ಒಂದು ಗಜಲ್ ಹಸಿರಾಗಿಸುತ್ತದೆ ಎಲ್ಲ ಹಳೆಯ ನೋವು
ಮೂಲ ... ಶಕೀಲ್ ಜಮಾಲಿ
ಕನ್ನಡಕ್ಕೆ ... ಸಿ.ಪಿ. ರವಿಕುಮಾರ್
ಪಾಳು ಬಿದ್ದ ನೆನಪುಗಳೂ ಪಡೆದುಕೊಳ್ಳುತ್ತವೆ ಮರುಜೀವ
ಒಂದು ಗಜಲ್ ಹಸಿರಾಗಿಸುತ್ತದೆ ಎಲ್ಲ ಹಳೆಯ ನೋವ
ಪಡೆವ ಆಸೆಯಿಂದ ದೂರವಿರುವುದೆ ಮೇಲು
ಜೋಕೆ! ಕೊರಗೆಂಬ ರೋಗ ಅಂಟಿಕೊಳ್ಳುವುದು
ದುಃಖವನು ಹಿಂಬಾಲಿಸಿ ವ್ಯರ್ಥ ಅಲೆಯುವುದೇಕೆ?
ತಲುಪುತ್ತದೆ ಈ ಸಂಪತ್ತು ಮನೆಯ ವಿಳಾಸಕ್ಕೇ
ಕೂಡಿಟ್ಟುಕೊಳ್ಳಿ ದಿನದ ಗೊಂದಲಗಳನ್ನು ಮನದೊಳಗೆ
ಅನೇಕ ನಿಶ್ಯಬ್ದಗಳನ್ನು ರಾತ್ರಿ ಕರೆತರುವುದು ಜೊತೆಗೆ
ತುಂಬಿಕೊಳ್ಳಬಹುದು ಸೆರಗನ್ನು ಕಪಟವಂಚನೆಗಳಿಂದ
ಕಹಿಯಾದೀತು ತಿನ್ನುವ ಎರಡು ತುತ್ತು ಕೂಡಾ
ಸಿನಿಮಾ ಓಡುತ್ತದೆ ಪರದೆಯ ಮೇಲೆ ಸರಿರಾತ್ರಿಯವರೆಗೂ
ಸುಪ್ರಭಾತದ ಪ್ರಾರ್ಥನೆ ಸಾಯುತ್ತದೆ ಪ್ರತಿ ಮುಂಜಾವು
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ