ಕವಿ

ಕವಿ 

ಮೂಲ: ಟಾಮ್ ವೇಮನ್  (ಅಮೆರಿಕಾ ಸಂಸ್ಥಾನ) 
ಕನ್ನಡಕ್ಕೆ: ಸಿ. ಪಿ. ರವಿಕುಮಾರ್ 

ಕಾರ್ಯಸೂಚಿಯಲ್ಲಿ ಎಲ್ಲಿದ್ದೆನೆಂದು ಮರೆತುಬಿಡುತ್ತಾನೆ
ಪುಸ್ತಕದ ಯಾವ ಪುಟದಲ್ಲಿದ್ದೆ ಮರೆಯುತ್ತಾನೆ
ಬಹಳ ಮಾತಾಡುತ್ತಾನೆ, ಆದರೆ ಬಹಳಷ್ಟುಅಸಂಬದ್ಧ
ನಿಖರವಾದ ಮೌಖಿಕ ಸೂಚನೆಗಳನ್ನು ಕೊಡಲಾರ.
ಓದಿದ್ದು ಅರ್ಥವಾಗುವುದಿಲ್ಲ
ಕೇಳಿದ್ದು ಅರ್ಥವಾಗುವುದಿಲ್ಲ
"ಹೌದು-ಇಲ್ಲ" ಪ್ರಶ್ನೆಗಳಿಗೆ ಉತ್ತರಿಸಲಾರ.

ಗಾದೆಗಳನ್ನು ಅರ್ಥೈಸಲು ಹೆಣಗುತ್ತಾನೆ
ಬೆಳಗ್ಗೆ ಏನು ತಿಂದೆ ಎಂಬುದು ನೆನಪಿರುವುದಿಲ್ಲ
ಚಿತ್ರ ತೋರಿಸಿದರೆ ಕತೆ ಹೇಳಲಾರ
ದೃಶ್ಯದಲ್ಲಿ ಅಸಾಂಗತ್ಯಗಳನ್ನು ಕಂಡುಹಿಡಿಯಲಾರ


ವಸ್ತುಗಳನ್ನು ಗುರುತಿಸಿ ವರ್ಗೀಕರಿಸಲು ಒದ್ದಾಡುತ್ತಾನೆ 
ಕೂಡುವುದು, ಕಳೆಯುವುದು, ಮಗ್ಗಿ ಎಂದರೆ ತತ್ತರಿಸುತ್ತಾನೆ 
ಒಂದು ಪದವನ್ನು ಇವತ್ತು ಗುರುತಿಸಿದರೆ ನಾಳೆ ಮರೆತಿರುತ್ತಾನೆ. 

ಕವಿತೆಯ ಸ್ವಾರಸ್ಯ: ಒಬ್ಬ ಮನಃಶಾಸ್ತ್ರಜ್ಞನ ಬಳಿ ಕವಿಯನ್ನು ಕಳಿಸಿದರೆ ಅವನು ಬರೆಯಬಹುದಾದ ರಿಪೋರ್ಟ್ ಹೀಗಿರಬಹುದು! ಕವಿಯು ನೋಡುವ ಜಗತ್ತು ಮತ್ತು ಇತರರು ನೋಡುವ ಜಗತ್ತು ತೀರಾ ಭಿನ್ನ.  ಕಾಗೆಯು ನೀರಿನ ಹೂಜಿಯಲ್ಲಿ ಕಲ್ಲು ಹಾಕುವ ಚಿತ್ರ ತೋರಿಸಿದರೆ ಕವಿಗೆ  ಅದರಲ್ಲಿ ಬೇರೇನೋ ಕಾಣಿಸಬಹುದು! ಮೀನು ಹಾರಾಡುವ ಚಿತ್ರದಲ್ಲೂ ಅವನಿಗೆ ತಪ್ಪು ಕಾಣಿಸಲಾರದು - ಏಕೆಂದರೆ ಅವನ ಜಗತ್ತಿನಲ್ಲಿ ಮೀನಿಗೂ ಹಾರಾಡುವ ಹಕ್ಕಿದೆ!  ಹೀಗೆ ಕವಿಯ ಮಾತುಗಳು ಅಸಂಬದ್ಧ, ಅಸಂಗತ ಎನ್ನಿಸುವುದು ಸಹಜ! ಲಾಜಿಕ್ ಮೂಲಕ ಜಗತ್ತನ್ನು ನೋಡುವವರಿಗೆ ಕವಿ ಅರ್ಥವಾಗುವುದಿಲ್ಲ!



ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

"ಬಾರಿಸು ಕನ್ನಡ ಡಿಂಡಿಮವ" - ಒಂದು ಮರು ಓದು

ಕರ್ನಾಟಕ ನಾಡಗೀತೆ - ಒಂದು ಸರಳ ಅರ್ಥವಿವರಣೆ

ಆಡು ಮುಟ್ಟದ ಸೊಪ್ಪಿಲ್ಲ (ಹರಟೆ)