ಪೋಸ್ಟ್‌ಗಳು

Sita ಲೇಬಲ್ ಜೊತೆಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತಿದೆ

ಶಿವನ ಬಿಲ್ಲನ್ನು ಶ್ರೀರಾಮ ಮುರಿದನಂತೆ

ಮೂಲ: ಅವಧಿ ಜಾನಪದ ಮೇಲೇಳು ಸಿಂಗರಿಸಿಕೋ ಸೀತೆ, ಶಿವನ ಬಿಲ್ಲನ್ನು ಶ್ರೀರಾಮ ಮುರಿದನಂತೆ! ತಲೆಯ ಮೇಲೆ ರೇಷ್ಮೆಯ ಸೆರಗಿನೊಳು  ಸೀತೆಯ ಮುಖಕಮಲವು ಅರಳುತಿದೆ! ಹಣೆಯ ಮೇಲೆ ಮಾಣಿಕ್ಯದ ತಿಲಕ  ತಾರಗೆಯಂತೆ ಬೆಳಗುತಿದೆ! ಅರಳದೆ ಏನು, ಬೆಳಗದೆ ಏನು ಸೀತೆಯು ರಘುರಾಮನ ಪ್ರೇಮಲತೆ! ಮೇಲೇಳು ಸಿಂಗರಿಸಿಕೋ ಸೀತೆ, ಶಿವನ ಬಿಲ್ಲನ್ನು ಶ್ರೀರಾಮ ಮುರಿದನಂತೆ! ಕೈಗಳಲ್ಲಿ ಕಿಂಕಿಣಿಸುವ ಬಳೆ ಕೆಂಪು ಏನೋ ಗುಣುಗುಣು ಗುನುಗುತಿದೆ ತೋಳಬಂದಿಯೊಳು ಚಿನ್ನದ ನಡುವೆ ವಜ್ರವು ಫಳಫಳ ಮಿನುಗುತಿದೆ! ಗುನುಗದೆ ಏನು ಮಿನುಗದೆ ಏನು  ಸೀತೆಯು ರಘುರಾಮನ ಪ್ರೇಮಲತೆ! ಮೇಲೇಳು ಸಿಂಗರಿಸಿಕೋ ಸೀತೆ, ಶಿವನ ಬಿಲ್ಲನ್ನು ಶ್ರೀರಾಮ ಮುರಿದನಂತೆ! ಬಂಗಾರದ ಹೊಳೆಹೊಳೆಯುವ ಡಾಬು ಸೀತೆಯ ಸೊಂಟವ ಬಳಸುತಿದೆ! ಕಿವಿಗಳಲ್ಲಿ ತೂಗುವ ಬಿಳಿಮುತ್ತು ಏನೋ ಹೇಳಲು ಬಯಸುತಿದೆ! ಬಳಸದೆ ಏನು, ಬಯಸದೆ ಏನು, ಸೀತೆಯು ರಘುರಾಮನ ಪ್ರೇಮಲತೆ! ಮೇಲೇಳು ಸಿಂಗರಿಸಿಕೋ ಸೀತೆ, ಶಿವನ ಬಿಲ್ಲನ್ನು ಶ್ರೀರಾಮ ಮುರಿದನಂತೆ! ಕಾಲಿನಲ್ಲಿ ಘಲುಘಲು ಎಂದು ನೂಪುರ ಹರುಷದಿ ನುಡಿಯುತಿದೆ ಪದ್ಮಪಾದಗಳ ಕಾಲಂದುಗೆಯೋ ಸಿಹಿನೋವಿನಲಿ ಮಿಡಿಯುತಿದೆ! ನುಡಿಯದೆ ಏನು, ಮಿಡಿಯದೆ ಏನು ಸೀತೆಯು ರಘುರಾಮನ ಪ್ರೇಮಲತೆ! ಮೇಲೇಳು ಸಿಂಗರಿಸಿಕೋ ಸೀತೆ, ಶಿವನ ಬಿಲ್ಲನ್ನು ಶ್ರೀರಾಮ ಮುರಿದನಂತೆ!