗೆ ಇಷ್ಟ ಪಡಲು! ಛಪ್ ಎಂದು ಕಡಲಲ್ಲಿ ಹಾರಿಸೋಣ ಕೊಚ್ಚೆ ಅಮ್ಮ ಕರೆಯುವವರೆಗೂ ಮನಸೋ ಇಚ್ಛೆ  ಏನೀಗ ಕೊಳೆಯಾದರೆ ಒಂದಿಷ್ಟು ಬಟ್ಟೆ ಒಗೆದರೆ ಬಿಳಿಯಾಗದೇ ಇರುವುದೇ ಮತ್ತೆ! ಕೆಲವರಿಗೆ ಇಷ್ಟ ಕಡಲು ನನಗೆ ಇಷ್ಟ ಪಡಲು! (*ಪಡಲು - puddle. ಮಳೆ ಬಂದಾಗ ನೀರು ಸೇರಿ ಉಂಟಾಗುವ ಪುಟ್ಟ ಹೊಂಡ) ಸಿ ಪಿ ರವಿಕುಮಾರ್

ಗೋಲಿ ಆಟ

ಇಮೇಜ್
  ಜನವರಿಯ ಒಂದು ಸಂಜೆ. ಮೈ ಮರಗಟ್ಟುವ ಚಳಿ. ಅಮ್ಮ ನನ್ನ ಅತ್ತಿಗೆಯನ್ನು ಕರೆದು “ಎಲ್ಲರಿಗೂ ಶುಂಠಿ ಹಾಕಿ ಚಹಾ ಮಾಡಿಕೊಂಡು ಬಾ”ಎಂದಳು. ಅತ್ತಿಗೆ ಅಡುಗೆಕೋಣೆಗೆ ಹೊರಟರು. ಮದುವೆಯಾಗಿ ಕಳೆದ ವಾರ ನಮ್ಮ ಮನೆಗೆ ಕಾಲಿಟ್ಟಿದ್ದ ನನ್ನ ಹೆಂಡತಿ ಅವರನ್ನು ಹಿಂಬಾಲಿಸಿ ಹೋದಳು. ಸ್ವಲ್ಪ ಹೊತ್ತಿನ ನಂತರ ಇಬ್ಬರೂ ತಲೆಯ ಮೇಲೆ ಸೆರಗು ಹೊದ್ದು ಕೈಯಲ್ಲಿ ಟ್ರೇ ಹಿಡಿದು ಬಂದರು. ಹೊಗೆಯಾಡುವ ಚಹಾ ಜೊತೆಗೆ ತಿನ್ನಲು ಬಿಸ್ಕೆಟ್ ಇಟ್ಟುಕೊಂಡು ಎಲ್ಲರಿಗೂ ಸರಬರಾಜು ಮಾಡಿದರು. ಅಪ್ಪನಿಗೆ, ಅಮ್ಮನಿಗೆ, ಅಣ್ಣನಿಗೆ, ನನಗೆ, ತಂಗಿಗೆ. ನಂತರ ತಾವೂ ಚಹಾ ಕುಡಿಯಲು ಅಡುಗೆ ಮನೆಗೆ ಹೋದರು. ಅಪ್ಪ ಟಿವಿ ಮೇಲೆ ನ್ಯೂಸ್ ನೋಡುತ್ತಾ ಚಹಾ ಕುಡಿಯುತ್ತಿದ್ದರು. ಅಣ್ಣ ಮೊಬೈಲ್ ಮೇಲೆ ಏನೋ ನೋಡುತ್ತಿದ್ದ. ನಾನು ಟೇಬಲ್ ಮುಂದೆ ಕುಳಿತು ಒಂದು ಕವಿತೆಯ ಕೈಯನ್ನು ನಾಜೂಕಾಗಿ ಹಿಡಿದು  ನಡೆಸುವ ಹುನ್ನಾರದಲ್ಲಿದ್ದೆ. ಹೊರಗೆ ಮಕ್ಕಳು ಗೋಲಿ ಆಟ ಆಡುತ್ತಿದ್ದರು. ಅವರ ಗದ್ದಲ ನಮಗೆ ಕೇಳುತ್ತಿತ್ತು. ತಂಗಿ ಮತ್ತು ನನ್ನ ಹೆಂಡತಿ ಬಾಗಿಲಲ್ಲಿ  ಮಕ್ಕಳ ಆಟ ನೋಡುತ್ತಾ ನಿಂತರು. ಒಮ್ಮೆಲೇ ಅಮ್ಮನ ಉದ್ಗಾರ ಕೇಳಿಸಿತು. “ಅಯ್ಯೋ, ನೋಡಿ! ನಮ್ಮ ಸೊಸೆ ಮಕ್ಕಳ ಜೊತೆ ಸೇರಿಕೊಂಡು ಗೋಲಿ ಆಡ್ತಿದ್ದಾಳೆ!” ಅವಳ ಧ್ವನಿಯಲ್ಲಿ ನಗುವಿತ್ತು, ಒಂದು ಬಗೆಯ ಸಂತೋಷವಿತ್ತು. ಆದರೆ ನನ್ನ ಕಡೆ ನೋಡಿ “ನೋಡಿದವರು ಏನೆಂದುಕೊಂಡಾರು, ಹೊಸದಾಗಿ ಮನೆಗೆ ಬಂದ ಸೊಸೆ …” ಎಂದಾಗ ಅವಳನ್ನು ತಡೆ ಎನ್...

ಕತ್ತಲೆ ಬೆಳಕು - ಶ್ರೀರಂಗರ ನಾಟಕ

ಸಿ ಪಿ ರವಿಕುಮಾರ್ ಶ್ರೀರಂಗರ ನಾಟಕಗಳನ್ನು ಈನಡುವೆ ಅಷ್ಟಾಗಿ ಯಾರೂ ಪ್ರಯೋಗಿಸುವುದಿಲ್ಲ. ರಂಗಶಂಕರದಲ್ಲಿ ಇವತ್ತು ಅವರ ಕತ್ತಲೆಬೆಳಕು ನಾಟಕದ ಪ್ರಯೋಗವಿತ್ತು. ಒಂದು ಕಾಲದಲ್ಲಿ ಶ್ರೀರಂಗ ಕನ್ನಡದ ಅಗ್ರಮಾನ್ಯ ನಾಟಕಕಾರರಾಗಿದ್ದರು. ಕೈಲಾಸಂ ನಂತರ ಪ್ರಖ್ಯಾತರಾದ ನಾಟಕಕಾರರೆಂದರೆ ಶ್ರೀರಂಗ (ಆದ್ಯರಂಗಾಚಾರ್ಯ). ಕತ್ತಲೆ-ಬೆಳಕು ನಾಟಕದಲ್ಲಿ ಒಬ್ಬ ನಾಟಕಕಾರನದ್ದು ಕೇಂದ್ರಪಾತ್ರ. ಇವನಿಗೆ ನಾಟಕ ಬರೆದುಕೊಡುವಂತೆ  ಕಂಪನಿಯ ಮಾಲೀಕ ಹಿಂದೆಬಿದ್ದಿದ್ದಾನೆ.  ಆದರೆ ನಾಟಕಕಾರನಿಗೆ ಯಾವ ವಸ್ತುವೂ ರುಚಿಸದಾಗಿದೆ. ಮಾಲೀಕನೇ ಪೌರಾಣಿಕ, ಐತಿಹಾಸಿಕ, ಸಾಮಾಜಿಕ ಎಂದು ಸೂಚನೆಗಳನ್ನು ಕೊಡುತ್ತಿದ್ದಾನೆ. ಮಾಲೀಕನಿಗೆ ಬೇಕಾಗಿರುವುದು ರಸವತ್ತಾದ ನಾಟಕ - ವಯಸ್ಸಾದ ಗಂಡನ ಮಗನನ್ನೇ ಪ್ರೇಮಿಸುವ ಮಲತಾಯಿ ತನ್ನ ಗಂಡನನ್ನೇ ಕೊಲೆ ಮಾಡುವ ಕತೆಯನ್ನು ಅವನು ಸೂಚಿಸುತ್ತಾನೆ. ನಾಟಕಕಾರನ ಮನೆಯ ಸಮೀಪದಲ್ಲೇ ಹಲವು ಕತೆಗಳು ನಡೆಯುತ್ತಿವೆ. ಸದಾ ತಾನಾಯಿತು, ತನ್ನ ಬರವಣಿಗೆಯಾಯಿತು ಎಂದು ಕತ್ತಲಿನಲ್ಲಿ ಕುಳಿತಿರುವ ನಾಟಕಕಾರನಿಗೆ ಹೊರಗಿನ ಜಗತ್ತು ಪ್ರಕಾಶವಾಗಿಲ್ಲ. Fact is stranger than fiction ಎನ್ನುತ್ತಾರೆ.  ಶ್ರೀಮಂತನೊಬ್ಬನ ಯುವಪತ್ನಿ ತನ್ನ ಡ್ರೈವರ್ ಜೊತೆಗೆ ಸಂಬಂಧ ಬೆಳೆಸಿದ್ದಾಳೆ. ತನ್ನ ಮುದಿಗಂಡನನ್ನು ಮುಗಿಸಿಬಿಡುವಂತೆ ಕೂಡಾ ಅವಳು ಡ್ರೈವರ್ ಗೆ ಸೂಚಿಸುತ್ತಾಳೆ! ಬಡತನದಲ್ಲಿ ಬೆಂದ ಒಂದು ಗಂಡ-ಹೆಂಡಿರ ಜೋಡಿ ಆತ್ಮಹತ್ಯೆಯ ವಿಚಾರ...

ಒಂದು ವರ್ಷ ಕಂಡ "ರವಿ ಕಾಣದ್ದು"

ಇಮೇಜ್
ಸಿ ಪಿ ರವಿಕುಮಾರ್  ನನ್ನ ಬ್ಲಾಗ್ ಗೆ ಒಂದು ವರ್ಷ ತುಂಬಿತು. ಮೇ ೮, ೨೦೧೩ ದಿನಾಂಕದಂದು ನಾನು ಪ್ರಾರಂಭಿಸಿದ "ರವಿ ಕಾಣದ್ದು" ಬ್ಲಾಗ್ ಬರಹಗಳ ಸಂಖ್ಯೆ ನೂರು ದಾಟಿವೆ. ಇದುವರೆಗೂ ಸುಮಾರು ೧೧,೦೦೦ ಹಿಟ್ಸ್ ನನ್ನ ಬರಹಗಳಿಗೆ ಬಂದಿವೆ.  ನನ್ನ ಬರಹಗಳನ್ನು ಓದಿ ಪ್ರೋತ್ಸಾಹ ನೀಡುತ್ತಿರುವ ಎಲ್ಲರಿಗೂ ನನ್ನ ಕೃತಜ್ಞತೆಗಳು. ಈ ಸಂದರ್ಭದಲ್ಲಿ ಕೆಲವು ನೆನಪುಗಳನ್ನು ಓದುಗರ ಜೊತೆ ಹಂಚಿಕೊಳ್ಳುತ್ತಿದ್ದೇನೆ. ನ ನ್ನ ಬರವಣಿಗೆಯ ಹವ್ಯಾಸಕ್ಕೆ ಮೊದಲು ಪ್ರೋತ್ಸಾಹ ನೀಡಿದವರು ನನ್ನ ತಂದೆ ದಿ. ಸಿ. ಎಚ್. ಪ್ರಹ್ಲಾದರಾವ್. ಅವರು ಇಂಗ್ಲಿಷ್ ಮತ್ತು ಕನ್ನಡ ಭಾಷೆಗಳಲ್ಲಿ ಹವ್ಯಾಸಿ ಪತ್ರಕರ್ತರಾಗಿದ್ದವರು. ನಮ್ಮ ಮನೆಯಲ್ಲಿ ಪುಸ್ತಕ್ಗಗಳೇ ಪುಸ್ತಕಗಳು! ನಮ್ಮ ತಂದೆಗೆ ದೆಹಲಿಗೆ ವರ್ಗವಾದಾಗ ನಾವು ಒಂದೇ ಕೋಣೆಯ ಮನೆಯಲ್ಲಿ ಬಾಡಿಗೆಗೆ ಇದ್ದೆವು; ಆಗ ನೂರಾರು ಪುಸ್ತಕಗಳನ್ನು ಅವರು ದೆಹಲಿ ಕನ್ನಡ ಶಾಲೆಯ ಗ್ರಂಥಾಲಯಕ್ಕೆ ದಾನ ಕೊಟ್ಟರು. ಈ ಪುಸ್ತಕಗಳನ್ನು ಇಟ್ಟುಕೊಳ್ಳಲು ನಮ್ಮ ಮನೆಯಲ್ಲಿ ಸ್ಥಳವಿದ್ದರೆ ತಾನೇ! ಮುಂದೆ ನಾವು ಎರಡು ಕೋಣೆಯ ಮನೆಗೆ ಬಡ್ತಿ ಹೊಂದಿದೆವು. ಆಗ ಬೆಂಗಳೂರಿಗೆ ಬೇಸಿಗೆ ರಜೆಗೆಂದು ಬಂದಾಗ ನಮ್ಮ ತಂದೆ ಕನ್ನಡ ಸಾಹಿತ್ಯ ಪರಿಷತ್ತಿನವರು ಆಯೋಜಿಸಿದ ಪುಸ್ತಕ ಪ್ರದರ್ಶನದಲ್ಲಿ  ಚಿಕ್ಕ ಹುಡುಗರಾಗಿದ್ದ ನನಗೆ ಮತ್ತು ನನ್ನ ಅಣ್ಣನಿಗೆ ಏನಿಲ್ಲವೆಂದರೂ ಐವತ್ತು-ಅರವತ್ತು ಪುಸ್ತಕಗಳನ್ನು ಕೊಂಡುತಂದರು! ಒಂದಕ್ಕ...