ಮುಳ್ಳಿನಲ್ಲೊಂದು ಹೂವು
ಮೂಲ ... ಅಂಜುಮ್ ಲುಧಿಯಾನವಿ
ಕನ್ನಡಕ್ಕೆ ... ಸಿ.ಪಿ. ರವಿಕುಮಾರ್
ಮುಳ್ಳಿನಲ್ಲೊಂದು ಹೂವು ಅರಳಿದೆಯಲ್ಲ
ನಗುತ್ತಿರುತ್ತದೆ ನಾನು ನೋಡಿದಾಗಲೆಲ್ಲಾ
ಗಮನಿಸುತ್ತೇನೆ ಅಲ್ಲೇ ಒಂದು ಹಳದಿ ಎಲೆ
ಎಣಿಸುತ್ತಾ ಬಿಡಿಸುತ್ತಿದೆ ಏನೋ ಸಮಸ್ಯೆ
ತೋಡಿಕೊಂಡಿತು ಹೂವು ನನ್ನಲ್ಲಿ ದುಃಖ
ಗಾಳಿ ಕದ್ದಿತು ನನ್ನ ಗಂಧವನು ಅಕ್ಕಾ
ಹರಿವ ನೀರಿನ ತರಂಗಗಳ ಮೇಲೆ
ಹುಚ್ಚನಾರೋ ಗೀಚುತಿಹ ವರ್ಣಮಾಲೆ
ಚಿನ್ನಬೆಳ್ಳಿಗಳ ಕೋರೈಸುವ ಬೆಳಕಿಗೆ
ಎಲ್ಲರೂ ಕಣ್ ನೋಟ ಕಳೆದುಕೊಂಡಿದ್ದಾರೆ
ಹಕ್ಕಿಯೊಂದು ಅಂಗಳ ಹೊಕ್ಕು ಎಲ್ಲೆಡೆಗೂ
ಓಡಾಡಿ ಅಂಗಳವನು ಮಂಗಳ ಮಾಡಿರುವುದು ನೋಡಿ
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ