ನೆರವಿಗಿರುತಿರಲು ಜಾನಕಿನಾಥ
(ತುಲಸೀದಾಸರ ರಚನೆಯ ಅನುವಾದ)
"ಜಾನಕಿನಾಥ ಸಹಾಯ ಕರೇ..." ಎಂದು ಪ್ರಾರಂಭವಾಗುವ ತುಲಸೀದಾಸರ ಈ ರಚನೆಯನ್ನು ಅನೇಕ ಹಾಡುಗಾರರು ಹಾಡಿದ್ದಾರೆ. ಈ ಜನಪ್ರಿಯ ರಚನೆಯ ಅನುವಾದವನ್ನು ಕೆಳಗೆ ಪ್ರಯತ್ನಿಸಿದ್ದೇನೆ. ಶ್ರೀರಾಮನ ಪರಮಭಕ್ತರಾಗಿದ್ದ ತುಲಸೀದಾಸರು ತಮ್ಮ ಸುಲಲಿತ ಶೈಲಿಯಲ್ಲಿ ರಾಮನನ್ನು ಸ್ತುತಿಸಿದ್ದಾರೆ. ಯಾರ ನೆರವಿಗೆ ಸಾಕ್ಷಾತ್ ಶ್ರೀರಾಮನೇ ಇದ್ದಾನೋ ಅವನಿಗೆ ಯಾರೂ ಏನೂ ಮಾಡಲಾರರು ಎಂಬುದು ಕವಿಯ ಸಂದೇಶ. ಗ್ರಹಣಕಾಲದಲ್ಲಿ ರಾಹು-ಕೇತುಗಳಿಗೆ ಹೆದರುವ ಜನರಿಗೆ ಈ ರಚನೆ ಸಾಂತ್ವನ ನೀಡಬಹುದು.
ನೆರವಿಗಿರುತಿರಲು ಜಾನಕಿನಾಥ ಬರದು ನಿನ್ನ ಬಳಿ ಯಾವ ವಿಪತ್ತು ।।
ತರುವರು ಶುಭಫಲ ರವಿ ಶಶಿ ಮಂಗಳ, ಗುರು ಭೃಗುಸುತ ಬುಧ ವರಗಳನಿತ್ತು ।
ಇರದು ಗಮ್ಯತೆಯು ರಾಹುಕೇತುವಿಗೆ, ಸರಿವನು ಶನಿ ಹೆಜ್ಜೆಯ ಹಿಂದಿಟ್ಟು ।।
ದುರುಳ ದುಶ್ಶಾಸನ ವಿಮಲ ದ್ರೌಪದಿಯ ಸೀರೆಯನೆಳೆಯಲು ಸಾಹಸಪಟ್ಟು ।
ಪೊರೆಯಲು ಕರುಣಾನಿಧಿ ಬರಲಿಲ್ಲವೇ ಹರಿದು ಮೋಡ ಬರುವಂತೆ ಸವಿತೃ ।।
ಯಾರ ಪರವೋ ಕರುಣಾನಿಧಿ ಜಗದೊಳು ತೆರೆವುದು ಅವರಿಗೆ ಭಾಗ್ಯಜಗತ್ತು ।
ಎರಗುವೆ ತುಲಸೀದಾಸ ರಘುವರನ ಸುಖದಾಯಿ ಚರಣಕೆ ಯಾವತ್ತೂ ।।
ಮೂಲ ರಚನೆ:
जानकी नाथ सहाय करें जब कौन बिगाड़ करे नर तेरो ॥
सुरज मंगल सोम भृगु सुत बुध और गुरु वरदायक तेरो ।
राहु केतु की नाहिं गम्यता संग शनीचर होत हुचेरो ॥
दुष्ट दु:शासन विमल द्रौपदी चीर उतार कुमंतर प्रेरो ।
ताकी सहाय करी करुणानिधि बढ़ गये चीर के भार घनेरो ॥
जाकी सहाय करी करुणानिधि ताके जगत में भाग बढ़े रो ।
रघुवंशी संतन सुखदायी तुलसीदास चरनन को चेरो ॥
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ