ಜಯ ಭಾರತೀ ವಸುಂಧರೆ!



ಮೂಲ ಹಿಂದಿ ಕವಿತೆ - ಸೂರ್ಯಕಾಂತ ತ್ರಿಪಾಠಿ  ನಿರಾಲಾ 

ಜಯ ಭಾರತೀ ವಸುಂಧರೆ,
ಕನಕ-ಸಸ್ಯ-ಕಮಲಧರೆ! 

ಶ್ರೀಲಂಕೆಯ ಪದತಲ, ಪದ್ಮಪೀಠ  ಶತದಳ 
ಪೂಜ್ಯ ಚರಣ ಯುಗಳವ,  ಸ್ತುತಿಸಿ ಶುಭ್ರಗೊಳಿಸುವ 
ನೀಲಕಡಲ ಹೆದ್ದೆರೆ! 


ವನ-ಉಪವನ-ತರುಲತೆ ಸಸ್ಯವಸನ ಶೋಭಿತೆ
ಕೊರಳಿನಲ್ಲಿ ಫಳಫಳ ಗಂಗೆಯ ಜ್ಯೋತಿರ್ಜಲ
ಹಾರದಂತೆ ಹೊಳೆದಿದೆ!

ಮುಕುಟ ಶುಭ್ರ ಹಿಮ-ತುಷಾರ, ಪ್ರಾಣ ಪ್ರಣವ ಓಂಕಾರ
ಗೊಳ್ಳುತಿಹುದು ಅನುರಣ, ಕೋಟಿಕೋಟಿ ಹೃನ್ಮನ 
ಒಂದು ಕೊರಳು, ಒಂದೆದೆ!


(ಚಿತ್ರ - ವಿಕಿಪೀಡಿಯಾ) 

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

"ಬಾರಿಸು ಕನ್ನಡ ಡಿಂಡಿಮವ" - ಒಂದು ಮರು ಓದು

ಕರ್ನಾಟಕ ನಾಡಗೀತೆ - ಒಂದು ಸರಳ ಅರ್ಥವಿವರಣೆ

ಆಡು ಮುಟ್ಟದ ಸೊಪ್ಪಿಲ್ಲ (ಹರಟೆ)