ಯಥಾಯಥಾಹಿ ಧರ್ಮಸ್ಯ
ಇದ್ದಲ್ಲೇ ಇರೋಣ ನಾವೆಲ್ಲಾ
ಹೀಗೇ ಚೆನ್ನಾಗಿದೆಯಲ್ಲ
ಬೇಜಾರಾದರೆ ಮಾಡೋಣ ಕಿತಾಪತಿ
ಒಬ್ಬರನ್ನೊಬ್ಬರು ಕಿತ್ತೋಣ
ಸುಪ್ರೀಂ ಕೋರ್ಟಿಗೆ ಹೋಗೋಣ
ಅರ್ಜಿ ಹಾಕೋಣ
ಸಂಸ್ಕೃತ ಬ್ರಾಹ್ಮಣ ದ್ರಾವಿಡ ಶೂದ್ರ
ಚರ್ಚಿಸುತ್ತ ಕೂಗಾಡೋಣ
ಎಡಗೈಯಿಂದ ಬಲಗೆನ್ನೆಗೆ
ಬಲಗೈಯಿಂದ ಎಡಗೆನ್ನೆಗೆ
ಕಪಾಳ ಮೋಕ್ಷ ಮಾಡೋಣ
ಕಲ್ಲೆಸೆದು ಹಲ್ಮಸೆದು ಹಂಗಿಸೋಣ
ಒಬ್ಬರಿನ್ನೊಬ್ಬರ ಕಾಲೆಳೆಯೋಣ
ಇದ್ದಲ್ಲೇ ಇರೋಣ ನಾವೆಲ್ಲಾ
ಹೀಗೇ ಚೆನ್ನಾಗಿದೆಯಲ್ಲ
ನಮಗೇತಕೆ ಗೊತ್ತು-ಗುರಿ
ಹೀಗೇ ಚೆನ್ನಾಗಿದೆಯಲ್ಲ
ನಮಗೇತಕೆ ಗೊತ್ತು-ಗುರಿ
ಸಾಕಾಗುವಷ್ಟಿದೆ ಹೊಟ್ಟೆ ಉರಿ
ನಮಗೇತಕೆ ಹಾರಾಟ
ಮರೆತಿದ್ದೇವೆ ರೆಕ್ಕೆ-ಗರಿ
ಅಲ್ಲಿ ಹಾಗಂತೆ ಇಲ್ಲಿ ಹೀಗಂತೆ
ಡ್ರೈವರ್ ರಹಿತ ಕಾರಂತೆ
ಇದೆಯಂತೆ ಏಐ ಕೃತಕ ಬುದ್ಧಿಮತ್ತೆ
ವಾವ್ ಸೂಪರ್ ಚಿಂದಿ
ಇಲ್ಲೇನಿದ್ದರೂ ಬಿಲಿಯನ್ ಮಂದಿ
ನಮಗೇತಕೆ ಹಾರಾಟ
ಮರೆತಿದ್ದೇವೆ ರೆಕ್ಕೆ-ಗರಿ
ಅಲ್ಲಿ ಹಾಗಂತೆ ಇಲ್ಲಿ ಹೀಗಂತೆ
ಡ್ರೈವರ್ ರಹಿತ ಕಾರಂತೆ
ಇದೆಯಂತೆ ಏಐ ಕೃತಕ ಬುದ್ಧಿಮತ್ತೆ
ವಾವ್ ಸೂಪರ್ ಚಿಂದಿ
ಇಲ್ಲೇನಿದ್ದರೂ ಬಿಲಿಯನ್ ಮಂದಿ
ಧೂಳು,ಟ್ರಾಫಿಕ್, ನಾಯಿ, ಹಂದಿ
ಎನ್ನುತ್ತಾ ಹತಾಶರಾಗೋಣ
ಆದರೂ
ಇಲ್ಲೇ ಇರೋಣ ನಾವೆಲ್ಲಾ
ಹೀಗೇ ಚೆನ್ನಾಗಿದೆಯಲ್ಲ
ಯಥಾಸ್ಥಿತಿ ಯಥಾಗತಿ
ಯಥಾಯಥಾಹಿ ಧರ್ಮಸ್ಯ
ಗ್ಲಾನಿರ್ಭವತಿ ಭಾರತ
ಇದ್ದಲ್ಲೇ ಇರೋಣ ನಾವೆಲ್ಲಾ
ಹೀಗೇ ಚೆನ್ನಾಗಿದೆಯಲ್ಲ
ಎನ್ನುತ್ತಾ ಹತಾಶರಾಗೋಣ
ಆದರೂ
ಇಲ್ಲೇ ಇರೋಣ ನಾವೆಲ್ಲಾ
ಹೀಗೇ ಚೆನ್ನಾಗಿದೆಯಲ್ಲ
ಯಥಾಸ್ಥಿತಿ ಯಥಾಗತಿ
ಯಥಾಯಥಾಹಿ ಧರ್ಮಸ್ಯ
ಗ್ಲಾನಿರ್ಭವತಿ ಭಾರತ
ಇದ್ದಲ್ಲೇ ಇರೋಣ ನಾವೆಲ್ಲಾ
ಹೀಗೇ ಚೆನ್ನಾಗಿದೆಯಲ್ಲ
-- ಸಿ. ಪಿ. ರವಿಕುಮಾರ್
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ