ವನಸುಮ - ಡಿವಿಜಿ ಅವರ ಕವಿತೆ

ಸಿ ಪಿ ರವಿಕುಮಾರ್

ಡಿವಿಜಿ ಅವರ "ವನಸುಮ" ನಾನು ಮಾಧ್ಯಮಿಕ ಶಾಲೆಯಲ್ಲಿ ಓದುವಾಗ ನಮಗೆ ಪ್ರಾರ್ಥನಾಗೀತೆಯಾಗಿತ್ತು. ನಾನು ಮಾಧ್ಯಮಿಕ ಶಾಲೆ ಓದಿದ್ದು ದೆಹಲಿ ಕನ್ನಡ ಶಾಲೆಯಲ್ಲಿ.  ಅಲ್ಲಿ ಕನ್ನಡ ವಿದ್ಯಾರ್ಥಿಗಳು ನೂರಕ್ಕೆ ಒಬ್ಬರೋ ಇಬ್ಬರೋ. ಉಳಿದವರು ಹಿಂದಿ ಅಥವಾ ಪಂಜಾಬಿ ಮಾತಾಡುವ ಮಕ್ಕಳು. ಅವರಿಗೆ ಈ ಪ್ರಾರ್ಥನಾಗೀತೆ ಕಬ್ಬಿಣದ ಕಡಲೆಯಾಗಿತ್ತು. ನಮಗೂ ಆವಾಗ ಈ ಕವಿತೆ ಅರ್ಥವಾಗಿದ್ದು ಅಷ್ಟರಲ್ಲೇ ಇದೆ! "ವನಸುಮದೋಲೆನ್ನ ಜೀ| ವನವು ವಿಕಸಿಸುವಂತೆ ..." ಎನ್ನುವ ಸಾಲನ್ನು "ಜೀ" ಎನ್ನುವ ಕಡೆ ಕತ್ತರಿಸಿರುವುದು ಪ್ರಾಸಕ್ಕಾಗಿ ಎನ್ನುವ ಸರಳ ವಿಷಯ ನಮಗೆ ಗೊತ್ತಿರಲಿಲ್ಲ. ಪ್ರಾರ್ಥನೆಯನ್ನು ನಮ್ಮ ನೋಟ್ ಪುಸ್ತಕಗಳ ಹಿಂದೆ ಹಿಂದಿಯಲ್ಲಿ ಮುದ್ರಿಸಲಾಗಿತ್ತು.  ಇದನ್ನು ಓದಿಕೊಂಡು ವಿದ್ಯಾರ್ಥಿಗಳು ಪ್ರಾರ್ಥನೆಯನ್ನು ಕಲಿತುಕೊಳ್ಳಬೇಕಾಗಿತ್ತು! ಅಬ್ಬಾ, ಎಂಥ ಶಿಕ್ಷೆ! ಪಾಪ, ಹಿಂದಿ ಮಾತಾಡುವ ಮಕ್ಕಳು "ವನಸುಮದೊಲೆನ್ನ ಜೀ" ಎನ್ನುವುದನ್ನು ಸಂಬೋಧನೆ ಎಂದುಕೊಂಡು ಹಾಗೇ ಹೇಳುತ್ತಿದ್ದರು!!

ಕವಿತೆ ನನಗೆ ಅರ್ಥವಾದಾಗ ಅದೆಷ್ಟು ಸರಳಸುಂದರವಾಗಿದೆ ಎನ್ನಿಸಿತು. ನನಗೆ ಇಂದಿಗೂ ಇದು ಪ್ರಿಯವಾದ ಕವಿತೆ. ಇದರ ಭಾವಾರ್ಥವನ್ನು ಬರೆಯುವ ಮೂಲಕ ನನ್ನ ಮಾಧ್ಯಮಿಕ ಶಾಲೆಯ ತಪ್ಪುಗಳನ್ನು ದೇವರು ನನ್ನನ್ನು ಮನ್ನಿಸಲಿ ಎಂದು ಕೇಳಿಕೊಳ್ಳುತ್ತಿದ್ದೇನೆ!!





ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

"ಬಾರಿಸು ಕನ್ನಡ ಡಿಂಡಿಮವ" - ಒಂದು ಮರು ಓದು

ಕರ್ನಾಟಕ ನಾಡಗೀತೆ - ಒಂದು ಸರಳ ಅರ್ಥವಿವರಣೆ

ಆಡು ಮುಟ್ಟದ ಸೊಪ್ಪಿಲ್ಲ (ಹರಟೆ)