ಸಂಕ್ರಾಂತಿಯ ಸವಿ (ಹನಿಗವಿತೆಗಳು)

(೧)

ತಿಂದು ಸೆಸಮೀ ಸೀಡ್ ಮತ್ತು ಜ್ಯಾಗರಿ
ಹೊಟ್ಟೆಯಲ್ಲಿಲ್ಲವೇ ಇಲ್ಲ ಸ್ವಲ್ಪವೂ ಜಾಗ ರೀ
ಆದರೂ ಹೆಂಡತಿ ತಂದಾಗ ಪೊಂಗಲ್
ಬೇಡ ಎನ್ನದೆ ಹೇಗೋ ಕಷ್ಟಪಟ್ಟು ನುಂಗಲ್
ಮಾಡುವನು ಗಂಡ ಪಾಪ ಎಷ್ಟೊಂದು ತ್ಯಾಗ ರೀ


(೨)

ಬೀರುತ್ತಿದ್ದರು ಹಿಂದೆಲ್ಲ
ನಾರಿಯರು ಎಳ್ಳುಬೆಲ್ಲ
ಇಂಟರ್ನೆಟ್ ತಂತ್ರಜ್ಞಾನ ತಂದಿದೆ ಡೈವರ್ಸಿಟಿ
ನಾರಿಯರಿಗೆ ನರರೂ ನೀಡುತ್ತ ಪೈಪೋಟಿ
ಬೀರುತ್ತಿದ್ದಾರೆ ಸೆಸಮೀ ಸೀಡ್-ಜ್ಯಾಗರಿಗಳ ಮೇಳ


(೩)

ಎಳ್ಳಿನೊಲು ಸ್ನೇಹಮಯವಾಗಿರಲಿ ಈ ಬಾಳು
ಬೆಲ್ಲದೊಲು ಸಿಹಿಯಾಗಿರಲಿ! ಎಂದೆಂದಿಗೂ ।
ನಿಲ್ಲುವುದು ಹೇಗೋ ಎಳ್ಳು-ಬೆಲ್ಲಗಳ ಸವಿಸ್ನೇಹ
ಪಲ್ಲವಿಸಲಿ ಹಾಗೆ ಬಾಳ್, ಮಂಕುತಮ್ಮ ।।



ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

"ಬಾರಿಸು ಕನ್ನಡ ಡಿಂಡಿಮವ" - ಒಂದು ಮರು ಓದು

ಕರ್ನಾಟಕ ನಾಡಗೀತೆ - ಒಂದು ಸರಳ ಅರ್ಥವಿವರಣೆ

ಆಡು ಮುಟ್ಟದ ಸೊಪ್ಪಿಲ್ಲ (ಹರಟೆ)