ಪೋಸ್ಟ್‌ಗಳು

Tyler Brule ಲೇಬಲ್ ಜೊತೆಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತಿದೆ

ಸ್ಥಳೀಯ ಉತ್ಪನ್ನ ಮತ್ತು ಗ್ರಾಮೀಣ ಬದುಕು ಕುರಿತು ಟೈಲರ್ ಬ್ರೂಲೆ

ಇಮೇಜ್
ಸಿ ಪಿ ರವಿಕುಮಾರ್  ಟೈಲರ್ ಬ್ರೂಲೆ ಎಂಬ ಕೆನಡಾ ದೇಶದ ಬರಹಗಾರ ಫೈನಾನ್ಷಿಯಲ್ ಟೈಮ್ಸ್ ಎಂಬ ಪತ್ರಿಕೆಗೆ ಅಂಕಣಕಾರ. ಆತನ ಇತ್ತೀಚಿನ ಅಂಕಣವನ್ನು ಓದುವ ಅವಕಾಶ ಪ್ರವಾಸದ ಸಮಯದಲ್ಲಿ ಸಿಕ್ಕಿತು. ಅದರಿಂದ ಕೆಲವು ಭಾಗಗಳನ್ನು ಇಲ್ಲಿ ಅನುವಾದಿಸಿ ಕೊಟ್ಟಿದ್ದೇನೆ. ನಿರುದ್ಯೋಗ: ಸ್ವಿಟ್ಜರ್ಲೆಂಡ್ ದೇಶದಲ್ಲಿ ನಿರುದ್ಯೋಗ ಬಹಳ ಕಡಮೆ. ನಿರುದ್ಯೋಗಿಗಳಿಗೆ ಆ ದೇಶದಲ್ಲಿ ಸಿಕ್ಕುವ ಭತ್ಯೆ ಕೂಡಾ ಕಡಿಮೆ. ಈ ಸಮಸ್ಯೆಗಳನ್ನು ಆ ದೇಶದವರು ಸ್ಥಳೀಯ ಮಟ್ಟದಲ್ಲಿ ಪರಿಗಣಿಸಿದ್ದಾರೆ.  ಸ್ಥಳೀಯ ಮಟ್ಟದಲ್ಲಿ ನಮ್ಮ ತೇರನ್ನು ಯಾರು ಎಳೆಯುತ್ತಿದ್ದಾರೆ ಎನ್ನುವುದನ್ನು ಗಮನಿಸುವುದು ಸುಲಭ.  ಡಿಗ್ರಿ ಬೇಕೆ ಬೇಡವೇ? : ಬೆಟ್ಟಗಳ ಮೇಲೆ ಹೈ-ಸ್ಪೀಡ್ ಕೇಬಲ್ ಎಳೆಯಲು ಅಥವಾ ಒಳ್ಳೆಯ ಹೋಟೆಲ್ ಮ್ಯಾನೇಜರ್ ಆಗಲು ಡಿಗ್ರಿಯೇ ಬೇಕು ಎಂದು ಯಾರು ಹೇಳಿದರು?  ಸ್ವಿಟ್ಜರ್ಲೆಂಡ್ ನಲ್ಲಿ ಅಂತೂ ಬೇಕಾಗಿಲ್ಲ. ಅಲ್ಲಿ ತರಬೇತಿಗೆ ಮಹತ್ವ ಕೊಡಲಾಗುತ್ತದೆ. ಇದರಿಂದ ಕೆಲಸ ಚೆನ್ನಾಗಿ ಗೊತ್ತಿರುವ ಕುಶಲಕರ್ಮಿಗಳ ನಿರ್ಮಾಣವಾಗುತ್ತದೆ. ಕೆಲಸಕ್ಕೆ ಬಾರದ ಡಿಗ್ರಿ ಪಡೆದ ಸಾವಿರಾರು ನಿರುದ್ಯೋಗಿಗಳನ್ನು ಸೃಷ್ಟಿಸುವುದಕ್ಕಿಂತ ಇದು ವಾಸಿ.  ಸ್ಥಳೀಯರಿಗೆ ಪ್ರೋತ್ಸಾಹ ನೀಡಿ.  ಸ್ಥಳೀಯವಾಗಿ ಬೆಳೆದದ್ದಕ್ಕೆ, ಸ್ಥಳೀಯವಾಗಿ ತಯಾರಾದದ್ದಕ್ಕೆ ಸ್ವಿಟ್ಜರ್ಲೆಂಡ್ ದೇಶದಲ್ಲಿ ಮಹತ್ವ ಕೊಡಲಾಗುತ್ತದೆ. ಇದರಿಂದ ದೇಶದಲ್ಲಿರುವ ಸಣ್ಣ-ಪುಟ್ಟ ಕೈ...