ಕವಿಶೈಲದಲ್ಲೊಂದು ಸಂಜೆ


ಕೂಗಲು ಮೇಲೊಂದು ಒಂಟಿ ಬೆಳ್ಳಕ್ಕಿ ಮುಗಿಲಲ್ಲಿ
ರಾಗವದಾವುದೋ ಕೇಳುವುದು ಕವಿಮನಕ್ಕೆ!    
ಮಾಗಿಯ ಚಳಿಯಲ್ಲಿ ಕಾವ್ಯಸೃಷ್ಟಿಯ ಕಠಿಣ
ತ್ಯಾಗಗಳ ತಪದಲ್ಲಿ ತೊಡಗಿದ್ದ  ರಸಋಷಿಗೆ!
ರಾಗಿ-ಬತ್ತದ ಪೈರಿನ ಹಸಿರು ಪತ್ತಲವನ್ನುಟ್ಟು
ಮೇಘಗಳ ಕರಿನೇರಳೆ ಬಣ್ಣದ ರವಿಕೆಯಂ ತೊಟ್ಟು
ಹೂಗಳ ಚೆಲುವಿನಿಂ  ಕಂಗೊಳಿಸುವ  ಮಲೆನಾಡಿತಿ   
ಜಾಗ ನೀಡಿದ್ದಾಳೆ ತನ್ನ ಮಡಿಲಲ್ಲಿ, ಕವಿಶೈಲದಲ್ಲಿ!

ಈಗ ಕೇಳುವುದು ಕ್ರೌಂಚಪಕ್ಷಿಗಳ ಹರ್ಷಕಲರವ
ಈಗ ಕೇಳುವುದು ನಿಷಾದನ ಬಾಣಕ್ಕೆ ಅಸು-
ನೀಗಿದ ಜೊತೆಗಾತಿಗೆ ಮರುಗುವ ಒಂಟಿ ಆರ್ತನಾದ!
ರಾಘವನ ಅಂತರಂಗದ ವ್ಯಥೆಯು ಕೇಳುವುದು ..
ಓಗೊಡುವುದು ಎಲ್ಲಿಂದಲೋ ಸೀತೆಯ ದುಃಖವೃಷ್ಟಿ
ಸಾಗುವುದು ದುಃಖದ ದೋಣಿಯಲ್ಲಿ ಕಾವ್ಯಸೃಷ್ಟಿ  


- ಸಿ. ಪಿ. ರವಿಕುಮಾರ್ 
(c) ೨೦೧೭ 


ಕಾಮೆಂಟ್‌ಗಳು

ಕಾಮೆಂಟ್‌‌ ಪೋಸ್ಟ್‌ ಮಾಡಿ

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

"ಬಾರಿಸು ಕನ್ನಡ ಡಿಂಡಿಮವ" - ಒಂದು ಮರು ಓದು

ಕರ್ನಾಟಕ ನಾಡಗೀತೆ - ಒಂದು ಸರಳ ಅರ್ಥವಿವರಣೆ

ಆಡು ಮುಟ್ಟದ ಸೊಪ್ಪಿಲ್ಲ (ಹರಟೆ)