ವರ್ಣಪಥ (ಮಕ್ಕಳ ಕವಿತೆ)
ಮೂಲ : ಕ್ರಿಸ್ಟಿನಾ ರೊಸೆಟ್ಟಿ
ಕನ್ನಡಕ್ಕೆ : ಸಿ.ಪಿ. ರವಿಕುಮಾರ್

ನದಿಯಲ್ಲಿ ತೇಲುತ್ತವೆ ದೋಣಿ
ಸಾಗರದ ಮೇಲೆ ತೇಲುತ್ತವೆ ನಾವೆ ...
ಆಗಸದಲ್ಲಿ ತೇಲುವ ಮೋಡಗಳು ಮಾತ್ರ
ಇವೆಲ್ಲಕ್ಕಿಂತ ಸುಂದರವಾಗಿ ಕಾಣುತ್ತವೆ
ಕಟ್ಟಿದ್ದಾರೆ ನದಿಗಳ ಮೇಲೆ
ಒಂದಕ್ಕಿಂತ ಮತ್ತೊಂದು ಸುಂದರತರ ಸೇತುವೆ
ಆದರೆ ಹಾದು ಹೋಗುತ್ತದಲ್ಲ ಮರಗಳ ಮೇಲೆ
ಸ್ವರ್ಗಕ್ಕೆ ತೂಗಿಬಿಟ್ಟ ಏಣಿಯಂತೆ
ಭೂಮಿಗೂ ಗಗನಕ್ಕೂ ನಡುವಣ ವರ್ಣಪಥ
ಸುಂದರತಮ ಎಲ್ಲ ಸೇತುವೆಗಳಿಗಿಂತ
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ