ಮಂದಹಾಸಗಳ ಸಂತೆ
ಮೂಲ ಹಿಂದಿ: ಗೋಪಾಲ್ ದಾಸ್ "ನೀರಜ್"
ಕನ್ನಡಕ್ಕೆ : ಸಿ. ಪಿ. ರವಿಕುಮಾರ್
ಪ್ರೀತಿಸುವುದೇ ಆದರೆ, ಪಥಿಕ, ಪ್ರೀತಿಸು ಯೋಚಿಸಿ, ತಿಳಿದು
ಬೆಳ್ಳಿಯ ನಾಡಿದು, ಇಲ್ಲಿ ದೊರೆಗಳೇ ಸುಳ್ಳು ಹೇಳಬಹುದು
ನಿನ್ನ ನೋವು ನಿಟ್ಟುಸಿರು ಕೇಳಲೂ ಯಾರಿಗಿಲ್ಲಿ ಪುರುಸೊತ್ತು?
ಬೀಸಿ ನಿನಗೆ ತಂಗಾಳಿ ಸಂತೈಸೆ ಬರುವರಾರೆಲ್ಲವನು ಬಿಟ್ಟು?
ಮರುಭೂಮಿಯಲ್ಲಿ ಬಿಳಿಮೋಡವಾಗಿ ಹುಡುಕುತಿರುವೆ ಯಾರನ್ನು?
ನಿನ್ನ ಕಡೆಗೆ ವ್ಯಾಕುಲತೆಯಿಂದ ನೋಡುವುದು ಯಾರ ಕಣ್ಣು?
ಇಲ್ಲಿ ನಡೆದಿಹುದು ಹೂಗಳ ಮೇಳ, ಮಂದಹಾಸಗಳ ಸಂತೆ
ಒಣಗಿಹೋದ ಕಂಬನಿಯ ಮಾಲೆ ಕೊಳ್ಳುವವರು ಯಾರಂತೆ?
ಪ್ರೀತಿಸುವುದೇ ಆದರೆ, ಪಥಿಕ, ಪ್ರೀತಿಸು ಯೋಚಿಸಿ, ತಿಳಿದು!
सोच समझ कर करना पंथी यहॉं किसी से प्यार
ಪ್ರತ್ಯುತ್ತರಅಳಿಸಿचांदी का यह देश,यहॉं के छलिया राजकुमार
किसे यहॉ अवकाश सुने जो तेरी करूण कराहें
तुझ पर करें बयार, यहॉं सूनी हैं किसकी बाहें
बादल बन कर खोज रहा तू किसको इस मरूथल में
कौन यहॉ, व्याकुल हों जिसकी तेरे लिए निगाहें
फूलों की यह हाट लगी है, मुस्कानों का मेला
कौन खरीदेगा तेरे सूखे आंसू दो चार
सोच समझ कर करना पंथी यहॉ किसी से प्यार ।
— पदमश्री गोपाल दास नीरज
ಚೆನ್ನಾಗಿದೆ
ಪ್ರತ್ಯುತ್ತರಅಳಿಸಿಧನ್ಯವಾದಗಳು ಎ. ಭರತ್
ಅಳಿಸಿ