ತಾಯಿಹಕ್ಕಿ

ಮೂಲ ಇಂಗ್ಲಿಷ್ ಕವಿತೆ - ವಾಲ್ಟರ್ ಡಿ ಲ ಮೇರ್ 
ಕನ್ನಡಕ್ಕೆ - ಸಿ. ಪಿ. ರವಿಕುಮಾರ್ 
ಕವಿತಾಸ್ವಾದನೆ: ಇದೊಂದು ಪುಟ್ಟ ಕಥನಕವನ.  ನಿಸರ್ಗದಲ್ಲಿ ಅದೆಷ್ಟೋ ರಹಸ್ಯಗಳಿವೆ. ಮನುಷ್ಯನಿಗೆ ಪ್ರತಿಯೊಂದರ ಬಗ್ಗೆಯೂ ಕುತೂಹಲ. ಆದರೆ ಪಶುಪಕ್ಷಿಗಳಿಗೂ ತಮ್ಮ ಗೌಪ್ಯತೆಎಂಬುದಿದೆ. ಅದರ ಗೆರೆ ದಾಟಿದಾಗ ಕವಿಗೆ ಆದ ಅನುಭವ ಈ ಕವಿತೆಯಲ್ಲಿ ದಾಖಲಾಗಿದೆ.  

Image result for mother bird wiki


ತಂಪಾದ ಎಲೆಗಳಿಗೆ ಕೆನ್ನೆಯನ್ನೊತ್ತಿ 
ಇಣುಕಿದಾಗ ಪೊದೆಯಲ್ಲಿ ಕಂಡೆ ಒಂದು ರಹಸ್ಯ 
ಪೊದೆಮರೆಯ ಗೂಡಿನಲ್ಲಿದ್ದೊಂದು ಹಕ್ಕಿ 
ಕಣ್ತೆರೆದು ಸುಮ್ಮನೇ ನೋಡಿತು ನನ್ನತ್ತ 

ವಿನಮ್ರ ನೋಟದಲ್ಲಿ  ಧೈರ್ಯವೂ ಇತ್ತು 
ಎದ್ದೆದ್ದು ಬೀಳುತಿತ್ತು ಅದರ ಕಂದು ಬಿಸಿ ಎದೆ 
ತೆರೆದುಕೊಂಡು ಒಮ್ಮೆಲೇ ಚೂರಿಯಂಥ ಕೊಕ್ಕು 
ಕೂಗು ಬಾಣ ಬಿಟ್ಟಹಾಗೆ ಏರಿಸಿ ಬಿಲ್ಲಿನ ಹೆದೆ

ನಸುಕಿನಲ್ಲಿ ಕೇಳುವಂಥ ಗುಬ್ಬಿಯ ಚಿಲಿಪಿಲಿಯಲ್ಲ
ಸ್ಫುಟವಾದ, ಉತ್ಕಟ, ಕೆರಳಿದೊಂದು ಕೂಗು  
ಶಾಂತಸಂಜೆಯಲ್ಲಿ ಕರಗುವ ಕೂಜನವಲ್ಲ 
ಒಮ್ಮೆಲೇ ಝಳಪಿಸಿದ ಹರಿತ ಕತ್ತಿಯಲುಗು 

ಕಾಣಿಸಿತು ಅದರಲ್ಲಿ ಸಾಹಸದ ಕಣ್ಣೀರು 
ಹತಾಶೆಯಲ್ಲಿ ಹುಟ್ಟಿದ ಹರ್ಷ, ವಿಜಯೋನ್ಮಾದ!
ಪೆಚ್ಚಾಗಿ ಹಿಮ್ಮೆಟ್ಟಿದೆ ಕೂಡಲೇ ನಾನು 
ಪೆದ್ದುನಗೆಯೊಂದೇ ಸಾಧ್ಯವಾದ ಸಂವಾದ

ರಹಸ್ಯಗೂಡಿನಲ್ಲಿ ಮರಿಗಳ ಮೇಲೆ ಹರಡಿ ರೆಕ್ಕೆ 
ತಾಯಿ ಹಕ್ಕಿ ಮುಂಬರಿಸಿತು ಸಂಸಾರದ ರಕ್ಷೆ 

(c) ೨೦೧೭, ಸಿ. ಪಿ. ರವಿಕುಮಾರ್ 

ಕಾಮೆಂಟ್‌ಗಳು

  1. Through the green twilight of a hedge
    I peered, with cheek on the cool leaves pressed,
    And spied a bird upon a nest:
    Two eyes she had beseeching me
    Meekly and brave, and her brown breast
    Throbb'd hot and quick above her heart;
    And then she oped her dagger bill, -
    'Twas not a chirp, as sparrows pipe
    At break of day; 'twas not a trill,
    As falters through the quiet even;
    But one sharp solitary note,
    One desperate, fierce, and vivid cry
    Of valiant tears, and hopeless joy,
    One passionate note of victory:
    Off, like a fool afraid, I sneaked,
    Smiling the smile the fool smiles best,
    At the mother bird in the secret hedge
    Patient upon her lonely nest.
    Walter de la Mare

    ಪ್ರತ್ಯುತ್ತರಅಳಿಸಿ

ಕಾಮೆಂಟ್‌‌ ಪೋಸ್ಟ್‌ ಮಾಡಿ

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

"ಬಾರಿಸು ಕನ್ನಡ ಡಿಂಡಿಮವ" - ಒಂದು ಮರು ಓದು

ಕರ್ನಾಟಕ ನಾಡಗೀತೆ - ಒಂದು ಸರಳ ಅರ್ಥವಿವರಣೆ

ಆಡು ಮುಟ್ಟದ ಸೊಪ್ಪಿಲ್ಲ (ಹರಟೆ)