ನಿನಗೆ ನಾನೇನನ್ನು ಕೊಡಲಿ ಪ್ರತಿಯಾಗಿ?
ಸಾನೆಟ್ಸ್ ಫ್ರಂ ದ ಪೋರ್ಚುಗೀಸ್
ಸಾನೆಟ್ 8
ಮೂಲ : ಎಲಿಜಬೆತ್ ಬ್ಯಾರೆಟ್ ಬ್ರೌನಿಂಗ್
ಕನ್ನಡಕ್ಕೆ : ಸಿ. ಪಿ. ರವಿಕುಮಾರ್
ಕವಿತಾಸ್ವಾದನೆ: ಇದು ಎಲಿಜಬೆತ್ ಬ್ಯಾರೆಟ್ ಬ್ರೌನಿಂಗ್ ಅವರ "ಸಾನೆಟ್ಸ್ ಫ್ರಂ ದ ಪೋರ್ಚುಗೀಸ್" ಸಂಗ್ರಹದ ಎಂಟನೇ ಸಾನೆಟ್. ಇದಕ್ಕೆ ಹಿಂದಿನ ಸಾನೆಟ್ಟುಗಳ ಅನುವಾದವನ್ನು ಇದೇ ಬ್ಲಾಗಿನಲ್ಲಿ ಓದಬಹುದು. ಪ್ರಸ್ತುತ ಕವಿತೆಯಲ್ಲಿ ಕವಯಿತ್ರಿ ತನಗೆ ಸಿಕ್ಕ ಪ್ರೇಮಕಾಣಿಕೆಯನ್ನು ಸ್ವೀಕರಿಸುತ್ತಾ ಅದಕ್ಕೆ ಪ್ರತಿಯಾಗಿ ತಾನೇನನ್ನು ಕೊಡಲೆಂದು ಚಿಂತಿಸುತ್ತಾಳೆ.
ಉಡುಗೊರೆಗಳ ಪ್ರತಿಯಾಗಿ? ತೆರೆದು ಹೃದಯದ ಕಪಾಟು
ಹಾಸಿರುವೆ ಹೊಳೆವ ಬಂಗಾರದ ತಾಟು,
ಹರಡಿರುವೆ ಅದರೊಳಗೆ ನಿಷ್ಕಳಂಕ ರತ್ನಖಚಿತ
ಪ್ರೇಮಾಭರಣಗಳನ್ನು ನನ್ನಂತಹವಳಿಗಾಗಿ, ಬಿಗಿದು ಕೊರಳು
ಸ್ವೀಕರಿಸುವೆಯಾ ಎಂದು ಕೇಳುತ್ತಿರುವೆ! ಕಠಿಣ
ಹೃದಯವೇ ನನ್ನದು? ಕೃತಘ್ನಳೇ ನಾನು? ಕೃಪಣ
ಮನದವಳೇ ಪ್ರತಿಯಾಗಿ ಮರಳಿ ಏನನ್ನೂ ನೀಡದಿರಲು?
ಕೃಪಣತನವಲ್ಲ, ದಟ್ಟದಾರಿದ್ರ್ಯವೆನ್ನುವುದು ಮೇಲು,
ಕೇಳು ಎಲ್ಲವನ್ನೂ ಬಲ್ಲ ದೈವವನ್ನು. ಆ ದೇವರಿಗೆ ಗೊತ್ತು,
ನಿರಂತರ ಸುರಿಸಿ ಕಳೆದುಕೊಂಡಿರುವೆ ಹೃದಯದೆಲ್ಲ ಮುತ್ತು,
ಮಾಸಿಹೋಗಿವೆ ಕಂಬನಿಯಲ್ಲಿ ಜೀವನದ ಬಣ್ಣಗಳು!
ಉಳಿದಿರುವ ಪೇಲವ ಬದುಕನ್ನು ನೀಡಲೇ ನಿನಗೆ ತಲೆದಿಂಬಾಗಿ?
ಇಲ್ಲ, ಉಪಯೋಗವಾದೀತು ಸ್ವೀಕರಿಸು ನಿನ್ನ ಕಾಲೊರೆಸಾಗಿ.
ಪ್ರತ್ಯುತ್ತರಅಳಿಸಿWhat can I give thee back, O liberal
And princely giver, who hast brought the gold
And purple of thine heart, unstained, untold,
And laid them on the outside of the wall
For such as I to take or leave withal,
In unexpected largesse? am I cold,
Ungrateful, that for these most mainfold
High gifts, I render nothing back at all?
Not so; not cold, --- but very poor instead.
Ask God who knows. For frequent tears have run
The colours from my life, and left so dead
And pale a stuff, it were not fitly done
To give the same as pillow to thy head.
Go farther! let it serve to trample on.