ನೀಡೌ, ವೀಣಾವಾದಿನಿ, ವರವ!

ಮೂಲ - ಸೂರ್ಯಕಾಂತ ತ್ರಿಪಾಠಿ "ನಿರಾಲಾ"
ಕನ್ನಡಕ್ಕೆ - ಸಿ. ಪಿ. ರವಿಕುಮಾರ್ 


Image result for saraswati
ನೀಡೌ, ವೀಣಾವಾದಿನಿ, ವರವ!
ನವಸ್ವಾತಂತ್ರ್ಯದ  ಅಮೃತಮಂತ್ರವು 
ತುಂಬುವಂತೆ ಭಾರತವ!

ಸೀಳಿ ಅಂಧಕಾರದ ಎದೆಯನ್ನು 
ಹರಿಸು ತಾಯೆ ಜ್ಯೋತಿರ್ಮಯವನ್ನು 
ಭೇದವೆಂಬ ತಮವನು ಕತ್ತರಿಸಿ 
ಎಲ್ಲೆಡೆ ಜ್ಞಾನಪ್ರಕಾಶವ ಹರಿಸಿ
ಬೆಳಗು ನಮ್ಮ ಮಾನಸವ!

ಹೊಸ ತಾಳ-ಸ್ವರ-ರಾಗ-ಲಯಗಳು 
ಕಂಠವು ಮರಿಮೋಡದ ಗುಡುಗಿನೊಲು,
ನೀಡೌ ಆಕಾಶದ ತುದಿಯೊಳಗೆ  
ರೆಕ್ಕೆಯೊಡೆದು ಹಾರುವ ಖಗಗಳಿಗೆ 
ಮಾಡಲಿ ಶುಭ ಕಲರವವ! 

ನೀಡೌ, ವೀಣಾವಾದಿನಿ, ವರವ!


(ಹಿಂದಿಯ ಪ್ರಸಿದ್ಧ ಕವಿ "ನಿರಾಲಾ" ಅವರು ಬರೆದ ಈ ಸರಸ್ವತಿವಂದನೆಯನ್ನು  ಅನೇಕ ಕಲಾವಿದರು ಹಾಡಿದ್ದಾರೆ. ನಿಮಗೆ ಯೂಟ್ಯೂಬಿನಲ್ಲಿ ಧ್ವನಿಮುದ್ರಿಕೆಗಳು ಸಿಕ್ಕುತ್ತವೆ. ಭಾರತಕ್ಕೆ ಸ್ವಾತಂತ್ರ್ಯಪ್ರಾಪ್ತಿಯಾದಾಗ ಬರೆದ ಈ ಕವಿತೆಯಲ್ಲಿ ಭಾರತವನ್ನು ಕುರಿತು ಕವಿಯ ಕನಸುಗಳಿವೆ.) 


ಕಾಮೆಂಟ್‌ಗಳು

ಕಾಮೆಂಟ್‌‌ ಪೋಸ್ಟ್‌ ಮಾಡಿ

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

"ಬಾರಿಸು ಕನ್ನಡ ಡಿಂಡಿಮವ" - ಒಂದು ಮರು ಓದು

ಕರ್ನಾಟಕ ನಾಡಗೀತೆ - ಒಂದು ಸರಳ ಅರ್ಥವಿವರಣೆ

ಆಡು ಮುಟ್ಟದ ಸೊಪ್ಪಿಲ್ಲ (ಹರಟೆ)