ಒಬ್ಬಂಟಿ
ಕವಿತೆ ಓದುವ ಮುನ್ನ
ಮಾಯಾ ಆಂಜೆಲೋ ಒಬ್ಬ ಕಪ್ಪು ಅಮೇರಿಕನ್ ಲೇಖಕಿ. ಎಂಬತ್ತಾರು ವರ್ಷಗಳ ತುಂಬು ಜೀವನ ನಡೆಸಿ ಮೇ ೨೮, ೨೦೧೪ ನಿಧನರಾದರು. ಐವತ್ತು ವರ್ಷಗಳು ದಾಟಿದ ತಮ್ಮ ಸಾಹಿತ್ಯಕ ವ್ಯವಸಾಯದಲ್ಲಿ ಅವರು ಕಾದಂಬರಿ, ಕವಿತೆ, ಪ್ರಬಂಧ, ಆತ್ಮಚರಿತ್ರೆ - ಈ ಎಲ್ಲಾ ಸಾಹಿತ್ಯ ಪ್ರಕಾರಗಳಲ್ಲೂ ಅದ್ಭುತವಾದ ಸಾಧನೆಗಳನ್ನು ಮಾಡಿದರು. ಅವರು ಮಾಡಿಲ್ಲದೇ ಇರುವ ಕೆಲಸವೇ ಇಲ್ಲ ಎನ್ನುವಂತಿದೆ ಅವರ ಜೀವನಚರಿತ್ರೆ! ಅಡಿಗೆಯವಳು, ವೇಶ್ಯೆ, ನೈಟ್ ಕ್ಲಬ್ ನರ್ತಕಿ, ಪತ್ರಕರ್ತೆ, ನಾಟಕಗಳ ನಿರ್ದೇಶಕಿ/ನಿರ್ಮಾಪಕಿ, ಪ್ರಾಧ್ಯಾಪಕಿ ... ಅರವತ್ತರ ದಶಕದಲ್ಲಿ ಅಮೆರಿಕಾದಲ್ಲಿ ನಡೆದ ಸಾರ್ವಜನಿಕ ಹಕ್ಕುಗಳಿಗಾಗಿ ಹೋರಾಟದಲ್ಲಿ ಅವರು ಸಕ್ರಿಯವಾಗಿ ಪಾಲ್ಗೊಂಡರು. ಕಪ್ಪು ಅಮೇರಿಕನ್ ಜನರ ನೋವುಗಳನ್ನು ಅವರು ತಮ್ಮ ಬರಹಗಳಲ್ಲಿ ಪ್ರತಿಧ್ವನಿಸಿದರು.
ಪ್ರಸ್ತುತ "ಒಬ್ಬಂಟಿ" ಕವಿತೆಯಲ್ಲಿ ಒಬ್ಬಂಟಿಯಾಗಿರುವ ಒಬ್ಬ ಕಪ್ಪು ಅಮೇರಿಕನ್ ಹೆಣ್ಣಿನ ಮನಸ್ಸಿನಲ್ಲಿ ಎದ್ದ ಭಾವನೆಗಳ ಚಿತ್ರವಿದೆ. ಬಹುಶಃ ತಮ್ಮ ಯೌವ್ವನದಲ್ಲಿ ಅನುಭವಿಸಿದ ಕಷ್ಟಗಳು ಕವಯಿತ್ರಿಗೆ ನೆನಪಾಗಿರಬಹುದು. ಈ ಹೆಣ್ಣು ಒಬ್ಬ ನೈಟ್ ಕ್ಲಬ್ ನರ್ತಕಿಯೋ ಅಥವಾ ವೇಶ್ಯೆಯೋ ಆಗಿರಬಹುದು. ಅಥವಾ ತನ್ನ ಗಂಡನ ನಡತೆಯಿಂದ ಬೇಸತ್ತು ಅವನಿಂದ ಬೇರಾದ ಹೆಣ್ಣಾಗಿರಬಹುದು. ಜೀವನದ ಬೇರೆ ಕಷ್ಟಗಳು ಎಷ್ಟೇ ಇದ್ದರೂ ಒಂಟಿತನವನ್ನು ಸಹಿಸುವುದು ಅಸಾಧ್ಯ ಎನ್ನುವ ಭಾವನೆ ಕವಿತೆಯಲ್ಲಿ ವ್ಯಕ್ತವಾಗಿದೆ. ಜೊತೆಗೇ ಅಮೇರಿಕನ್ ಸಮಾಜದಲ್ಲಿ ಬೆರೆಯಲಾಗದೆ ಒಬ್ಬಂಟಿತನ ಅನುಭವಿಸುವ ಕಪ್ಪು ಜನರ ವ್ಯಥೆಯೂ ಇಲ್ಲಿ ಅಭಿವ್ಯಕ್ತವಾಗಿರುವುದನ್ನು ಕೊನೆಯ ಚರಣದ ಸಾಲುಗಳಲ್ಲಿ ನೋಡಬಹುದು. ಇದನ್ನು ಓದಿದಾಗ ನಿಮಗೆ ನಿಸಾರ್ ಅಹಮದ್ ಅವರ "ನಿಮ್ಮೊಡನಿದ್ದೂ ನಿಮ್ಮಂತಾಗದೆ" ಕವಿತೆ ನೆನಪಾಗಬಹುದು.
ಒಬ್ಬಂಟಿ
ಮೂಲ ಅಮೇರಿಕನ್ ಕವಿತೆ: ಮಾಯಾ ಏಂಜೆಲೋ
ಮೂಲ ಅಮೇರಿಕನ್ ಕವಿತೆ: ಮಾಯಾ ಏಂಜೆಲೋ
ಕನ್ನಡಕ್ಕೆ: ಸಿ ಪಿ ರವಿಕುಮಾರ್
ಹಾಗೇ ಅಡ್ಡಾಗಿ ಯೋಚಿಸುತ್ತಿದ್ದೆ ನೆನ್ನೆ ರಾತ್ರಿ
ನನ್ನ ಆತ್ಮಕ್ಕೆ ಹೇಗೆ ಒದಗಿಸಿಕೊಡಲಿ ಒಂದು ಮನೆ
ಎಲ್ಲಿ ಬಾಯಾರಿಲ್ಲವೋ ನೀರು
ಬ್ರೆಡ್ ಎಲ್ಲಿ ಕಲ್ಲಾಗಿ ಕುಳಿತಿಲ್ಲವೋ
ಎಂದು ಆಲೋಚಿಸುತ್ತಾ
ಹೊಳೆಯಿತು ನನ್ನ ತಲೆಯಲ್ಲಿ ಆಗೊಂದು
ಅದು ನಿಜವೆಂದೇ ತೋರುತ್ತದೆ ನನಗಂತೂ:
ಏನೆಂದರೆ ಒಬ್ಬಂಟಿಯಾಗಿ ಯಾರೂ
ಇಲ್ಲಿ ಮಾಡಲಾರರು ಬದುಕು.
ಒಬ್ಬಂಟಿಯಾಗಿ ಯಾರೂ,
ಒಬ್ಬಂಟಿಯಾಗಿ ಯಾರೂ,
ಯಾರೂ ಅಂದರೆ ಯಾರೂ,
ಇಲ್ಲಿ ಮಾಡಲಾರರು ಬದುಕು.
ಕೆಲವರು ಶ್ರೀಮಂತರಿದ್ದಾರೆ
ಕೆಲವರು ಶ್ರೀಮಂತರಿದ್ದಾರೆ
ಧನವಿದ್ದರೂ ದರಿದ್ರರು
ಮೋಹಿನಿಯರಂತೆ ಓಡಾಡುವ ಅವರ ಹೆಂಡಂದಿರು
ಗೋಳುಕರೆ ಮಕ್ಕಳು
ಕಲ್ಲು ಹೃದಯವನ್ನು ಗುಣ ಮಾಡಲು
ಹಣ ಸುಲಿಯುವ ವೈದ್ಯರು
ಇಷ್ಟಾದರೂ ಬೇಡವೆಂದು
ಒಬ್ಬಂಟಿ ಜೀವನ ಮಾಡಲಾರರು ಆದರೂ.
ಒಬ್ಬಂಟಿಯಾಗಿ ಯಾರೂ,
ಒಬ್ಬಂಟಿಯಾಗಿ ಯಾರೂ,
ಯಾರೂ ಅಂದರೆ ಯಾರೂ,
ಇಲ್ಲಿ ಮಾಡಲಾರರು ಬದುಕು.
ಸರಿಯಾಗಿ ಕೇಳಿಸಿಕೊಳ್ಳುವಿರಾ?
ಸರಿಯಾಗಿ ಕೇಳಿಸಿಕೊಳ್ಳುವಿರಾ?
ಹೇಳುತ್ತೇನೆ ನನಗೆ ಗೊತ್ತಿರುವುದನ್ನು
ದಟ್ಟೈಸುತ್ತಿವೆ ಕಾರ್ಮೋಡ
ಬೀಸಲಿದೆ ಬಿರುಗಾಳಿ
ಸಂಕಟ ಪಡುತ್ತಿದೆ ಮಾನವಜಾತಿ
ಕೇಳುತ್ತಿದೆ ನೋವಿನ ಮುಲುಕು
ಏಕೆಂದರೆ ಯಾರೂ
ಒಬ್ಬಂಟಿ
ಇಲ್ಲಿ ಮಾಡಲಾರರು ಬದುಕು.
(c) 2014,C.P. Ravikumar
Picture courtesy - http://rochemamabolo.wordpress.com/
--
Kannada Translation of Maya Angelou's "Alone"(c) 2014,C.P. Ravikumar
Picture courtesy - http://rochemamabolo.wordpress.com/
Lying, thinking
ಪ್ರತ್ಯುತ್ತರಅಳಿಸಿLast night
How to find my soul a home
Where water is not thirsty
And bread loaf is not stone
I came up with one thing
And I don't believe I'm wrong
That nobody,
But nobody
Can make it out here alone.
Alone, all alone
Nobody, but nobody
Can make it out here alone.
There are some millionaires
With money they can't use
Their wives run round like banshees
Their children sing the blues
They've got expensive doctors
To cure their hearts of stone.
But nobody
No, nobody
Can make it out here alone.
Alone, all alone
Nobody, but nobody
Can make it out here alone.
Now if you listen closely
I'll tell you what I know
Storm clouds are gathering
The wind is gonna blow
The race of man is suffering
And I can hear the moan,
'Cause nobody,
But nobody
Can make it out here alone.
Alone, all alone
Nobody, but nobody
Can make it out here alone.
Maya Angelou