ಎಚ್ಚರ

ಸಿ. ಪಿ. ರವಿಕುಮಾರ್

(ಯಜ್ಞ ಆಚಾರ್ಯ ಅವರ ಛಾಯಾಚಿತ್ರದಿಂದ ಸ್ಫೂರ್ತಿ ಪಡೆದ ಅತಿ ಸಣ್ಣಕತೆ)

ಜ್ಜಿಯ ಕತೆಯಲ್ಲಿ ಬೇಟೆಗೆ ಹೋದ ರಾಜ ಕಾಡಿನಲ್ಲಿ ಕಳೆದು ಹೋದ. ಮರದ ಮೇಲೆ ಹತ್ತಿ ನೋಡಿದರೆ ದೂರದಲ್ಲಿ ಎಲ್ಲೋ ಬೆಳಕು ಕಾಣಿಸಿತು. ಮನೆಯ ಮೇಲುಛಾವಣಿಯಿಂದ ಹೊಗೆ ಬರುತ್ತಿತ್ತು! ಅದೇ ಅಡಗೂಲಜ್ಜಿಯ ಮನೆ! ಸದ್ಯ ಬದುಕಿದೆ! ಅಂತ ಲಗುಬಗೆಯಿಂದ ರಾಜ ಮರದಿಂದ ಕೆಳಗಿಳಿದು ಬಂದಾಗ ...

"ಆಗ ಏನಾಯಿತಜ್ಜೀ?" ಮುಂಗೈಮೇಲೆ ಮುಖವನ್ನೂರಿ ಕಥೆ ಕೇಳುತ್ತಿದ್ದ ಮಗು ಕೇಳಿತು.

ಅಜ್ಜಿ ಆಕಳಿಸುತ್ತಾ "ಏನಿಲ್ಲ ಮಗು, ರಾಜ ಮೋಟರ್ ಬೈಕ್ ಏರಿ ಅಜ್ಜಿಯ ಮನೆಗೆ ಹೋದ, ಊಟ ಮಾಡಿ ಮಲಗಿದ. ಇನ್ನು ನೀನೂ ಮಲಗು. ನಾಳೆ ಬೇಗ ಏಳಬೇಕಲ್ಲ" ಎಂದಳು. ಹೊರಗೆ ಮೋಟರ್ ಬೈಕ್ ಸದ್ದಿನಿಂದ ನಿದ್ದೆ ಬಾರದೇ ಇಬ್ಬರೂ ಬಹಳ ಹೊತ್ತು ಎಚ್ಚರವಾಗೇ ಇದ್ದರು.





ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

"ಬಾರಿಸು ಕನ್ನಡ ಡಿಂಡಿಮವ" - ಒಂದು ಮರು ಓದು

ಕರ್ನಾಟಕ ನಾಡಗೀತೆ - ಒಂದು ಸರಳ ಅರ್ಥವಿವರಣೆ

ಆಡು ಮುಟ್ಟದ ಸೊಪ್ಪಿಲ್ಲ (ಹರಟೆ)