ಮತ್ತೆ ಬಂದಿದೆ ಹೊಸವರ್ಷ

ಮತ್ತೆ ಸರಕಾರ ಉರುಳಿಹೋಗುವ ಭೀತಿ
ಬಿಟ್ಟು ಎಲ್ಲಾ ಮಾನ ಹೊಸವರ್ಷ ಬಂದಿದೆ
ಬಿಟ್ಟು ಎಲ್ಲಾ ಮಾನ ಹೊಸವರ್ಷ ಬಂದಿದೆ
ಮತ್ತೆ ಬ್ರಿಗೇಡ್ ರೋಡಿನಲ್ಲಿ ಗಂಡಸರ ತಳ್ಳಾಟ
ಕೊಟ್ಟು ಒಂದು ಕಪಾಳಕ್ಕೆ ಹೊಸವರ್ಷ ಬಂದಿದೆ
ಕೊಟ್ಟು ಒಂದು ಕಪಾಳಕ್ಕೆ ಹೊಸವರ್ಷ ಬಂದಿದೆ
ಮತ್ತೆ ರಾಜಕಾರಣ ಕುದುರೆ ಕಾಲೆಳೆದಾಟ
ತುತ್ತೂರಿ ಊದುತ್ತ ಹೊಸವರ್ಷ ಬಂದಿದೆ
ತುತ್ತೂರಿ ಊದುತ್ತ ಹೊಸವರ್ಷ ಬಂದಿದೆ
ಮತ್ತೆ ಯಾರಿಗೋ ನೂರಾಹತ್ತನೇ ಸನ್ಮಾನ
ಸುತ್ತಿ ತಲೆಮಾರಿಗೆ ಪೇಟ ಹೊಸವರ್ಷ ಬಂದಿದೆ
ಸುತ್ತಿ ತಲೆಮಾರಿಗೆ ಪೇಟ ಹೊಸವರ್ಷ ಬಂದಿದೆ
ಮತ್ತೆ ಕನ್ನಡಕ್ಕೆ ಅನ್ಯಾಯ ಅನ್ಯಾಯ ಕೂಗು ಹಾ-
ಕುತ್ತ ಬ್ರೋ ಹ್ಯಾಪೀ ನ್ಯೂ ಇಯರ್ ಬಂದಿದೆ
ಕುತ್ತ ಬ್ರೋ ಹ್ಯಾಪೀ ನ್ಯೂ ಇಯರ್ ಬಂದಿದೆ
ಮತ್ತೆ ಭಗವಾನ ರಾಮನಿಂದಾಸ್ತೋತ್ರ
ಸತ್ತು ಹಳೆವರ್ಷ ಹೊಸವರ್ಷ ಬಂದಿದೆ
ಸತ್ತು ಹಳೆವರ್ಷ ಹೊಸವರ್ಷ ಬಂದಿದೆ
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ