ಟ್ರಾಫಿಕ್ ಟ್ರಾಫಿಕ್ ಎನುತ (ಗಜಲ್)
(ಪ್ರತಿದಿನ ಕೆಲಸಕ್ಕಾಗಿ ಗಂಟೆಗಟ್ಟಲೆ ಪ್ರಯಾಣ ಮಾಡುವ ಬೆಂಗಳೂರಿಗರಿಗೆ ಅರ್ಪಿತ.)

ಹೀಗೇ ಕಳೆಯಿತು ಬೆಳಗು ಟ್ರಾಫಿಕ್ ಟ್ರಾಫಿಕ್ ಎನುತ
ಜಾಗರಣೆ ರಾತ್ರಿಯಲೂ ಟ್ರಾಫಿಕ್ ಟ್ರಾಫಿಕ್ ಎನುತ
ಹೊರಟಿದೆ ನಗರವೇ ಹಾ ಯಾವುದೋ ಹೋರಾಟಕ್ಕೆ
ಬರುತಿದೆ ಮಳೆ ಕೂಡಾ ಟ್ರಾಫಿಕ್ ಟ್ರಾಫಿಕ್ ಎನುತ
ಎಷ್ಟು ಓದಲಿ ಗೆಳೆಯಾ ಬರೆಯಲಿ ನಾನಿನ್ನೆಷ್ಟು
ಸುಸ್ತು ಕಣ್ಣಿಗೆ ಬಂತು ಟ್ರಾಫಿಕ್ ಟ್ರಾಫಿಕ್ ಎನುತ
ಬಸ್ಸಿನಲ್ಲಿ ಏಸಿ ಇದೆ ಆದರೂ ಹಾ ಸುಖವೆಲ್ಲಿ
ಭುಸ್ ಭುಸ್ ಸದ್ದು ಜೊತೆಗೆ ಚಳಿಗೆ ಮೈನಡುಕ
ರೇಡಿಯೋ ಹಾಡುತಿರುವ ಪ್ರೇಮಗೀತೆಯಲು ಕೂಡಾ
ನೋಡು ಕೇಳುತ್ತಿದೆ ಕೋರಸ್ ಟ್ರಾಫಿಕ್ ಟ್ರಾಫಿಕ್ ಎನುತ
ಸಿ.ಪಿ. ರವಿಕುಮಾರ್
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ