ವೃಕ್ಷ - ಒಂದು ಕವಿತೆ
ಮೂಲ - ಜಾಯ್ಸ್ ಕಿಲ್ಮರ್
ಕನ್ನಡಕ್ಕೆ - ಸಿ. ಪಿ. ರವಿಕುಮಾರ್
ನನ್ನ ಕಣ್ಣಿಗಂತೂ ಬಿದ್ದಿಲ್ಲ ಇದುವರೆಗೆ
ವೃಕ್ಷದಂತಹ ಒಂದು ಸುಕುಮಾರ ಕವಿತೆ
ಹಸಿದ ಬಾಯಿಂದ ಕಚ್ಚಿಕೊಂಡಿಹುದು ವೃಕ್ಷ
ಸವಿಯೂಡುವ ಭೂತಾಯಿಯ ಸಮೃದ್ಧ ವಕ್ಷ
ದಿನವೆಲ್ಲ ಕಣ್ ಬಾನತ್ತ, ಭಗವಂತನ ವೀಕ್ಷಣೆ
ಎಲೆ ತುಂಬಿದ ತೋಳುಗಳ ಮೇಲೆತ್ತಿ ಪ್ರಾರ್ಥನೆ
ವೈಶಾಖದಲಿ ತರುವು ತಲೆಯಲ್ಲಿ ಮುಡಿಯುವುದು
ಗೊರವಂಕ ಕಾಜಾಣ ಹಕ್ಕಿಗಳ ಗೂಡು
ಯಾರ ವಕ್ಷಸ್ಥಳದಲ್ಲಿ ಹೊಳೆಯುವುದೋ ಹಿಮಮಣಿ
ಯಾರನ್ನು ರಮಿಸುವಳೋ ವರ್ಷಋತುರಮಣಿ
ಕವಿತೆಗಳ ರಚಿಸುವರು ನನ್ನಂಥ ಮೂರ್ಖರು
ದೇವನಿಂದ ಮಾತ್ರ ಸಾಧ್ಯ ಸೃಷ್ಟಿಸುವುದು ಈ ತರು!
ಇದು ಅನುವಾದವಾ?😱
ಪ್ರತ್ಯುತ್ತರಅಳಿಸಿ