ಹೊಸದಿನದೊಂದಿಗೆ
ಕವಿತೆ ಓದುವ ಮುನ್ನ ....
ಈ ಸಲದ ಜ್ಞಾನಪೀಠ ಪ್ರಶಸ್ತಿ ಪಡೆದ ಶ್ರೀ ಕೇದಾರನಾಥ್ ಸಿಂಗ್ (೧೯೨೪-) ಹಿಂದಿಯ ಪ್ರಮುಖ ಕವಿ, ಸಾಹಿತ್ಯ ವಿಮರ್ಶಕ ಮತ್ತು ಪ್ರಬಂಧಕಾರ. ಅವರ ಒಂದು ಕವಿತೆಯ ಕನ್ನಡ ಭಾಷಾಂತರವನ್ನು ಓದಿ. ಪ್ರತಿದಿನವೂ ನಮ್ಮ ಬಾಳಿನಲ್ಲಿ ಒಂದು ಹೊಸಪುಟವನ್ನು ತೆರೆಯುತ್ತದೆ. ಅದನ್ನು "ಪ್ರೇಮದ ಪುಟ" ಎಂದು ಕವಿ ಸ್ವಾಗತಿಸುತ್ತಾನೆ. ಹಿಂದೆ ಹೀಗೇ ಪ್ರಾರಂಭವಾದ ಎಷ್ಟೋ ಪುಟಗಳಲ್ಲಿ ಕಹಿನೆನಪುಗಳು ದಾಖಲಾಗಿರಬಹುದು. ಆದರೇನು? ಕವಿ ಆಶಾವಾದಿ - ಇಂದಿನ ಪುಟವು ಅಂತಹ ಅನಿಷ್ಟವಾದ ಪುಟಗಳ ನಡುವೆ ಹುದುಗಿಸಿಟ್ಟ ನವಿಲುಗರಿಯಂತೆ ಮೂಡಲಿ ಎಂಬುದು ಅವನ ಆಸೆ!
ಮೂಲ ಹಿಂದಿ ಕವಿತೆ - ಕೇದಾರನಾಥ್ ಸಿಂಗ್
ಕನ್ನಡಕ್ಕೆ - ಸಿ ಪಿ ರವಿಕುಮಾರ್
ಹೊಸದಿನದೊಂದಿಗೆ
ನಮ್ಮ ಪ್ರೀತಿಯ
ಮತ್ತೊಂದು ಖಾಲೀಪುಟ ಮಗುಚಿದೆ
ಓ ಬೆಳಗೇ,
ಇದರ ಮೇಲೆ ಎಲ್ಲಾದರೂ
ನಿನ್ನ ಹೆಸರನ್ನು ಬರೆದುಹೋಗಬಾರದೆ?
ಅನೇಕ ಅನಿಷ್ಟ ಪುಟಗಳ ನಡುವೆ
ಅದನ್ನೂ ಇಟ್ಟುಬಿಡುತ್ತೇನೆ.
ಬೀಸಿದ ಗಾಳಿ
ಏಕಾಏಕಿ ಕೆದರಿದಾಗ
ಒಳಗೆ ನವಿಲುಗರಿಯಂತೆ
ಬಚ್ಚಿಟ್ಟ ಆ ಹೆಸರನ್ನು
ಓದಿಕೊಳ್ಳುತ್ತೇನೆ ಪ್ರತಿಸಲವೂ
Kannada Translation of a Hindi poem by Kedarnath Singh
(c) 2014, C.P. Ravikumar
एक नये दिन के साथ
ಪ್ರತ್ಯುತ್ತರಅಳಿಸಿनये दिन के साथ
एक पन्ना खुल गया कोरा
हमारे प्यार का
सुबह,
इस पर कहीं अपना नाम तो लिख दो!
बहुत से मनहूस पन्नों में
इसे भी कहीँ रख दूंगा
और जब-जब हवा आकर
उड़ा जायेगी अचानक बन्द पन्नों को
कहीं भीतर
मोरपंखी का तरह रक्खे हुए उस नाम को
हर बार पढ़ लूंगा।