ಹೋಳು

ಸಿ. ಪಿ. ರವಿಕುಮಾರ್ 


ಚಾಕು, ಚೂರಿ, ಮಚ್ಚು ...
ಹೋಳು ಮಾಡಲು 
ಎಷ್ಟು ಬಗೆ ಉಪಕರಣ
ಜಾತಿ, ಧರ್ಮ, ಭಾಷೆ, ಲಿಂಗ,
ಹೋಳಾಗಿದೆ ಜನಗಣ

ಕುದಿಯುತ್ತಿದೆ ಹಿಂಡಿದ ಹುಳಿಯಲ್ಲಿ
ಅರೆದ ಮಸಾಲೆ ಹೂರಣ
ಬೇಯುತ್ತಿದೆ ಕುದಿಯುತ್ತಿದೆ
ಚುನಾವಣಾ ರಣಾಂಗಣ
ಯಾವ ದೇವತೆಗೆ ಪ್ರೀತಿ
ಈ ಹೋಮ ಮಾರಣ?

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

"ಬಾರಿಸು ಕನ್ನಡ ಡಿಂಡಿಮವ" - ಒಂದು ಮರು ಓದು

ಕರ್ನಾಟಕ ನಾಡಗೀತೆ - ಒಂದು ಸರಳ ಅರ್ಥವಿವರಣೆ

ಆಡು ಮುಟ್ಟದ ಸೊಪ್ಪಿಲ್ಲ (ಹರಟೆ)