ನಾಳೆ
ಮೂಲ ಕವಿತೆ: ಸಾರಾ ಟೀಸ್ಡೇಲ್
ಕನ್ನಡ ಅನುವಾದ: ಸಿ. ಪಿ. ರವಿಕುಮಾರ್
ಹೊಯ್ಯುವುದು ಮೆಲ್ಲಗೆ ಮಳೆ, ನೆಲದ ಗಂಧ ಹರಡುವುದು ಗಾಳಿಯೊಳು
ಸುತ್ತುವುವು ಸ್ವಾಲೋ ಹಕ್ಕಿಗಳು ಮಾಡುತ್ತ ಥಳಥಳ ಹೊಳೆವ ಸದ್ದು
ಹಾಡುವುವು ಕೆರೆಬಾವಿಗಳಲ್ಲಿ ಕಪ್ಪೆಗಳು ಕವಿದಾಗ ಇರುಳು
ಕಾಡು ಪ್ಲಮ್ ಮರಗಳು ನಡುಗುವುವು ಬಿಳಿಯ ಹೂ ತೊಟ್ಟು.
ಸುತ್ತುವುವು ಸ್ವಾಲೋ ಹಕ್ಕಿಗಳು ಮಾಡುತ್ತ ಥಳಥಳ ಹೊಳೆವ ಸದ್ದು
ಹಾಡುವುವು ಕೆರೆಬಾವಿಗಳಲ್ಲಿ ಕಪ್ಪೆಗಳು ಕವಿದಾಗ ಇರುಳು
ಕಾಡು ಪ್ಲಮ್ ಮರಗಳು ನಡುಗುವುವು ಬಿಳಿಯ ಹೂ ತೊಟ್ಟು.
ರಾಬಿನ್ ಹಕ್ಕಿಗಳು ಧರಿಸುವುವು ರೆಕ್ಕೆಗಳಲ್ಲಿ ಅಗ್ನಿಜ್ವಾಲೆ
ಹಾಡುವವು ಬೇಲಿಯ ತಂತಿಯ ಮೇಲೆ ಸಿಳ್ಳೆ ಹೊಡೆಯುತ್ತ
ಇವರಲ್ಲಿ ಯಾರಿಗೂ ತಿಳಿಯದು ಯಾಕೆ ನಡೆಯಿತು ಯುದ್ಧ
ಯಃಕಶ್ಚಿತ್ ಕೌತುಕವಿಲ್ಲ ಮಗುಚಿದಾಗ ಇತಿಹಾಸದ ಹಾಳೆ
ನಾಶವಾದರೂ ಸಂಪೂರ್ಣವಾಗಿ ಮನುವಂಶ
ಇವರಾರಿಗೂ ಇಲ್ಲ ಯಃಕಶ್ಚಿತ್ ಪರಿವೆ
ನಸುಕು ಕಣ್ತೆರೆದ ವಸಂತನಿಗೆ ಇರದು ಅರಿವೇ
ನಾವೆಲ್ಲ ತೆರಳಿದೆವೆಂಬ ಇತಿಹಾಸದ ಅಂಶ.
ಇವರಾರಿಗೂ ಇಲ್ಲ ಯಃಕಶ್ಚಿತ್ ಪರಿವೆ
ನಸುಕು ಕಣ್ತೆರೆದ ವಸಂತನಿಗೆ ಇರದು ಅರಿವೇ
ನಾವೆಲ್ಲ ತೆರಳಿದೆವೆಂಬ ಇತಿಹಾಸದ ಅಂಶ.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ