ರೆಮೊರಾ, ರೆಮೊರಾ
ಮೂಲ: ಥಾಮಸ್ ಲಕ್ಸ್ (ಅಮೇರಿಕಾ ಸಂಸ್ಥಾನ)
ಕನ್ನಡಕ್ಕೆ : ಸಿ. ಪಿ. ರವಿಕುಮಾರ್
ಶಾರ್ಕ್ ಮೀನಿಗೆ ಅವಚಿಕೊಂಡಿದೆ ಒಂದು ಹೀರುವ ಶಾರ್ಕ್,
ಅದಕ್ಕೆ ಅಂಟಿಕೊಂಡು ಅದರ ತುತ್ತನ್ನು ನುಂಗಿ ಬದುಕುವ ಮತ್ತೊಂದು
ಇನ್ನೂ ಪುಟ್ಟದು, ಒಂದೆರಡು ಇಂಚು ಉದ್ದದ್ದು,
ಮತ್ತದರ ಮೇಲೆ ಮಾಡುತ್ತಿದೆ ಸವಾರಿ ಇನ್ನೊಂದು,
ಜಾಲರಿಯ ಕಣ್ಣಿನ ಗಾತ್ರದ್ದು;
ಪುಟ್ಟದಾಗುತ್ತಾ ಪುಟ್ಟದಾಗುತ್ತಾ
(ಮಂಕ, ಮಡೆಯ, ಮಡ್ಡಿ, ಶತಮೂರ್ಖ)
ಎಲ್ಲಕ್ಕಿಂತಲೂ ತುತ್ತತುದಿಗೆ ಒಂದಿದೆ
ಮೈಕ್ರೋ ಚುಕ್ಕೆ ಶಾರ್ಕ್,
ಬಲ್ಬ್ ಒಳಗೆ ಅಲ್ಲಾಡುವ ತಂತಿಯ ಗಾತ್ರದ್ದು,
ತುಡಿಯುವ ಹೃದಯವಿದೆ ಅದರಲ್ಲೂ,
ಮಹಾಸಮುದ್ರದಲ್ಲಿ ಅದೂ ಈಜುತ್ತದೆ
ತನ್ನ ಅತಿಥೇಯನಿಂದ ಸ್ವೀಕರಿಸುತ್ತಾ ಆಹಾರ,
ತತ್ ಕಾರಣ ಅತಿಥೇಯನ ಹಸಿವಿಗೆ ನೀಡಿ ಆಧಾರ.
ನೇರವಾಗಿ ತಿನ್ನಲು ಅದು ತೀರಾ ಪುಟ್ಟದು
(ಬಾಯ್ತೆರೆದು ಈಜುವ ಪ್ರಾಣಿಗಳು ಆದರೂ ಇವೆ ಸುತ್ತಲೂ)
ಹೀಗಾಗಿ ಅದು ಈಜುತ್ತದೆ ನೀಲಪ್ರವಾಹದಲ್ಲಿ,
ಕಣ್ಣಿಗೆ ಕಾಣದ ಪಿರಮಿಡ್ ತುತ್ತತುದಿ
ಮಿಕ್ಕೆಲ್ಲದರ ಮೇಲಿರುವ ತುತ್ತುತುದಿ.
ಕವಿತೆಯ ಸ್ವಾರಸ್ಯ:
ರೆಮೊರಾ ಎಂಬುವುದು ಒಂದು ಪುಟ್ಟ ಶಾರ್ಕ್ ಮೀನಿನ ಹೆಸರು.
ಬಾಟಮ್ ಆಫ್ ದ ಪಿರಮಿಡ್ ಎಂಬ ಮಾತನ್ನು ನೀವು ಕೇಳಿರಬಹುದು. ಅದನ್ನು ಕುರಿತು ಯೋಚಿಸಿ. ಬಲಿಷ್ಠನಾದವನನ್ನು ಎಲ್ಲಕ್ಕಿಂತ ಮೇಲಿರುವ ರಾಜ ಎಂದು ಭಾವಿಸುವುದು ರೂಢಿ. ಇಲ್ಲಿ ಅತ್ಯಂತ ಸಣ್ಣ ಶಾರ್ಕ್ ಎಲ್ಲಕ್ಕಿಂತ ಮೇಲೆ ತುತ್ತತುದಿಯಲ್ಲಿದೆ ಎಂಬುದರ ಬಗ್ಗೆ ಕವಿ ಯಾಕೆ ಒತ್ತು ನೀಡುತ್ತಿದ್ದಾನೆ? ಒಂದರ ಮೇಲೊಂದು ಎಂಬ ಶೃಂಖಲೆ (ಹಯರಾರ್ಕಿ) ಕುರಿತು ಹೇಳುವಾಗ ಮಂಕ, ಮಡೆಯ, ಮಡದಿ, ಶತಮೂರ್ಖ ಎಂಬ ಸಾಮ್ಯವನ್ನು ಕವಿ ಯಾಕೆ ನೀಡುತ್ತಿದ್ದಾನೆ?

ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ