ಪೋಸ್ಟ್‌ಗಳು

Charlie Chaplin ಲೇಬಲ್ ಜೊತೆಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತಿದೆ

ಚಾರ್ಲಿ ಚಾಪ್ಲಿನ್ ಪ್ರಸಂಗ

ಇಮೇಜ್
  ಹೀಗಾಯಿತಂತೆ ಒಮ್ಮೆ, ಚಾರ್ಲಿ ಚಾಪ್ಲಿನ್ ರಂಗದ ಮೇಲೆ ಹೋಗಿ ಹೇಳಿದನಂತೆ ಒಂದು ಹಾಸ್ಯಪ್ರಸಂಗ. ಸಭಿಕರು ಹೊಟ್ಟೆ ಹುಣ್ಣಾಗುವಂತೆ ನಕ್ಕರು, ಬಿದ್ದುಹೋಗುವ ಹಾಗೆ ಸೂರು ತಟ್ಟಿದರು ಚಪ್ಪಾಳೆ.  ಕಾದು ಕೂತರು ಮುಂದಿನ ಹಾಸ್ಯಚಟಾಕಿಗೆ. ಹೇಳಿದ ಪ್ರಸಂಗವನ್ನೇ ಚಾರ್ಲಿ ಹೇಳಿದನು ಮತ್ತೊಮ್ಮೆ. ಕೇಳಿ ನಕ್ಕರು ಹಲವರು, ಕೆಲವರು ಮಾಡಿದರು ಕರತಾಡನ. ಅದೇ ಹಾಸ್ಯಪ್ರಸಂಗ ಮೂರನೇ ಸಲ ಪುನರುಚ್ಚರಿಸಿ ಕಾದನಂತೆ ಚಾರ್ಲಿ ಸಭಿಕರ ಪ್ರತಿಕ್ರಿಯೆಗೆ. ಮೌನವಾಗಿತ್ತು ಸಭಾಭವನ. ಒಬ್ಬರೂ ನಗಲಿಲ್ಲ. ಏನಿದು ಹುಡುಗಾಟ ಎಂಬಂತಿತ್ತು ಎಲ್ಲರ ಭಾವ. ಆಗ ಹೇಳಿದನಂತೆ ಚಾರ್ಲಿ: ನೋಡಿದಿರಾ! ಒಂದೇ ನಗೆಪ್ರಸಂಗಕ್ಕೆ ನಗುವುದಿಲ್ಲ ಯಾರೂ ಪದೇಪದೇ ಅಳುವಿರಿ ಹೇಳಿ ಹಾಗಾದರೆ ಏಕೆ  ಮತ್ತೆ ಮತ್ತೆ ನೆನೆನೆನೆದು ಹಳೆಯ ಯಾವುದೋ ದುಃಖವನ್ನು ಬಗೆ ಬಗೆದು? - ಸಿ. ಪಿ. ರವಿಕುಮಾರ್  ಏಪ್ರಿಲ್ ೨೦, ೨೦೨೪

ಚಾರ್ಲಿ ಉವಾಚ

ಇಮೇಜ್
ಸಿ. ಪಿ. ರವಿಕುಮಾರ್ ಏಪ್ರಿಲ್ ೧೬, ೨೦೧೪ - ಚಾರ್ಲಿ ಚಾಪ್ಲಿನ್ನನ ನೂರಾ ಇಪ್ಪತ್ತೈದನೇ ಹುಟ್ಟುಹಬ್ಬ. ದುಂಡು ಮೇಜಿನ ಪರಿಷತ್ತಿಗೆ ಗಾಂಧೀಜಿ ಲಂಡನ್ನಿಗೆ ಭೇಟಿಯಿತ್ತಾಗ ಅಲ್ಲಿ ಅವರು ಸಂಧಿಸಿ ಮಾತಾಡಿಸಿದ ಕೆಲವೇ ಗಣ್ಯರ ಪೈಕಿ ಚಾರ್ಲಿ ಚಾಪ್ಲಿನ್ನನೂ ಒಬ್ಬ. ಅವನ ಜೀವನ ಚರಿತ್ರೆಯನ್ನು ನಮ್ಮ ತಂದೆ ಬ್ರಿಟಿಷ್ ಕೌನ್ಸಿಲ್ ಲೈಬ್ರರಿಯಿಂದ ತಂದು ಓದುತ್ತಿದ್ದಾಗ ನಾನೂ ಅದರ ಮೇಲೆ ಕಣ್ಣಾಡಿಸಿದ ನೆನಪಿದೆ. ಒಬ್ಬ ರಂಗ ಅಭಿನೇತ್ರಿಯ ಮಗನಾಗಿ ಹುಟ್ಟಿದ ಚಾರ್ಲಿಯ ಬಾಲ್ಯ ಬಡತನ ಮತ್ತು ಒಂಟಿತನದಲ್ಲಿ ಕಳೆಯಿತು. ಒಮ್ಮೆ ಅವನ ತಾಯಿ ಪುಟ್ಟ ಚಾರ್ಲಿಯನ್ನು ಯಾರ ಸುಪರ್ದಿನಲ್ಲೂ ಬಿಟ್ಟಿರಲಾಗದೆ ಅವನನ್ನು ನಿರ್ವಾಹವಿಲ್ಲದೆ ರಂಗದ ಮೇಲೆ ಕರೆದೊಯ್ಯುತ್ತಾಳೆ. ಪುಟ್ಟ ಬಾಲಕ ರಂಗದ ಮೇಲೆ ಹೋ ಎಂದು ಅಳಲು ಪ್ರಾರಂಭಿಸುತ್ತಾನೆ! ಇದನ್ನು ನೋಡಿ ಸಭಿಕರು ಹೋ ಎಂದು ನಕ್ಕು ಕರತಾಡನ ಮಾಡುತ್ತಾರೆ!  ತನ್ನ ನೋವಿನಿಂದ ಜಗತ್ತಿಗೆ ನಗೆಯನ್ನು ಹಂಚುವ ಪ್ರವೃತ್ತಿ ಹೀಗೆ ಪ್ರಾರಂಭವಾಯಿತು! ಉದ್ದಕ್ಕೂ ಕ್ಲೌನ್ (ನಕಲಿ ವೇಷಧಾರಿ) ಪಾತ್ರಗಳಲ್ಲಿ ಕಾಣಿಸಿಕೊಂಡ ಚಾರ್ಲಿ ಚಾಪ್ಲಿನ್ ನಿಜಕ್ಕೂ ಒಬ್ಬ ಅಪೂರ್ವ ಪ್ರತಿಭೆಯ ಸಾಹಿತಿ, ಚಿತ್ರ ನಿರ್ದೇಶಕ, ನಟ. ಅವನ ಕೆಲವು ಜಾಣ್ನುಡಿಗಳನ್ನು ಇಲ್ಲಿ ಕನ್ನಡಿಸಿದ್ದೇನೆ. ನಮ್ಮ ಮೆಚ್ಚಿನ ಕಲಾವಿದನಿಗೆ ಇದೊಂದು ಬಗೆಯ ಶ್ರದ್ಧಾಂಜಲಿ! "ಜೀವನವು ಸುಂದರ ಮತ್ತು ವಿರಾಟ್ ಸ್ವರೂಪದ್ದು -  ನೀರಿನಲ್ಲಿ ತೇಲುವ ...