ವಿಜ್ಞಾನ ಕವಿತೆಗಳು - ೨
ಸಮಾನತೆ
ಇದನ್ನೋದುವ ನೀನು ಯಾರೇ ಆಗಿದ್ದರೂ
ನಿನ್ನ ವಂಶವಾಹಿಗೂ ನನ್ನ ವಂಶವಾಹಿಗೂ
ಸಮಾನತೆ ಶತಾಂಶ ತೊಂಬತ್ತೊಂಬತ್ತು
ನೀನು ನನ್ನ ತಂದೆಯೋ ಮಗನೋ ಆಗಿದ್ದರೆ
ತೊಂಬತ್ತೊಂಬತ್ತಕ್ಕೆ ಸೇರಿಸಿಕೋ
ಇನ್ನೊಂದು ಅರ್ಧ ಪರ್ಸೆಂಟು.
ಹೇಳಲೇ ನಿನಗೆ ಇನ್ನೊಂದು ಆಶ್ಚರ್ಯಕರ ವಿಷಯ?
ಕೇಳಿದರೆ ನೀನು ಹೌಹಾರುವೆ ನಿಶ್ಚಯ!
ಚಿಂಪಾಂಜಿಯ ವಂಶವಾಹಿಗೂ ನನ್ನ-ನಿನ್ನ ವಂಶವಾಹಿಗೂ
ಸಮಾನತೆ ಪರ್ಸೆಂಟ್ ತೊಂಬತ್ತೆಂಟು!
ಅದಕ್ಕೇ ಇರಬಹುದು ನಾವು ಕೆಲವೊಮ್ಮೆ
ನಿನ್ನ ವಂಶವಾಹಿಗೂ ನನ್ನ ವಂಶವಾಹಿಗೂ
ಸಮಾನತೆ ಶತಾಂಶ ತೊಂಬತ್ತೊಂಬತ್ತು
ನೀನು ನನ್ನ ತಂದೆಯೋ ಮಗನೋ ಆಗಿದ್ದರೆ
ತೊಂಬತ್ತೊಂಬತ್ತಕ್ಕೆ ಸೇರಿಸಿಕೋ
ಇನ್ನೊಂದು ಅರ್ಧ ಪರ್ಸೆಂಟು.
ಹೇಳಲೇ ನಿನಗೆ ಇನ್ನೊಂದು ಆಶ್ಚರ್ಯಕರ ವಿಷಯ?
ಕೇಳಿದರೆ ನೀನು ಹೌಹಾರುವೆ ನಿಶ್ಚಯ!
ಚಿಂಪಾಂಜಿಯ ವಂಶವಾಹಿಗೂ ನನ್ನ-ನಿನ್ನ ವಂಶವಾಹಿಗೂ
ಸಮಾನತೆ ಪರ್ಸೆಂಟ್ ತೊಂಬತ್ತೆಂಟು!
ಅದಕ್ಕೇ ಇರಬಹುದು ನಾವು ಕೆಲವೊಮ್ಮೆ
ಮರ್ಕಟದಂತೆ ಆಡುವುದುಂಟು!
ನಿಶಬ್ದ
ಮಾಧ್ಯಮವಿಲ್ಲದೆ ಆಗದು ಶಬ್ದ ಸಂಚಲನ
ಅನಿಲವೋ ದ್ರವವೋ ಅಥವಾ ಘನ
ಆಕಾಶಕಾಯಗಳಿಂದ ಭಯಂಕರ ಸದ್ದು
ಭೂಮಿಗೆ ಬರದಂತೆ ತಡೆ ಹಿಡಿದದ್ದು
ನಡುವಣ ವ್ಯೋಮವೇ! ಪುಣ್ಯಶಾಲಿ ಭುವನ!
ವಿದ್ಯುತ್ ಕಣಾ!
"ಉಜ್ಜಿದರೆ ಬಾಚಣಿಗೆ ಕೂದಲಿಗೆ ಸ್ಥಿರವಿದ್ಯುತ್ ಕಣ
ನೀಡುವುದು ಹಣಿಗೆಗೆ ಕ್ಷಣಕಾಲ ಆಕರ್ಷಣ ... "
ನೀಡುವುದು ಹಣಿಗೆಗೆ ಕ್ಷಣಕಾಲ ಆಕರ್ಷಣ ... "
"ಸರ್, ಇದನ್ನು ನೀವು ಪರೀಕ್ಷಿಸಿದ್ದೀರಾ?"
ಎಂದು ಕೇಳಿದನೊಬ್ಬ ಹಿಂದಿನ ಬೆಂಚ್ ಪೋರ
ನೋಡುತ್ತಾ ಗುರುಗಳ ಮಿಂಚುವ ತಲೆಯನ್ನ!
"ಅಂದಹಾಗೆ ಬಾಚಣಿಗೆಯೇ ಬೇಕು ಅಂತಿಲ್ಲ!
ದೊಣ್ಣೆಯೂ ಆದೀತು, ಬೇಕಾದರೆ ಉಜ್ಜಿ ತೋರಿಸಲಾ?
ಎಲ್ಲೋ, ಯಾರು ಕೇಳಿದ್ದು ಪ್ರಶ್ನೆ!
ಬೆಂಚಿನ ಮೇಲೆ ನಿಂತುಕೋ ಸುಮ್ಮನೆ!"
ಎಂದು ಪ್ರದರ್ಶಿಸಿದರು ಮೇಷ್ಟ್ರು ಎಲೆಕ್ಟ್ರೋಸ್ಟಾಟಿಕ್ ಲಾ
ಜಿರಾಫ್
ಎತ್ತರದ ಅಕೇಶಿಯಾ ಮರಗಳ ರಸಪೂರ್ಣ ಎಲೆ
ಹುಡುಕುತ್ತ ನಾಲಗೆಯಿಂದ ಸೆಳೆದುಕೊಳ್ಳುವ ಕಲೆ
ಸಿದ್ಧಿಸಿರುವ ಜಿರಾಫ್ ಬಾಯಲ್ಲಿದೆ ರಹಸ್ಯವೊಂದು!
ಗೊತ್ತಾ ಅದರ ನಾಲಗೆ ನೀಲನೇರಳೆ ಬಣ್ಣದ್ದೆಂದು?
ನಾಲಗೆಯ ಮೆಲನಿನ್ ರಕ್ಷಿಸುತ್ತದೆ ಬಾಧಿಸದಂತೆ ಕಿರಣ ಅತಿನೇರಳೆ!
ಕಾಣೆಯಾದ ಅಕ್ಷರ!
ಪೀರಿಯಾಡಿಕ್ ಟೇಬಲ್ ಅಥವಾ
ಆವರ್ತಕ ಕೋಷ್ಠಕದ ಕಡೆ ನೋಡು
ಕಾಣುವುದಲ್ಲವೇ ಇಂಗ್ಲಿಷ್ ಅಕ್ಷರಗಳ
ವಿಚಿತ್ರ ವಿಲಕ್ಷಣ ಜೇನುಗೂಡು!
ಇಪ್ಪತ್ತಾರರಲ್ಲಿ ಒಂದು ಅಕ್ಷರ ಮಾತ್ರ
ಜೇನುಗೂಡಿನಲ್ಲಿ ವಹಿಸಿಲ್ಲ ಪಾತ್ರ
ಯಾವುದು ಈ ಅಕ್ಷರ? ನಿನಗೆ ಗೊತ್ತೇನು?
ಹೇಳಿದರೆ ನಿನಗೆ ಸಿಕ್ಕುವುದು "ಜೇನು!"
ಕಡ್ಡಿ ಪೈಲ್ವಾನ್
ಇಂಗಾಲ ಎಷ್ಟಿದೆ ನಿನ್ನ ದೇಹದಲ್ಲಿ ಗೊತ್ತಿದೆಯೇ?
ಅಂಗಾರದಂತೆ ಸುಟ್ಟು ಕಪ್ಪಾಗಿಸಿದರೆ ೯೦೦೦ ಪೆನ್ಸಿಲಿನಷ್ಟು!
ಹೆಂಗೆ ಕಂಡುಹಿಡಿದನು ಈ ಮಾಹಿತಿಯನು, ವಿಜ್ಞಾನಿ?
ಕಂಗಾಲಾಗಿರುವೆ ಯೋಚಿಸುತ್ತ ಮಂಕುತಮ್ಮ ।।
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ