ಮೃತ್ಯುಶಯ್ಯೆಯಲ್ಲಿ
ಇದನ್ನು ಕ್ಸು ಲಿಷೀ ಬರೆದದ್ದು ಸೆಪ್ಟೆಂಬರ್ ೩೦, ೨೦೧೪. ಅದೇ ಅವನ ಕೊನೆಯ ಕವಿತೆ. ಅದೇ ದಿವಸ ಅವನು ಫ್ಯಾಕ್ಟರಿ ಕಟ್ಟಡದಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡ. ಮೃತ್ಯುಶಯ್ಯೆಯಲ್ಲಿ ಮತ್ತೊಮ್ಮೆ ಕಡಲನ್ನು ನೋಡಬೇಕೆನ್ನಿಸುತ್ತಿದೆ. ಅರ್ಧ ಜೀವಮಾನದ ಕಂಬನಿ ತುಂಬಿದ ಅಗಾಧತೆಯನ್ನು ತುಂಬಿಕೊಳ್ಳಲು ಕಣ್ಣೊಳಗೆ. ಹತ್ತಬೇಕೆನ್ನಿಸುತ್ತಿದೆ ಬೇರಾವುದಾದರೂ ಬೆಟ್ಟ, ಕೂಗಿ ಕರೆಯಬೇಕೆನ್ನಿಸುತ್ತಿದೆ ನಾನು ಕಳೆದುಕೊಂಡ ಆತ್ಮ. ಆಗಸವನ್ನು ಮುಟ್ಟಿ ಅನುಭವಿಸಬೇಕೆನ್ನಿಸುತ್ತಿದೆ ಅದರ ಹಗುರ ನೀಲಿಯನ್ನು. ಮಾಡಲಾರೆ ಇದಾವುದನ್ನೂ ಎಂಬ ಕಾರಣಕ್ಕೇ ಜಗತ್ತನ್ನು ಬಿಟ್ಟು ಹೊರಟಿರುವೆ. ನನ್ನನ್ನು ಬಲ್ಲವರಿಗೆ ನನ್ನ ನಿರ್ಗಮನ ಆಶ್ಚರ್ಯ ತರಕೂಡದು. ಯಾರ ಎದೆಗೂ ತರಕೂಡದು ದುಃಖ, ಕಣ್ಣಿನಲ್ಲಿ ತರಬಾರದು ನೀರು. ಬರುವಾಗ ನಾನು ಭೇಷಾಗಿದ್ದೆ, ಹೋಗುವಾಗಲೂ ಚೆನ್ನಾಗೇ ಹೋಗುತ್ತಿರುವೆ. ಸಂಘರ್ಷ ಇವನು ಹೆಚ್ಚು ಮಾತಾಡುವುದಿಲ್ಲ ಎನ್ನುತ್ತಾರೆ ಎಲ್ಲರೂ ನನ್ನನ್ನು ಕುರಿತು. ನಾನು ಅಲ್ಲಗಳೆಯುವುದಿಲ್ಲ. ಮಾತನಾಡುವೆನೋ ಇಲ್ಲವೋ ಸಮಾಜದೊಂದಿಗೆ ಖಂಡಿತಾ ಹೂಡುತ್ತೇನೆ ಸಂಘರ್ಷ ಅದರೊಂದಿಗೆ. ಇನ್ನೂ ಮುಗಿದಿಲ್ಲ ನನ್ನ ಬಾಳ ಪಯಣ ...