ಗ್ಯಾಲರಿ (ಅತಿಸಣ್ಣಕತೆ)

White and Black Wall Paint

ಸ್ವಾಮೀಜಿ ಬಹಳ ಬೇಸರ ಮಾಡಿಕೊಂಡಿದ್ದರು.

"ಯಾಕೆ ಸ್ವಾಮೀಜಿ? ಏನಾಯಿತು?" ಎಂದು ಶಿಷ್ಯರು ಪ್ರಶ್ನಿಸಿದರು. ಸ್ವಾಮೀಜಿ ಅವರ ಕಡೆಗೆ ಬೇಸರದಿಂದ ನೋಡಿದರೇ ಹೊರತು ಮಾತಾಡಲಿಲ್ಲ.

ಕೊನೆಗೂ ಒಬ್ಬ ಜಾಣ ಅವರ ಬೇಸರದ ಕಾರಣವನ್ನು ಹುಡುಕಿಯೇ ಬಿಟ್ಟ.

ಸ್ವಾಮೀಜಿ ತೆರೆಯಬೇಕೆಂದು ಉದ್ದೇಶಿಸಿದ್ದ ದೇವರ ಚಿತ್ರಪಟಗಳ ಗ್ಯಾಲರಿಗೆ ಅವರು "ಡಿವೈನ್
ಗ್ಯಾಲರಿ" ಎಂದು ಹೆಸರಿಡಲು ಇಚ್ಛಿಸಿದ್ದರು. ಅಂದೇ ಬೆಳಗ್ಗೆ ಶಿಷ್ಯರು ಸೇರಿ ಬೋರ್ಡ್ ಬರೆಸಿ ತಾವೇ ಖುದ್ದಾಗಿ ನಿಂತು ಅದನ್ನು ಏರಿಸಿ ಬಂದಿದ್ದರು. ತಮ್ಮ ಕೆಲಸಕ್ಕೆ ಸ್ವಾಮೀಜಿ ಸಂತುಷ್ಟರಾಗಿ ಏನಾದರೂ ಬಹುಮಾನ ನೀಡಬಹುದು ಎಂದು ಕಾಯುತ್ತಿದ್ದರು. ಸ್ವಾಮೀಜಿ ಬಂದರು. ಬೋರ್ಡ್ ನೋಡಿದರು. ತುಂಬಾ ಆಘಾತವಾದವರಂತೆ ಕಂಡರು. ಸ್ವಾಮೀಜಿಯನ್ನು ಏನು ಕೇಳಿದರೂ ಮೌನ.

ಕೊನೆಗೂ ಸ್ವಾಮೀಜಿಯವರ ದುಃಖದ ಕಾರಣ ಬೆಳಕಿಗೆ ಬಂತು. ಅವರ ಚಿತ್ರಪಟ ಗ್ಯಾಲರಿಗೆ ಹಾಕಿದ ಬೋರ್ಡಿನ ಮೇಲೆ ದೊಡ್ಡ ಅಕ್ಷರಗಳಲ್ಲಿ "ದಿ ವೈನ್ ಗ್ಯಾಲರಿ" ಎಂದು ಬರೆಯಲಾಗಿತ್ತು.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

"ಬಾರಿಸು ಕನ್ನಡ ಡಿಂಡಿಮವ" - ಒಂದು ಮರು ಓದು

ಕರ್ನಾಟಕ ನಾಡಗೀತೆ - ಒಂದು ಸರಳ ಅರ್ಥವಿವರಣೆ

ಆಡು ಮುಟ್ಟದ ಸೊಪ್ಪಿಲ್ಲ (ಹರಟೆ)