"ಬಾರಿಸು ಕನ್ನಡ ಡಿಂಡಿಮವ" - ಒಂದು ಮರು ಓದು
ಸಿ ಪಿ ರವಿಕುಮಾರ್ "ಬಾರಿಸು ಕನ್ನಡ ಡಿಂಡಿಮವ" ಎನ್ನುವುದು ಕನ್ನಡ ಪ್ರಚಾರಗೀತೆ ಎನ್ನುವಂತೆ ಮೇಲ್ನೋಟಕ್ಕೆ ತೋರುತ್ತದೆ. ಆದರೆ ಕವಿತೆಯನ್ನು ಪೂರ್ಣವಾಗಿ ಓದಿದರೆ ಅದು ಕುವೆಂಪು ಅವರು ಕನ್ನಡಿಗರ ಜಾಯಮಾನಕ್ಕೆ ನೊಂದು, ಬದಲಾವಣೆಗಾಗಿ ಪ್ರಾರ್ಥನಾರೂಪದಲ್ಲಿ ಬರೆದ ಪದ್ಯ ಎಂಬ ತಿಳುವಳಿಕೆ ಮೂಡುತ್ತದೆ. ಬಾರಿಸು ಕನ್ನಡ ಡಿಂಡಿಮವ ಓ ಕರ್ನಾಟಕ ಹೃದಯ ಶಿವ! ಕರ್ನಾಟಕದ ಹೃದಯ ಮಿಡಿಯಬೇಕಾದದ್ದು ಕನ್ನಡಕ್ಕೆ. ಆದರೆ ಅಲ್ಲಿ ಬೇರೆ ಭಾಷೆಗಳ ಮಿಡಿತವೇ ಹೆಚ್ಚು. ಕುವೆಂಪು ಅವರ ಕಾಲದಲ್ಲೂ ಇದು ಹಾಗೇ ಇತ್ತು, ಈಗಲೂ ಹಾಗೇ ಇದೆ! ಹೇಗೆ ಶಿವ ತನಗೆ ಸಹಜವಾದ ಡಿಂಡಿಮ ಬಾರಿಸಬೇಕೋ ಹಾಗೇ ಕರ್ನಾಟಕದ ಹೃದಯ-ಶಿವ ಕನ್ನಡವೆಂಬ ಡಿಂಡಿಮ ಬಾರಿಸಬೇಕು ಎಂಬುದು ಕವಿಯ ನೊಂದ ಮನದ ಮೊರೆ. "ಬಾರಿಸು ಕನ್ನಡ ಡಿಂಡಿಮವ "ಎಂಬಲ್ಲಿ "ಕನ್ನಡ" ಶಬ್ದಕ್ಕೆ ಒತ್ತು. ಸತ್ತಂತಿಹರನು ಬಡಿದೆಚ್ಚರಿಸು! ಕಚ್ಚಾಡುವರನು ಕೂಡಿಸಿ ಒಲಿಸು! ಹೊಟ್ಟೆಯ ಕಿಚ್ಚಿಗೆ ಕಣ್ಣೀರ್ ಸುರಿಸು! ಒಟ್ಟಿಗೆ ಬಾಳುವ ತೆರದಲಿ ಹರಸು! ಕನ್ನಡ ಜನರಲ್ಲಿ ಒಗ್ಗಟ್ಟಿಲ್ಲ ಎನ್ನುವುದನ್ನು ಕುವೆಂಪು ಮನಗಂಡಿದ್ದರು. ಏಕೀಕರಣದ ಸಮಯದಲ್ಲಿ ಕೂಡಾ ಒಡಕು ಧ್ವನಿಗಳಿದ್ದವು. "ಅಖಂಡ ಕರ್ನಾಟಕ" ಪದ್ಯದಲ್ಲಿ ಇಂಥ ಒಡಕು ಧ್ವನಿಗಳನ್ನು ಎತ್ತುವ ಜನನಾಯಕರ ಬಗ್ಗೆ ಕುವೆಂಪು "ಮುಚ್ಚು ಬಾಯಿ" ಎಂಬ ರೀತಿಯಲ್ಲಿ ಗುಡುಗಿದ್ದಾರೆ. ಆದರೆ &q
nice
ಪ್ರತ್ಯುತ್ತರಅಳಿಸಿ:)
ಅಳಿಸಿ