ಸ್ನೇಹ ... !

ಮೂಲ ಹಿಂದಿ ಕವಿತೆ - ಹರಿವಂಶರಾಯ್ ಬಚ್ಚನ್ 

ಕನ್ನಡ ಅನುವಾದ - ಸಿ ಪಿ ರವಿಕುಮಾರ್


ಸ್ನೇಹ -
ತಾನು ಪರೀಕ್ಷೆ ಒಡ್ಡುವುದಿಲ್ಲ
ತನ್ನನ್ನು ಪರೀಕ್ಷೆಗೆ ಒಡ್ಡಿಕೊಳ್ಳುವುದೂ ಇಲ್ಲ

ಹೇಳುತ್ತೇನೆ ಕೇಳು ಸ್ನೇಹ ಏನೆಂದು -
ಮಳೆಯಲ್ಲಿ ನೆಂದ ಚೆಹರೆಯ ಮೇಲೂ
ಗುರುತಿಸುವುದಿದೆಯಲ್ಲ ಕಣ್ಣೀರ ಕಲೆ 
ಸ್ನೇಹದ ಗುರುತೆಂದರೆ ನೋಡು, ಅದೇ!

ಇಂದು ಕಳೆದೆ ಒಂದಿಷ್ಟು ಹೊತ್ತು ಭಗವಂತನ ಜೊತೆ
ನನ್ನ ಬಗ್ಗೆ ಸಾಕಷ್ಟು ಆಯಿತು ಮಾತುಕತೆ
ನಾನೆಂದೆ - "ಎಂಥೆಂಥ ಗೆಳೆಯರಿದ್ದಾರೆ ನನಗೆ!
ನನ್ನ ಭಾಗ್ಯಕ್ಕೆ ತುಂಬಿ ಬರುತ್ತದೆ ಎದೆ"

ಭಗವಂತನು ಹೀಗೆಂದ: 
"ಜೋಪಾನ! ಕಳೆದುಕೊಂಡೀಯೆ ಜೋಕೆ!"
ನನ್ನ ಮೆಚ್ಚಿನವರು ಅವರು,
ಹೇಗೋ ಬಂದಿದ್ದಾರೆ ನಿನ್ನ ಭಾಗಕ್ಕೆ!"

ದಿನಗಳು ಕಳೆದುಹೋಗಿ ಉಳಿಯುತ್ತವೆ ಸವಿನೆನಪು
ಕತೆಗಳಾಗಿ ಉಳಿಯುತ್ತವೆ ನಡೆದು ಹೋದ ಮಾತು
ಆದರೆ ಗೆಳೆಯರೋ! ಇರುವರು ಸದಾ ನಮ್ಮ ಹೃದಯಕ್ಕೆ  ಹತ್ತಿರದಲ್ಲಿ 
ಕೆಲವೊಮ್ಮೆ ಮುಗುಳ್ನಗೆಯಾಗಿ, ಕೆಲವೊಮ್ಮೆ ಕಣ್ಣಲ್ಲಿ ಸುರಿವ ಜಲವಾಗಿ.

---
Translation of a poem by Harivansha Rai Bachchan 
C.P. Ravikumar

ಕಾಮೆಂಟ್‌ಗಳು

  1. हरिवंशराय बच्चन

    दोस्ती...!
    ना कभी इम्तिहान लेती है,
    ना कभी इम्तिहान देती है
    दोस्ती तो वो है -जो बारिश में भीगे चेहरे पर भी,
    आँसुओं को पहचान लेती है ।
    आज रब से मुलाकात की;
    थोड़ी सी आपके बारे में बात की;
    मैंने कहा क्या दोस्त है;
    क्या किस्मत पाई है;
    रब ने कहा संभाल के रखना;
    मेरी पसंद है, जो तेरे हिस्से में आई है,
    दिन बीत जाते है सुहानी यादे बनकर ,
    बाते रह जाती है कहानी बनकर पर दोस्त तो हमेशा दिल के करीब रहेंगे,
    कभी मुस्कान तो कभी आँखों का पानी बनकर.......

    ಪ್ರತ್ಯುತ್ತರಅಳಿಸಿ

ಕಾಮೆಂಟ್‌‌ ಪೋಸ್ಟ್‌ ಮಾಡಿ

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

"ಬಾರಿಸು ಕನ್ನಡ ಡಿಂಡಿಮವ" - ಒಂದು ಮರು ಓದು

ಕರ್ನಾಟಕ ನಾಡಗೀತೆ - ಒಂದು ಸರಳ ಅರ್ಥವಿವರಣೆ

ಆಡು ಮುಟ್ಟದ ಸೊಪ್ಪಿಲ್ಲ (ಹರಟೆ)