ಗೋಪಿಹಕ್ಕಿ
ನೀಲಮೇಘನ ಘನನೀಲವರ್ಣ
ತುಂಬಿತ್ತು ಕಣ್ಣುಗಳಲ್ಲಿ
ಗೋಪಾಲನ ಮುರಳೀಗಾನ
ತುಂಬಿತ್ತು ಕಿವಿಗಳಲ್ಲಿ.
ತುಂಬಿತ್ತು ಕಣ್ಣುಗಳಲ್ಲಿ
ಗೋಪಾಲನ ಮುರಳೀಗಾನ
ತುಂಬಿತ್ತು ಕಿವಿಗಳಲ್ಲಿ.
ಬಿಕೋ ಎನ್ನುತ್ತಿತ್ತು ಬೃಂದಾವನ
ಕೊಲ್ಲುತ್ತಿತ್ತು ಶ್ಯಾಮನ ಪ್ರಸ್ಥಾನ.
ತಾಳಲಾರದೆ ವಿರಹ, ರಾಧೆ,
ನೀಲಬಣ್ಣದ ಗೋಪಿಹಕ್ಕಿಯಾದೆ!
ಎಂದೋ ನೀನು ಸ್ವರವೆತ್ತಿ ಹಾಡಿದಾಗ
ಕೇಳುತ್ತದೆ ಮುರಳೀಧರನ ಮೋಹನರಾಗ.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ