ಕಗ್ಗ ಮತ್ತು ಫೇಸ್ ಬುಕ್ ಬಳಕೆದಾರ -1

ಸಿ ಪಿ ರವಿಕುಮಾರ್

ಡಿವಿಜಿ ಅವರ ಪುಣ್ಯತಿಥಿಯನ್ನು ಯಾರೋ ನೆನಪಿಸಿದರು. ಅವರ ಒಂದು ಕಗ್ಗ ನೆನಪಿಗೆ ಬಂತು.

ಸ್ಮಿತವಿರಲಿ ವದನದಲಿ, ಕಿವಿಗೆ ಕೇಳಿಸದಿರಲಿ |
ಹಿತವಿರಲಿ ವಚನದಲಿ, ಋತವ ಬಿಡದಿರಲಿ ||
ಮಿತವಿರಲಿ ಮನಸಿನುದ್ವೇಗದಲಿ, ಭೋಗದಲಿ |
ಅತಿ ಬೇಡವೆಲ್ಲಿಯುಂ – ಮಂಕುತಿಮ್ಮ |

ಫೇಸ್ ಬುಕ್ ಬಳಕೆದಾರರು  ಡಿವಿಜಿ ಅವರ ಹಿತವಚನವನ್ನು ಹೀಗೆ ಅರ್ಥೈಸಿಕೊಳ್ಳಬಹುದು

ಸ್ಮಿತವಿರಲಿ ವದನದಲಿ, ಕಿವಿಗೆ ಕೇಳಿಸದಿರಲಿ - ಓದುವಾಗ ನಗು ಬಂದರೆ ಅದು ನಿಮ್ಮ ಮುಖದ ಮೇಲೆ ಮಾತ್ರ ಇರಲಿ, LOL ಇತ್ಯಾದಿ ಬೇಡ!  ಜೋರಾಗಿ ನಕ್ಕರೆ ಟೀಚರ್ ಅಥವಾ ಅಪ್ಪ-ಅಮ್ಮ ಬಂದು ನಿನ್ನ ಮೊಬೈಲ್ ಕಿತ್ತುಕೊಳ್ಳುವುದು ಖಂಡಿತ.

ಹಿತವಿರಲಿ ವಚನದಲಿ, ಋತವ ಬಿಡದಿರಲಿ - ನಿಮ್ಮ ಕಾಮೆಂಟ್ ಹಿತವಾಗಿರಲಿ, ಆದರೆ ತೀರಾ ಸುಳ್ಳು ಹೇಳಬೇಡ.  ಮಿತ್ರನ  ಪ್ರೊಫೈಲ್ ಚಿತ್ರ ತೀರಾ ಕೆಟ್ಟದಾಗಿದ್ದರೂ ಲೈಕ್ ಒತ್ತುವ ಕಾರಣವಿಲ್ಲ! ಸ್ನೇಹಿತನ ಜೋಕ್ ತೀರಾ ಕಳಪೆಯದಾಗಿದ್ದರೂ ಅದಕ್ಕೆ ವಾವ್, ಸೂಪರ್ ಇತ್ಯಾದಿ ಕಾಮೆಂಟ್ ಹಾಕಬೇಡ!

ಮಿತವಿರಲಿ ಮನಸಿನುದ್ವೇಗದಲಿ, ಹೋಗದಲಿ, ಅತಿ ಬೇಡವೇಲ್ಲಿಯುಂ -

ಕಾಮೆಂಟ್ ಹಾಕುವಾಗ ಮನಸ್ಸಿನಲ್ಲಿ ಉದ್ವೇಗ ಬೇಡ! ಜಗಳವಾದೀತು! ನಿನ್ನ ಸ್ನೇಹಿತರು ಬೇರೆ ಪಕ್ಷದವರಾಗಿದ್ದರೆ ಅವರು ನಿನಗೆ ಇಷ್ಟವಾದ ಪಕ್ಷವನ್ನು ತೆಗಳಿ ಬರೆಯುತ್ತಾರೆ ಅನ್ನುವುದನ್ನು ನೆನಪಿಡು. ಯುದ್ಧದಲ್ಲಿ ತೊಡಗಬೇಡ!   ಹಾಗೂ ಅತಿ ಭೋಗ ಬೇಡ - 3000 ರೂಪಾಯಿ ಕೊಟ್ಟು ಹತ್ತು ಜನರ ಊಟವನ್ನು ಒಬ್ಬನೇ ಕಬಳಿಸಬೇಡ!  ಕೇಕ್ ಮುಖಕ್ಕೆಲ್ಲಾ ಬಳಿದುಕೊಂಡು ತೆಗೆಸಿಕೊಂಡ ಚಿತ್ರವನ್ನು ಖಂಡಿತಾ ಹಾಕಬೇಡ. ದಿನಾಗಲೂ ಕಂಡಕಂಡ ಚಿತ್ರಗಳನ್ನೆಲ್ಲಾ ಶೇರ್ ಮಾಡಬೇಡ.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

"ಬಾರಿಸು ಕನ್ನಡ ಡಿಂಡಿಮವ" - ಒಂದು ಮರು ಓದು

ಕರ್ನಾಟಕ ನಾಡಗೀತೆ - ಒಂದು ಸರಳ ಅರ್ಥವಿವರಣೆ

ಆಡು ಮುಟ್ಟದ ಸೊಪ್ಪಿಲ್ಲ (ಹರಟೆ)