ಕೆಲಸವಿಲ್ಲದ ಸೂರ್ಯ ಅದೃಷ್ಟವಂತ
ಮೂಲ ಅಮೆರಿಕನ್ ಹಾಡು: ಹೇವನ್ ಗಿಲೆಸ್ಪಿ ಕನ್ನಡಕ್ಕೆ: ಸಿ. ಪಿ. ರವಿಕುಮಾರ್ ಬೆಳಗಾಗೆದ್ದು ಹೊರಟು ನಿಂತೆನೆಂದರೆ ನೋಡು ದೆವ್ವ ಬಂದವರಂತೆ ದಿನವಿಡೀ ದುಡಿತ ದಿನವಿಡೀ ಮೇಲೆ ಸ್ವರ್ಗದಲ್ಲುರುಳಾಡುವನು ಕೆಲಸವಿಲ್ಲದ ಸೂರ್ಯ, ಅದೃಷ್ಟವಂತ ರೇಗುವ ಹೆಂಡತಿಯ ಜೊತೆ ಏಗುತ್ತಾ ಮಕ್ಕಳಿಗಾಗಿ ಸುಕ್ಕಾಗಿದೆ ತೊಗಲು, ನೆರೆಬಂದು ಕೂದಲಿಗೆ ಬಾಗುತ್ತಿದೆ ಸೊಂಟ ದಿನವಿಡೀ ಮೇಲೆ ಸ್ವರ್ಗದಲ್ಲುರುಳಾಡುವನು ಕೆಲಸವಿಲ್ಲದ ಸೂರ್ಯ, ಅದೃಷ್ಟವಂತ ಮೇಲಿರುವ ದೇವರೇ ಕಣ್ಣಿಲ್ಲವೇ ನಿನಗೆ ಕಾಣುವುದಿಲ್ಲವೇ ನನ್ನ ಕಣ್ಣಲ್ಲಿನ ನೀರು? ಕರೆಸಿಕೋ ನನ್ನನ್ನೂ ಮೇಲಿರುವ ಸ್ವರ್ಗಕ್ಕೆ ಕಳಿಸಿಕೊಡು ಹಾರಾಡುವ ಬೆಳ್ಳಿತೇರು ಹಾರಿಸು ನನ್ನನ್ನೂ ವೈತರಿಣಿಯ ಮೇಲೆ ಕಳೆದುಹೋಗಲಿ ನನ್ನ ದುಃಖ ನೂರೆಂಟು ಕೊಡಬೇಡ ನನಗೆ ಬೇರಾವುದೂ ಕೆಲಸ ಸೂರ್ಯನಂತೆ ಸುಮ್ಮನೇ ಹೊರಳಾಡುವ ಹೊರತು ಮೇಲಿರುವ ದೇವರೇ ಕಣ್ಣಿಲ್ಲವೇ ನಿನಗೆ ಕಾಣುವುದಿಲ್ಲವೇ ನನ್ನ ಕಣ್ಣಲ್ಲಿ ನೀರು? ಕರೆಸಿಕೋ ನನ್ನನ್ನೂ ಮೇಲಿರುವ ಸ್ವರ್ಗಕ್ಕೆ ಕಳಿಸಿಕೊಡು ಹಾರಾಡುವ ಬೆಳ್ಳಿತೇರು ಹಾರಿಸು ನನ್ನನ್ನೂ ವೈತರಿಣಿಯ ಮೇಲೆ ಕಳೆದುಹೋಗಲಿ ನನ್ನ ದುಃಖ ನೂರೆಂಟು ಕೊಡಬೇಡ ನನಗೆ ಬೇರಾವುದೂ ಕೆಲಸ ಸೂರ್ಯನಂತೆ ಸುಮ್ಮನೇ ಹೊರಳಾಡುವ ಹೊರತು "ಕೆಲಸವಿಲ್ಲದ ಸೂರ್ಯ ಅದೃಷ್ಟವಂತ" ಎಂಬ ಹಾಡನ್ನು ರಚಿಸಿದವನು ಅಮೆರಿಕನ್ ಬರಹಗಾರ ಹೇವನ್ ಗಿಲೆಸ್ಪಿ. ತಂದೆ ವಿಲಿಯಮ್ ಗಿಲೆಸ್ಪಿ ಮತ್ತು ತಾಯಿ ಆನಾ ರೇಲಿಗೆ ಇ...