ಕನಸು

 ಮೂಲ ಕವಿತೆ:  ವಿಲಿಯಂ ವರ್ಡ್ಸ್ವರ್ತ್

ಅನುವಾದ: ಸಿ. ಪಿ. ರವಿಕುಮಾರ್



ಎನ್ನೆದೆ ಕುಣಿದಾಡುವುದು ಕಂಡಾಗ ಕಾಮನಬಿಲ್ಲು!
ಇದೇನು ಇಂದಿನ ಮಾತಲ್ಲ, ಚಿಕ್ಕಂದಿನಿಂದಲೂ
ಮುಂದುವರೆದಿದೆ ನಾನೀಗ ಎತ್ತರದ ಆಳಾದರೂ
ಇದು ಹೀಗೇ ಇರಲಿ ನೆರೆತಾಗ ತಲೆಗೂದಲು:
ಇಲ್ಲದಿದ್ದರೆ ದೇವ ಕರುಣಿಸಲಿ ಸಾವು!
ಮಾನವನ ತಂದೆಯಲ್ಲವೆ ಶಿಶು?
ನನ್ನೆದೆಯಲ್ಲಿ ಬೆಳಕು ಬೀರುವುದೊಂದು ಕನಸು: 
ಬೆಸೆದುಕೊಂಡಿರಲಿ ನನ್ನ ದಿನಗಳು ಒಂದಕ್ಕೊಂದು
ಮಾನವಸಹಜ ಭಕ್ತಿಯಿಂದ ಎಂದು.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

"ಬಾರಿಸು ಕನ್ನಡ ಡಿಂಡಿಮವ" - ಒಂದು ಮರು ಓದು

ಕರ್ನಾಟಕ ನಾಡಗೀತೆ - ಒಂದು ಸರಳ ಅರ್ಥವಿವರಣೆ

ಆಡು ಮುಟ್ಟದ ಸೊಪ್ಪಿಲ್ಲ (ಹರಟೆ)