ಮಳೆಯಲ್ಲಿ ಪಯಣ - ಒಂದು ಗಜಲ್

ಸಿ.ಪಿ. ರವಿಕುಮಾರ್ 

ಮಳೆ ಬಂದರೆ ಕೊಳಕು ಕೆರೆಯಾಗುವ ರಸ್ತೆ
ಮತದಾರರಿಗೆ ಹೇಳುತ್ತಿದೆ ತಡೆತಡೆದು ನಮಸ್ತೆ

ತಟಸ್ಥವಾಗಿವೆ ಬಸ್ಸು ಮಿಸುಕಾಡವು ಕಾರು
ಚಲಿಸುವ ಪ್ರಯಾಸ ದ್ವಿಚಕ್ರ ವಾಹನಗಳದ್ದು ಅಷ್ಟೇ

ಅಲ್ಲೊಂದು ಮರ ಉರುಳಿದೆ ಇಲ್ಲೊಂದು ರೆಂಬೆ
ಎಲ್ಲೆಡೆಗಿಂತ ಇಂದು ಸ್ವಲ್ಪ ಹೆಚ್ಚಿನ ಅವ್ಯವಸ್ಥೆ

ಕುಟ್ಟುತ್ತಾರೆ ಹಾರ್ನ್ ಚಾಲಕರು ಏನೂ ತೋಚದಾದಾಗ
ಹೆಚ್ಚು ಮುಲುಗದು ನಗರ (ಅವಳು ನಿತ್ಯಸಂತ್ರಸ್ತೆ)

ರೇಡಿಯೋದಲ್ಲಿ ಅದೇ ಮುರುಕು ಸಂಗೀತ
ನಿಮ್ಮ ಮತ ಅಮೂಲ್ಯವೆಂದು ಹಾಡಿ ನೆನಪಿಸುತ್ತೆ

ಮೊಬೈಲ್ ಹಿಡಿದು ಕೈಯಲ್ಲಿ ಕುಳಿತಿರುವ ರವಿಗೆ
ಅತಿಬಳಕೆಯಿಂದ ಕೈ ಹೆಬ್ಬೆರಳು ನೋಯುತ್ತೆ

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

"ಬಾರಿಸು ಕನ್ನಡ ಡಿಂಡಿಮವ" - ಒಂದು ಮರು ಓದು

ಕರ್ನಾಟಕ ನಾಡಗೀತೆ - ಒಂದು ಸರಳ ಅರ್ಥವಿವರಣೆ

ಆಡು ಮುಟ್ಟದ ಸೊಪ್ಪಿಲ್ಲ (ಹರಟೆ)