ಲಾಕ್ ಡೌನ್ ಚುಟುಕಗಳು
ಲಾಕ್ ಡೌನ್ ಕಾಲದಲ್ಲಿ ಬರೆದ ಚುಟುಕಗಳು ರಾಜು ನನ್ನ ಫ್ರೆಂಡ್ ಎಂಎನ್ಎಚ್ ರಾಜು ಅಂತ ಓದಿಕೊಂಡಿಲ್ಲವಾದ್ರೂ ಸಹಜ ಬುದ್ಧಿವಂತ ಹುಟ್ಟಿದ್ದು ಮಾಗಡಿಯ ನಗುವಳ್ಳಿ ಅಂತ ಅವನ ತಂದೆಯ ಹೆಸರು ಹನುಮಂತ ಎಂದೂ ಬರೆದದ್ದು ಕಾಣೆ ಮಾ.ನ.ಹ. ರಾಜು ಅಂತ ಥ್ರೋ ಬ್ಯಾಕ್ ಮ್ಯಾನೇಜರ್ ನೀಡಿದ ಸಮಸ್ಯೆಗೆ ಪರಿಹಾರ ಇಂಜಿನಿಯರ್ ಕೊಡಬಾರದಾಗಿತ್ತು ಗುರುವಾರ ಸೂಕ್ತವಾಗಿದ್ದರೂ ವಾಪಸ್ ಬಂತು ರೀಬೌಂಡು ಯೋಚಿಸಲು ತಿಳಿದುಬಂತು ಯಾಕೆಂದು ಅಂದು ಮ್ಯಾನೇಜರ್‌ಗೆ ಥ್ರೋ ಬ್ಯಾಕ್ ಥರ್ಸ್ಡೇ ಆಚಾರ ಮೂರು ರುಕ್ಮಿಣಿಗೆ ಎಷ್ಟಿತ್ತು ಗೊತ್ತೇ ಮುತುವರ್ಜಿ ಪತಿದೇವ ಕೃಷ್ಣನ ತೂಕ ಕುರಿತು ಕಾಳಜಿ ತಂದಾಗ ಸುದಾಮ ಖಾರದವಲಕ್ಕಿ ಕೃಷ್ಣ ತಿಂದದ್ದು ಎರಡೇ ಹಿಡಿ ಮುಕ್ಕಿ ಮೂರನೇ ಹಿಡಿಗೇ ಬಸ್ ಕರೋ ಸರ್ ಜೀ. ಲಾಕ್ ಡೌನ್ ಅಲೆಮಾರಿ ಕೆಲವರು ಅಲೆಮಾರಿ ಜನಾಂಗ ಮನೆಯ ಹೊರಗೇ ಪಟ್ಟಾಂಗ ಈಗ "ಅಲ್ಲಿದೆ ನಮ್ಮ ಮನೆ ಇಲ್ಲಿಗೆ ಬಂದೆವು ಸುಮ್ಮನೆ" ಎಂದು ದಾಸರ ರಾಗ ಹಾಡುತ್ತಿರುವರೀಗ! ಕಳಪೆ ಕಿಟ್ಟು ಯಾವಾಗ ಹೋದ ಭಾರತ ಬಿಟ್ಟು ನಮ್ಮ ಕಿಟ್ಟು ಚೈನಾಗೆ, ಮಾನಗೆಟ್ಟು! ಇಲ್ಲಿ ಕನಕಪುರದಲ್ಲಿದ್ದಾಗಲೂ ಮಾರುತ್ತಿದ್ದದ್ದು ಕಳಪೆ ಮಾಲು ಈಗಂತೂ ಹೆಡ್ಲೈನ್ ನ್ಯೂಸ್ "ಕಳಪೆ ಚೈನಾ ಕಿಟ್ಟು" ಡೌನ್ ಡೌನ್ ಅದು ಡೌನು ಇದು ಡೌನು ಲಾಕ್ ಡೌನು ಸೀಲ್ ಡೌನು ಬರಲಿದೆಯೋ ಏನೇನು ಚಿಂತಿಸೆನು ನಾನಿನ್ನು ಏನು ಫಲ, ಲೋಕವೇ ಆದಾಗ ಅಪ್ ಸೈಡ್ ...