ಕಷ್ಟದ ದಿನ
ಮೂಲ ಪದ್ಯ - ಕೇ ರಯಾನ್ (ಅಮೇರಿಕಾ ಸಂಸ್ಥಾನ)
ಕನ್ನಡಕ್ಕೆ - ಸಿ. ಪಿ. ರವಿಕುಮಾರ್
ಪ್ರತಿದಿನವೂ ತೆರೆದುಕೊಳ್ಳುವುದಿಲ್ಲ ನೋಡಿ ಮಾಯಾವಿ ದರ್ಜಿಯ ಅದೃಷ್ಟ.
ಕದ್ದು ತಂದ ಬಟ್ಟೆಯಲ್ಲಿ ಕೆಲವೊಮ್ಮೆ ಕಾಣುತ್ತದೆ ಉಡುಪಿನ ಆಕಾರ ಸ್ಪಷ್ಟ.
ಕೆಲವೊಮ್ಮೆ ಮನದಲ್ಲಿ ಮೂಡಿದ ಉಡುಪಿನ ಚಿತ್ರಕ್ಕೆ ಹುಡುಕಿ ಹೊರಡುತ್ತಾನೆ ಸೂಕ್ತ ವಸ್ತ್ರ.
ಕೆಲವೊಂದು ದಿನ ಮಾತ್ರ ಮನದಲ್ಲಿ ಮೂಡುವುದಿಲ್ಲ ಯಾವುದೂ ಚಿತ್ರ
ಮತ್ತು ಸಿಕ್ಕುವುದೂ ಇಲ್ಲ ಯಾವುದೇ ಸೂಕ್ತ ವಸ್ತ್ರ.
ಅಂಥ ದಿನಗಳು ನೋಡಿ ಮಾಯಾವಿ ದರ್ಜಿಗೆ ಕಷ್ಟ.
(elf ಎಂಬ ಕಲ್ಪನೆ ಪಾಶ್ಚಿಮಾತ್ಯ ದೇಶಗಳ ಕಿನ್ನರಕಥೆಗಳಲ್ಲಿದೆ. elf ಒಬ್ಬ ಪುಟ್ಟ ಯಕ್ಷ. ಚೂಪು ಕಿವಿಗಳ ಈ ಮಾಯಾವಿ ಮೋಸ ಮಾಡುವುದರಲ್ಲಿ, ಕದಿಯುವುದರಲ್ಲಿ ನಿಸ್ಸೀಮ. ಈ ಪದ್ಯದಲ್ಲಿ ಮಾಯಾವಿ ದರ್ಜಿ ಎಂದರೆ ಯಾರಿರಬಹುದು? ಉಡುಪನ್ನು ಸಿದ್ಧಪಡಿಸಲು ಮುಟ್ಟಿ ಅನುಭವಿಸಬಲ್ಲ ಬಟ್ಟೆ ಮಾತ್ರವಲ್ಲ ಮುಟ್ಟಿ ಅನುಭವಿಸಲಾರದ ಕಲ್ಪನೆಯೂ ಬೇಕು. ಒಂದು ಸಿಕ್ಕರೆ ಇನ್ನೊಂದನ್ನು ಹುದುಕಿಕೊಳ್ಳುತ್ತಾನೆ. ಎರಡೂ ಸಿಕ್ಕದ ದಿವಸ ಮಾಯಾವಿ ದರ್ಜಿಗೂ ಕಷ್ಟ. ಕವಿಯೂ ಒಂದು ಬಗೆಯ ಮಾಯಾವಿ ದರ್ಜಿಯೇ ಅಲ್ಲವೇ? ಪದಗಳು ಸಿಕ್ಕ ದಿವಸ ಕಲ್ಪನೆ ಸಿಗದಿರಬಹುದು. ಕಲ್ಪನೆ ಮೂಡಿದಾಗ ಪದಗಳು ಸಿಕ್ಕದೇ ಇರಬಹುದು!)
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ