2020



ಎರಡು ಸಾವಿರದ ಇಪ್ಪತ್ತು 
ಪಾಪ ಬೇಜಾರು ಮಾಡಿಕೊಂಡಿತ್ತು
ಜನ ಬೈತಾರೆ ನನ್ನ, ಮಾಡಿಕೋತಾರೆ ಸಿಟ್ಟು
ತಾವು ಮಾಡಿದ್ದನ್ನ ಪೂರ್ತಿ ಮರೆತೇಬಿಟ್ಟು

ಗೋಡೆಯ ಮೇಲೆ ದೊಡ್ಡಕ್ಷರದಲ್ಲಿ ಬರೆದಿತ್ತು
ತಂದುಕೊಳ್ಳುತ್ತೀರಿ ನಿಮಗೆ ನೀವೇ ವಿಪತ್ತು
ಕೇಳಿದಿರಾ ಕಿವಿಗೊಟ್ಟು?
ಬಾಚಿಕೊಳ್ಳುವುದರಲ್ಲಿ ಸಂಪತ್ತು
ನಿಮ್ಮ ಧ್ಯಾನವೆಲ್ಲಾ ಇತ್ತು
ನವನವೋನ್ಮೇಷ ಮದಿರೆಯ ಮತ್ತು
ಪೂರ್ತಿ ಆವರಿಸಿತ್ತು
ಹೇಗಿತ್ತು ಅಂದರೆ ನಿಮ್ಮ ಗಮ್ಮತ್ತು
ಭೂಮಿಯ ಯಕೃತ್ತು
ಮುಕ್ಕಾಲುಭಾಗ ಕೆಟ್ಟುಹೋಗಿತ್ತು

ನನ್ನ ತಲೆಗೇಕೆ ಕಟ್ಟುವಿರಿ ನಿಮ್ಮ ಸ್ವತ್ತು
ಅನುಭವಿಸಿ ನೀವು ಗಳಿಸಿದ ಸಂಪತ್ತು
ಎಂದು ಇನ್ನೇನೇನೋ ಹೇಳುತ್ತಿತ್ತು
ಅಷ್ಟರಲ್ಲಿ ಹಗಲ್ಗನಸು ಮುರಿದು ಬಿತ್ತು
ಎಚ್ಚರವಾಗಿತ್ತು ಎನ್ನಲು ಯಾಕೋ ಹಿಂದೇಟು

ಸಿ.ಪಿ. ರವಿಕುಮಾರ್

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

"ಬಾರಿಸು ಕನ್ನಡ ಡಿಂಡಿಮವ" - ಒಂದು ಮರು ಓದು

ಕರ್ನಾಟಕ ನಾಡಗೀತೆ - ಒಂದು ಸರಳ ಅರ್ಥವಿವರಣೆ

ಆಡು ಮುಟ್ಟದ ಸೊಪ್ಪಿಲ್ಲ (ಹರಟೆ)