ಈ ಜೂಸು ಚಂದವೋ ಆ ಜೂಸು ಚಂದವೋ
ಇಬ್ಬರೂ ಹೋದರು ಜೂಸ್ ಪಾರ್ಲರಿಗೆ
ನೂರಿಪ್ಪತ್ತು ರೂಪಾಯಿ ಬಿಲ್ಲು ಪ್ಲಸ್ ತೆರಿಗೆ
ಮೂಸಂಬಿ ಜೂಸ್ ಆರ್ಡರ್ ಮಾಡಿದಳು ಆಕೆ
ಆತನಿಗೆ ಸೇಬು ದ್ರಾಕ್ಷಿ ದಾಳಿಂಬೆಗಳ ಬಯಕೆ
ಮೊದಲು ಬಂದಿತು ಎರಡು ಸ್ಟ್ರಾ ಜೋಡಿಸಿದ ಗ್ಲಾಸು
ಅದರಲ್ಲಿ ಘಮಘಮಿಸುವ ಮೂಸಂಬಿ ಜೂಸು
ಒಂದು ಸ್ಟ್ರಾ ತನ್ನತ್ತ ಎಳೆದುಕೊಂಡ ಆತ
"ಶೇರ್ ಮಾಡೋಣ ಓಕೇ?" ಎಂದು ನಗೆಯ ಬೀರುತ್ತಾ
ಹುಬ್ಬೇರಿಸಿ ಕೆಂಗಣ್ಣು ಬಿಟ್ಟು "ನಾಟ್ ಓಕೆ!
ಎನ್ನ ರಸ! ಸುಮ್ಮನಿರಿ!" ಎಂದಳಾಕೆ
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ