ಇಡೀ ರಾತ್ರಿ









ಮೂಲ ಗಜಲ್ - ಮಖದೂಮ್ ಮುಹಿಯುದ್ದೀನ್
ಕನ್ನಡಕ್ಕೆ - ಸಿ. ಪಿ. ರವಿಕುಮಾರ್
(ಇದನ್ನು "ಗಮನ್" ಹಿಂದಿ ಚಿತ್ರಕ್ಕಾಗಿ ಛಾಯಾ ಗಂಗೂಲಿ ಹಾಡಿದ್ದಾರೆ.)


ಬರುತಲಿತ್ತು ನಿಮ್ಮದೇ ನೆನಪು ಇಡೀ ರಾತ್ರಿ
ಒದ್ದೆಕಣ್ಣು ಮುಗುಳುನಗುತಲಿತ್ತು ಇಡೀ ರಾತ್ರಿ

ಇಡೀ ರಾತ್ರಿ ಉರಿಯುತಿತ್ತು ನೋವಿನ ಕಿರುಹಣತೆ
ದುಃಖದ ಹೊಗೆ ನರಳಿ ನಡುಗುತಿತ್ತು ಇಡೀ ರಾತ್ರಿ

ಕೊಳಲ ಕೊರಳಿನಿಂದ ಹೊರಟ ಮಧುರ ನಾದವೊಂದು
ನೆನಪಿನಂತೆ ಮರುಕಳಿಸುತಲಿತ್ತು ಇಡೀ ರಾತ್ರಿ
ಎದೆಗೆ ಇಳಿಯುತ್ತಿತ್ತು ನೆನಪು ಚಂದ್ರಬಿಂಬದಂತೆ
ಬೆಳದಿಂಗಳು ಜಗಮಗಿಸುತ್ತಿತ್ತು ಇಡೀ ರಾತ್ರಿ
ಹುಚ್ಚನಂತೆ ಬೀದಿ ಬೀದಿ ಅಲೆಯುತಿದ್ದನಾರೋ
ಸದ್ದು ಯಾವುದೋ ಕೇಳುತಿತ್ತು ಇಡೀ ರಾತ್ರಿ

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

"ಬಾರಿಸು ಕನ್ನಡ ಡಿಂಡಿಮವ" - ಒಂದು ಮರು ಓದು

ಕರ್ನಾಟಕ ನಾಡಗೀತೆ - ಒಂದು ಸರಳ ಅರ್ಥವಿವರಣೆ

ಆಡು ಮುಟ್ಟದ ಸೊಪ್ಪಿಲ್ಲ (ಹರಟೆ)