ಬಾಪುವನ್ನು ಕಂಡ ಹುಡುಗ

ಮೂಲ - ರಾಮ್ ಪ್ರದೇಶ್ ಶಾಸ್ತ್ರಿ 
ಕನ್ನಡಕ್ಕೆ -  ಸಿ ಪಿ ರವಿಕುಮಾರ್ 

ಒಮ್ಮೆ ದೆಹಲಿಯಲ್ಲಿರುವ ಒಂದು ಹರಿಜನ ಆಶ್ರಮಕ್ಕೆ ಗಾಂಧೀಜಿ ಭೇಟಿ ಕೊಟ್ಟರು. ಆಶ್ರಮದಲ್ಲಿದ್ದ ಕಾರ್ಯಾಗಾರದಲ್ಲಿ ಹುಡುಗರಿಗೆ ಯಾವುದಾದರೂ ಉದ್ಯೋಗದಲ್ಲಿ ತರಬೇತಿ ನೀಡಲಾಗುತ್ತಿತ್ತು.  
ಗಾಂಧೀಜಿ ಕಾರ್ಯಾಗಾರವನ್ನು ಹೊಕ್ಕು ಸುತ್ತಲೂ ಸಮೀಕ್ಷೆ ನಡೆಸುತ್ತಿರುವಾಗ ಹುಡುಗರು ತಾವು  ಮಾಡುತ್ತಿದ್ದ ಕೆಲಸ ನಿಲ್ಲಿಸಿ ತಮ್ಮನ್ನು ನೋಡಲು ಬಂದ  ಹಿರಿಯ ನೇತಾರನ ಕಡೆ ನಿಬ್ಬೆರಗಿನಿಂದ ನೋಡುತ್ತಿದ್ದರು. ಅಲ್ಲೊಬ್ಬ ಹುಡುಗ ಅಗ್ಗಿಷ್ಟಿಕೆಯ ಮೇಲೆ ರೊಟ್ಟಿಗಳನ್ನು ಸುಡುತ್ತಿದ್ದ. ಅವನು ತನ್ನ ಕೆಲಸದಲ್ಲಿ ಸಂಪೂರ್ಣ ತಲ್ಲೀನನಾಗಿದ್ದರಿಂದ ಗಾಂಧೀಜಿ ಬಂದಿದ್ದನ್ನು ಅವನು ಗಮನಿಸಲಿಲ್ಲ. ಗಾಂಧೀಜಿ ಅವನನ್ನು  ಗಮನಿಸಿ ಮುಂದೆ ಸಾಗಿದರು. 
ಕಾರ್ಯಾಗಾರದಿಂದ  ಹೊರಗೆ ಬಂದಾಗ ಒಬ್ಬ ಹುಡುಗ "ಅಯ್ಯೋ! ರಾಜು ರೊಟ್ಟಿ ಮಾಡೋದರಲ್ಲಿ ಮುಳುಗಿಹೋಗಿದ್ದಾನೆ - ಅವನು ಬಾಪೂಜಿಯನ್ನು ನೋಡಲೇ ಇಲ್ಲ!" ಎಂದು ಪೇಚಾಡಿದ. ಬಾಪು ತಕ್ಷಣ " ಇವತ್ತು ಇಲ್ಲಿ ನನ್ನನ್ನು ನಿಜವಾಗಲೂ ಯಾರಾದರೂ ನೋಡಿದ್ದರೆ ಅದು ರೊಟ್ಟಿ ಮಾಡುವ ರಾಜು ಮಾತ್ರ!" ಎಂದರು. 

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

"ಬಾರಿಸು ಕನ್ನಡ ಡಿಂಡಿಮವ" - ಒಂದು ಮರು ಓದು

ಕರ್ನಾಟಕ ನಾಡಗೀತೆ - ಒಂದು ಸರಳ ಅರ್ಥವಿವರಣೆ

ಆಡು ಮುಟ್ಟದ ಸೊಪ್ಪಿಲ್ಲ (ಹರಟೆ)